ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ನಲವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪರಿಷತ್ ಹಿರಿಯ ಸದಸ್ಯರಾದ ಬಸವರಾಜ್ ಹೊರಟ್ಟಿ ಅವರಿಗೆ ಸನ್ಮಾನ ಮಾಡಲಾಯಿತು.
ವಿಧಾನಪರಿಷತ್ ಮೊಗಸಾಲೆಯಲ್ಲಿ ಪರಿಷತ್ ಸದಸ್ಯರಾದ ಕೆ. ಟಿ. ಶ್ರೀಕಂಠೇಗೌಡ, ಕೆ ಸಿ ಕೊಂಡಯ್ಯ, ಯು ಬಿ. ವೆಂಕಟೇಶ್, ಚೌಡರೆಡ್ಡಿ ತೂಪಲ್ಲಿ , ತೇಜಸ್ವಿನಿ ಗೌಡ ಸೇರಿ ಮೈಸೂರು ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿ, ಸಿಹಿ ತಿನ್ನಿಸಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ್ ಹೊರಟ್ಟಿ, ಸಾಮಾನ್ಯ ಶಿಕ್ಷಕನಾಗಿ ಇದ್ದವ ನಾನು. ನನ್ನ ಸಹಪಾಠಿ ಶಿಕ್ಷಕರೇ ವಿಧಾನಪರಿಷತ್ ಗೆ ಆಯ್ಕೆ ಮಾಡಿದರು ಸುಮಾರು ನಲವತ್ತು ವರ್ಷಗಳ ಕಾಲ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡುತ್ತ ಬಂದಿದ್ದಾರೆ.
ಏಳು ಭಾರಿ ಪರಿಷತ್ ಗೆ ಆಯ್ಕೆ ಆಗಿ ಬಂದಿದ್ದೇನೆ. ನಾನು ರಾಜಕೀಯ ಬದುಕಿನಲ್ಲಿ ಯಾವತ್ತೂ ಜಾತಿ,ಧರ್ಮ, ಹಣಕ್ಕೆ ಪ್ರಾಮುಖ್ಯತೆ ಕೊಟ್ಟವನಲ್ಲ. ಹೀಗಾಗಿ ಅವರ ನಿರಂತರ ಪ್ರೀತಿ ನನ್ನ ಮೇಲಿದೆ ಎಂದು ಭಾವುಕರಾಗಿ ಮಾತನಾಡಿದರು.