Advertisement

ಮೂರನೇ ಆಲೆ ಆತಂಕ: ಪರಿಷತ್‌ ಸಭಾಪತಿ ಹೊರಟ್ಟಿ ಸಲಹೆ

10:05 PM May 23, 2021 | Team Udayavani |

ಬೆಂಗಳೂರು: ಕರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸುವ ಸಾಧ್ಯತೆ ಬಗ್ಗೆ ಪರಿಣಿತರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಅಧ್ಯಯನ ನಡೆಸಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ಮೂರನೇ ಆಲೆಯು ಭವಿಷ್ಯದ ವಾರಸುದಾರರಾದ ಮಕ್ಕಳ ಮೇಲೆ ಬೀರಬಹುದ ಪರಿಣಾಮಗಳ ಬಗ್ಗೆ ತಿಳಿದುಕೊಂಡು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪ್ರಮಾಣದಲ್ಲಿ ಭಾಧಿಸಬಹುದು ಎಂದು ಹೇಳಿರುವುದು ಭಯದ ವಾತಾವರಣಕ್ಕೆ ಕಾರಣಾಗಿದೆ.ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಎರಡನೇ ಹಾಗೂ ಮೂರನೇ ಅಲೆಯಿಂದ ಸಾವು ನೋವುಗಳು ಸಂಭವಿಸಿವೆ. ಇದು ನಮಗೆ ಪಾಠವಾಗಬೇಕು. ಪ್ರತ್ಯೇಕ ಸಮಿತಿ ರಚಿಸಬೇಕು. ಮಕ್ಕಳ ಮೇಲಿನ ಪರಿಣಾಮಗಳ ಬಗೆಗಿನ ವರದಿಗಳಿಂದ ಪಾಲಕ-ಪೋಷಕರು ಹಾಗೂ ಶಿಕ್ಷಣ ವ್ಯವಸ್ಥೆಯೇ ಭಯ ಭೀತವಾಗಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ನ ಮೂಲ ಪತ್ತೆ ಹಚ್ಚಲು ತಜ್ಞರಿಗೆ ಡಿಸಿಎಂ ಸೂಚನೆ

ರಾಜ್ಯ ಸರ್ಕಾರ ಲಾಕ್‌ಡೌನ್‌ ಜೂ.7 ರವರೆಗೂ ಮುಂದುವರಿಸಿರುವುದು ಸಮಯೋಚಿತವಾಗಿದೆ. ಇತೀ¤ಚೆಗೆ ಬ್ಲಾಕ್‌ ಫಂಗಸ್‌ ಮತ್ತು ವೈಟ್‌ ಫಂಗಸ್‌ ಸೇರಿ ಹೊಸ ಹೊಸ ಕಾಯಿಲೆಗಳು ಬೆಳಕಿಗೆ ಬರುತ್ತಿವುದರಿಂದ ಪರಿಣಿತರ ವರದಿ ನಿರ್ಲಕ್ಷé ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next