ನಾಂದಿ ಹಾಡಿದ ಜಗಜ್ಯೋತಿ ಬಸವೇಶ್ವರ ಹೆಸರನ್ನು ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಘೋಷಣೆ
ಮಾಡಬೇಕೆಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ, ಹಿರಿಯ ಜಾನಪದ ವಿದ್ವಾಂಸ ಡಾ| ಗೊ.ರು.
ಚನ್ನಬಸಪ್ಪ ಆಗ್ರಹಿಸಿದರು.
Advertisement
ಶುಕ್ರವಾರ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ಕಟ್ಟಡದ ಅನುಭವ ಮಂಟಪದಲ್ಲಿ ಶ್ರೀ ಗಳಂಗಳಪ್ಪ ಪಾಟೀಲ ಬಸವಾದಿಶರಣ ಸಾಹಿತ್ಯ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಯುವಕರಿಗಾಗಿ ವಚನ ಸಾಹಿತ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಲ್ಲಿಸಬೇಕು ಎಂದು ಸಲಹೆ ನೀಡಿದರು. ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಬಹುತೇಕ ಕ್ರಿಮಿನಲ್ ವ್ಯಕ್ತಿಯುಳ್ಳ ಹೆಸರಿಡಲಾಗಿದೆ. ಬದಲಾಗಿ 30 ಜಿಲ್ಲೆಗಳ ಹೆಸರಿಟ್ಟರೆ ಆ ಜಿಲ್ಲೆಯ ಜನರಿಗೆ ಹೆಚ್ಚಿನ ಖುಷಿ ತರುತ್ತದೆ. ಕನ್ನಡಿಗರನ್ನು ಒಡೆದಾಳುವ ನೀತಿ ಸರ್ಕಾರಗಳದ್ದಾಗಿದೆ. ಈಗ ವೀರಶೈವ-ಲಿಂಗಾಯತ್ ಯುದ್ಧ ಆರಂಭವಾಗಿದೆ ಎಂದು ಹೇಳಿದರು. ವಚನಕಾರರು ತೋರಿದ ಕಾಯಕದ ಪರಿಕಲ್ಪನೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಯುವಕರ ಜೀವನ ಜಾಗೃತಾವಸ್ಥೆಯಿಂದ ಕೂಡಬೇಕಾದರೆ ಕಾಯಕದಲ್ಲಿ ತೊಡಗಿರಬೇಕು. ರಾಜಕೀಯ ವ್ಯವಸ್ಥೆ ಯುವ ಜನಾಂಗದ ದಾರಿ ತಪ್ಪಿಸುವಂತಿದೆ. ವಚನಗಳನ್ನು ನಾಮಾಂಕಿತಗಳನ್ನು ಮೀರಿ ಓದಿದಾಗ ಮಾತ್ರ ನಿಜಾರ್ಥದ ಅರಿವು ಉಂಟಾಗುತ್ತದೆ. ಇಲ್ಲದಿದ್ದರೆ ಪೂರ್ವಗ್ರಹ ಉಂಟಾಗುತ್ತದೆ ಎಂದು ಹೇಳಿದರು.
Related Articles
ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು. ಬಸವಾದಿ ಶರಣ ಸಾಹಿತ್ಯ ಕೇಂದ್ರದ ದಾಸೋಹಿ ಬಿ.ಜಿ. ಪಾಟೀಲ, ಯುವ ಮುಖಂಡ ಚಂದು ಪಾಟೀಲ, ಕುಲಸಚಿವ ದಯಾನಂದ ಅಗಸರ, ಗುವಿವಿ ಸಿಂಡಿಕೇಟ್ ಸದಸ್ಯ ಚಂದ್ರಶೇಖರ ನಿಟ್ಟೂರೆ, ವಿತ್ತಾಧಿಕಾರಿ
ಪ್ರೊ| ಲಕ್ಷ್ಮಣ ರಾಜನಾಳಕರ್, ಪ್ರೊ| ಎಚ್.ಟಿ.ಪೋತೆ, ಪ್ರೊ| ಪರಿಮಳಾ ಅಂಬೇಕರ್ ಮುಂತಾದವರಿದ್ದರು. ಕೇಂದ್ರದ ನಿರ್ದೇಶಕಿ
ಡಾ| ಜಯಶ್ರೀ ದಂಡೆ ಪ್ರಾಸ್ತಾವಿಕ ಮಾತನಾಡಿದರು. ಡಾ| ಗಿರಿಗೌಡ ಅರಳಿಹಳ್ಳಿ, ಡಾ| ಶಿವಲೀಲಾ ಶೀಲವಂತ ನಿರೂಪಿಸಿದರು. ಪೂಜಾ ವಚನ ಪ್ರಾರ್ಥಿಸಿದರು. ಉದ್ಘಾಟನಾ ಸಮಾರಂಭದ ನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ಜರುಗಿದವು
Advertisement