Advertisement
ನಿಲ್ದಾಣದ ಮೂರು ಫ್ಲಾಟ್‌ಫಾರಂಗಳಲ್ಲಿ ಪೂರ್ಣವಾದ ಮೇಲ್ಛಾವಣಿ ಇಲ್ಲ. ಇಪ್ಪತ್ನಾಲ್ಕು ಬೋಗಿಗಳಿರುವ ರೈಲಿನ ಕೇವಲ 12 ಬೋಗಿಗಳು ನಿಲ್ಲುವ ಜಾಗಕ್ಕಷ್ಟೇ ಮೇಲ್ಛಾವಣಿ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಮಳೆ – ಬಿಸಿಲಿನಿಂದ ರಕ್ಷಿಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಇಲ್ಲ.
ಮಂಗಳೂರು- ಬಾಂಬೆಗೆ ತೆರಳುವ ಮತ್ಸ್ಯಗಂಧ ಎಕ್ಸ್‌ಪ್ರೆಸ್, ಮಂಗಳೂರು-ಕಾರವಾರಕ್ಕೆ ತೆರಳುವ ಕಾರವಾರ ರೈಲು, ಮಂಗಳೂರು – ಗೋವಾಕ್ಕೆ ಹೋಗುವ ಇಂಟರ್‌ಸಿಟಿ ರೈಲಿಗಳಿಗೆ ಇಲ್ಲಿ ಸ್ಟಾಪ್ ಇಲ್ಲ. ಹೀಗಾಗಿ ಪ್ರಯಾಣಿಕರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳಬೇಕಿದೆ. ನೇರ ಬಸ್ ಸಂಪರ್ಕವಿಲ್ಲ
ರೈಲ್ವೇ ಜಂಕ್ಷನ್ ನಗರದಿಂದ ದೂರವಿರುವ ಕಾರಣ ನಿಲ್ದಾಣಕ್ಕೆ ನೇರ ಬಸ್ ಸಂಪರ್ಕವಿಲ್ಲ. ಬಜಾಲ್‌ಗೆ ತೆರಳುವ ಬಸ್ ಅಥವಾ ಬೇರೆ ಮಾರ್ಗ ವಾಗಿ ತೆರಳುವ ರಸ್ತೆಯಲ್ಲಿ ಹೋಗಿ ಬಳಿಕ ನಡೆದೇ ಹೋಗಬೇಕಾದ ಸ್ಥಿತಿಯುಂಟಾಗಿದೆ. ಪ್ರಯಾಣಿಕರು ರೈಲು ಇಲಾಖೆ ನಿರ್ಮಿಸಿದ ರಸ್ತೆಗಿಂತ ನಿಲ್ದಾಣದ ಪಕ್ಕದಲ್ಲಿ ಹಾದುಹೋಗುವ ಖಾಸಗಿ ರಸ್ತೆಯನ್ನೇ ಅವಲಂಬಿಸಿದ್ದಾರೆ. ಕಾರಣ ಇಲಾಖೆಯ ರಸ್ತೆ 2 ಕಿ.ಮೀ ದೂರ ಹೆಚ್ಚಿದೆ. ಖಾಸಗಿ ರಸ್ತೆಯಲ್ಲಿ ಬಂದರೆ ಅಷ್ಟೊಂದು ದೂರವಿಲ್ಲ. ಸಮಯ, ಹಣ ಉಳಿತಾಯವಾಗುತ್ತದೆ ಎಂಬುದು ಪ್ರಯಾಣಿಕರ ಲೆಕ್ಕಾಚಾರ.
Related Articles
Advertisement
ರಿಕ್ಷಾ ಚಾಲಕರದ್ದೇ ಕಾರುಬಾರು ರೈಲು ನಿಲ್ದಾಣಕ್ಕೆ ನೇರ ಬಸ್ ಸಂಪರ್ಕ ಇಲ್ಲದ ಕಾರಣ, ರಿಕ್ಷಾ ಚಾಲಕರು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಾರೆ ಎಂಬ ಆರೋಪ ಪ್ರಯಾಣಿಕರದ್ದು. ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಸೌಲಭ್ಯವಿಲ್ಲ. ಪ್ರಿ ಪೇಯ್ಡ್ ಆಟೋ ಸೌಲಭ್ಯವನ್ನು ಶೀಘ್ರವೇ ಕಲ್ಪಿಸಲಾಗುವುದು ಎಂಬುದು ಪೊಲೀಸರು ನೀಡುವ ಮಾಹಿತಿ. ವಿಶ್ರಾಂತಿ ಕೊಠಡಿ ಇಲ್ಲ
ರೈಲು ನಿಲ್ದಾಣಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಇಲ್ಲ. ಹಾಗಾಗಿ ಅದೇ ಕೊಠಡಿಯಲ್ಲಿ ಪುರುಷರೂ ಮಹಿಳೆಯರೂ ತಂಗಬೇಕಿದೆ. ಎಟಿಎಂ ಇಲ್ಲ
ನಗರದಿಂದ ಸ್ವಲ್ಪ ದೂರವಿರುವ ರೈಲು ನಿಲ್ದಾಣಕ್ಕೆ ಖಾಲಿ ಕೈಯಲ್ಲಿ ಬಂದರೆ ಕಷ್ಟ. ರೈಲು ನಿಲ್ದಾಣ ಹಾಗೂ ಅದರ ಸುತ್ತಮುತ್ತ ಸುಮಾರು 3 ಕಿ.ಮೀಗಳಲ್ಲಿ ಎಟಿಎಂ ಇಲ್ಲ. ರಿಕ್ಷಾ ಹಾಗೂ ರೈಲು ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ಕಾರ್ಡ್‌ಗಳು ಬಳಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.ಇದರೊಂದಿಗೆ ನಿಲ್ದಾಣಗಳಲ್ಲಿ ಯಾವುದೇ ಮಾಹಿತಿ ಬೇಕಾದರೂ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುವ ಸಿಬಂದಿ ಇಲ್ಲ ಎಂಬ ಆರೋಪವೂ ಸ್ಥಳೀಯರದ್ದು. – ಪ್ರಜ್ಞಾ ಶೆಟ್ಟಿ