ಬೆಂಗಳೂರು: ನಾಳೆ (ಶುಕ್ರವಾರ) ಬೆಳಗ್ಗೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆಯಿದೆ. ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕರೆ ಮಾಡಿ ಶುಭ ಕೋರಿದ್ದಾರೆ. ಉತ್ತಮ ಆಡಳಿತ ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ. ದೆಹಲಿ ಭೇಟಿಯ ವೇಳೆ ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರನ್ನು, ಸಚಿವರನ್ನು ಭೇಟಿಯಾಗುತ್ತೇನೆ ಎಂದರು.
ಸಚಿವ ಸಂಪುಟ ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಭೇಟಿಯಲ್ಲಿ ಅದು ಅಂತಿಮವಾಗುವುದು ಕಷ್ಟ. ಇನ್ನೊಂದು ಭೇಟಿಯಲ್ಲಿ ಅಂತಿಮವಾಗಬಹುದು ಎಂದರು.
ಇದನ್ನೂ ಓದಿ:ಬಿಎಸ್‌ವೈ ನೆರಳಾಗಬೇಡಿ: ಬೊಮ್ಮಾಯಿಗೆ ದಿಲ್ಲಿ ವೀಕ್ಷಕರ ಕಿವಿಮಾತು
ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಸಮೀಕ್ಷೆ, ಹಾನಿಯಾದ ಸ್ಥಳಗಳ ವೀಕ್ಷಣೆ, ಅಧಿಕಾರಿಗಳ ಚರ್ಚೆ ಮಾಡಲಿದ್ದೇನೆ. ಅಲ್ಲಿ ಭೇಟಿ ನೀಡಿ ನಂತರ ಪ್ಯಾಕೇಜ್ ಘೋಷಣೆಯ ಬಗ್ಗೆ ನಿರ್ಧರಿಸುತ್ತೇನೆ ಎಂದರು.
ಕಾರವಾರ ಪ್ರವಾಸಕ್ಕೂ ಮುನ್ನ ಕಾವೇರಿಗೆ ತೆರಳಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.