Advertisement
· ತುಳಸಿ ಅತಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶುದ್ದ ಗಾಳಿಯ ಸೇವನೆಗೆ ಸಹಕಾರಿ· ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು ಜ್ವರದ ಸಂದರ್ಭದಲ್ಲಿ ಇದರು ರಸವನ್ನು ಸೇವಿಸುವುದರಿಂದ ಜ್ವರ ಬೇಗನೆ ಶಮನವಾಗುತ್ತದೆ.
· ಅಸ್ತಮಾ ರೋಗವನ್ನು ಹೋಗಲಾ ಡಿಸುವಲ್ಲಿಯೂ ತುಳಸಿ ಪರಿಣಾಮಕಾರಿ. ಇದರಲ್ಲಿರುವ ಖನಿಜಾಂಶಗಳು ಉಸಿರಾಟದ ಸಮಸ್ಯೆಗೆ ಪರಿಹಾರವಾಗುತ್ತವೆ.
· ವಿಟಮಿನ್ ಸಿ ಹೇರಳವಾಗಿರುವ ಒಂದು ಸಸ್ಯ ತುಳಸಿ. ಶ್ವಾಸಕೋಶದ ಸಮಸ್ಯೆಯಿದ್ದವರು ಎಲೆಯ ಬಳಕೆಯನ್ನು ಮಾಡುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
· ಕಿಡ್ನಿ ಸ್ಟೋನ್ ಸಮಸ್ಯೆಯಿರುವವರು ತುಳಸಿ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ 6 ತಿಂಗಳು ಸೇವಿಸಿದರೆ ಸಮಸ್ಯೆ ದೂರವಾಗುತ್ತದೆ.
· ತುಳಸಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಆರೋಗ್ಯವಂತ ವ್ಯಕ್ತಿಯೊಬ್ಬ ದಿನಕ್ಕೆರಡು ಬಾರಿ 12 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಒತ್ತಡ ದೂರವಾಗುತ್ತದೆ.
· ತುಳಸಿ ಕಾಂಡವನ್ನು ಹುಡಿಮಾಡಿ ರಾತ್ರಿ ನೀರಿಗಡ ಬೆರೆಸಿಟ್ಟು ಬೆಳಗ್ಗೆ ಸೇವಿಸುವುದರಿದ ಡಯಾಬಿಟಿಸ್‌ನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.