Advertisement

ಜಿಲ್ಲಾದ್ಯಂತ ಸಂಭ್ರಮದ ಬಸವೇಶ್ವರ ಜಯಂತಿ

11:08 AM May 08, 2019 | Suhan S |

ಬಾಗಲಕೋಟೆ: ಬಸವಣ್ಣನವರ ವಿದ್ಯಾ ಸ್ಥಳ ಹಾಗೂ ಐಕ್ಯ ಸ್ಥಳ ಆಗಿರುವ ಬಾಗಲಕೋಟೆ ಜಿಲ್ಲೆ ವಿಶ್ವಕ್ಕೆ ಸಂದೇಶ ನೀಡಿದ ಜಿಲ್ಲೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಹೇಳಿದರು.

Advertisement

ನವನಗರದ ಜಿಪಂ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಾನವ ಕಾಯಕ ರೂಢಿಸಿಕೊಳ್ಳಬೇಕು. ಕಾಯಕವೇ ಕೈಲಾಸ ಎಂದು ಹೇಳಿದ ಮಾತು ಇಂದಿಗೂ ಕೂಡ ಪ್ರಚಲಿತವಾಗಿದೆ. ಬಸವಣ್ಣವರು ದುಡಿತದಿಂದ ಸನ್ಮಾರ್ಗ ಕಂಡುಕೊಳ್ಳಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರು ತಮ್ಮನ್ನು ತಾವು ಅರಿತು ನಡೆಯಬೇಕು. ನಡೆ-ನುಡಿಗಳು ಒಂದಾಗಿರಬೇಕು ಎಂಬುದು ಅವರ ತತ್ವವಾಗಿತ್ತು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ದೇಶ ವಿದೇಶಗಳ ಸಂವಿಧಾನ ಮತ್ತು ತತ್ವ ಸಿದ್ಧಾಂತ ಅವಲೋಕಿಸಿದಾಗ ಆ ಎಲ್ಲ ತತ್ವಗಳಿಗೂ ಬಸವಣ್ಣನವರ ವಚನಗಳು ಸ್ಫೂರ್ತಿಯಾಗಿವೆ. 12ನೇ ಶತಮಾನದ ಈ ಶರಣರು ರಚಿಸಿದ ವಚನಗಳು ಕನ್ನಡ ಭಾಷೆಯಲ್ಲಿರುವುದರಿಂದ ಬೇರೆ ದೇಶಕ್ಕೆ ಹೋಗದೇ ಮತ್ತು ಕನ್ನಡಕ್ಕೆ ಅಂದು ರಾಷ್ಟ್ರೀಯ ಭಾಷೆ ಸ್ಥಾನಮಾನ ದೊರೆಯದೇ ಇರುವುದರಿಂದ ಬೇರೆ ದೇಶದವರಿಗೆ ಈ ವಚನಗಳ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದರು.

ಇಂಗ್ಲೆಂಡಿನ ಥೇಮ್ಸ್‌ ನದಿ ದಡದಲ್ಲಿ ಕನ್ನಡಿಗ ನೀರಜ್‌ ಪಾಟೀಲರ ಇಚ್ಚಾಶಕ್ತಿಯಿಂದ ಅಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸಲಾಗಿದೆ. ಇಂದು ವಿಶ್ವವೇ ಬಸವಣ್ಣನವರ ವಚನಗಳಿಗೆ ಮಾರು ಹೋಗಿದೆ. ಈ ಎಲ್ಲ ಕೀರ್ತಿಯೂ ಅವಳಿ ಜಿಲ್ಲೆಗಳಾದ ವಿಜಯಪುರ-ಬಾಗಲಕೋಟೆ ಸಲ್ಲಬೇಕಾಗಿದೆ. ನಾವು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

Advertisement

ಬಸವೇಶ್ವರ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ| ಸುಮಂಗಲಾ ಮೇಟಿ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ದುರ್ಗೆಶ ರುದ್ರಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕಂದಾಯ ಇಲಾಖೆಯ ಮಲ್ಲಿಕಾರ್ಜುನ ಗುಡೂರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next