Advertisement

ಮೈಸೂರಿನಲ್ಲಿ ನಡೆದಿದ್ದು ಅಭಿವೃದ್ದಿ ಚರ್ಚೆಯಷ್ಟೇ; ಸಂಸದ-ಶಾಸಕರ ಜಟಾಪಟಿಗೆ ಸಿಎಂ ಸಮರ್ಥನೆ

12:09 PM Jan 30, 2022 | Team Udayavani |

ಬೆಂಗಳೂರು: ಮೈಸೂರಿನಲ್ಲಿ ಅಭಿವೃದ್ಧಿ ಕುರಿತು ಚರ್ಚೆಯಾಗಿದೆ ಅಷ್ಟೇ, ಆದರೆ ಇಬ್ಬರನ್ನೂ ಕರೆದು ನಾನು ಮಾತಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮೈಸೂರು ಶಾಸಕರು-ಸಂಸದರ ಜಟಾಪಟಿಗೆ ಪ್ರತಿಕ್ರಿಯೆ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಕಾರ್ಯಗಳ ಬಗ್ಗೆ ಅಭಿಪ್ರಾಯ ಇದೆಯೇ ಹೊರತು ಬೇರೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಭಿವೃದ್ಧಿ ಬಗ್ಗೆ ಪೈಪೋಟಿಯಿದ್ದಾಗ ಈ ರೀತಿಯ ಚರ್ಚೆಯಾಗುತ್ತದೆ ಎಂದು ಸಮರ್ಥನೆ ಮಾಡಿಕೊಂಡರು.

ಟೋಯಿಂಗ್ ಪುನರ್ ಪರಿಶೀಲನೆ: ಟೋಯಿಂಗ್ ನಲ್ಲಿರುವ ವ್ಯವಸ್ಥೆ ಪುನರ್ ಪರಿಶೀಲನೆ ಮಾಡುತ್ತಿದ್ದೇವೆ. ಹಲವಾರು ಘಟನೆ ಬಗ್ಗೆ ನಾನು ಗಮನಿಸಿದ್ದೇನೆ. ಸಾರ್ವಜನಿಕರಿಗೆ ಕಾನೂನು ರೀತಿ ನಡೆದುಕೊಳ್ಳಬೇಕು, ಆದರೆ ರಕ್ಷಣೆ ಮಾಡಬೇಕಾದವರು ಅತಿರೇಕ ವರ್ತನೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಇಡೀ ವ್ಯವಸ್ಥೆ ಬಗ್ಗೆ ನಾಳೆ, ಡಿಜಿ, ಕಮಿಷನರ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಹಲವು ಬದಲಾವಣೆ ಮಾಡುವುದರ ಜೊತೆಗೆ ಜನ ಸ್ನೇಹಿ ತೀರ್ಮಾನ ಗಳನ್ನು ಮಾಡುತ್ತೇವೆ ಎಂದರು.

ಇದನ್ನೂ ಓದಿ:ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ..: ಸಂಪುಟ ವಿಸ್ತರಣೆ ಗುಟ್ಟು ಬಿಟ್ಟುಕೊಡದ ಸಿಎಂ

ಸಿನಿಮಾಗೆ ಕೋವಿಡ್ 50:50 ರೂಲ್ಸ್ ಮುಂದುವರಿಕೆ ವಿಚಾರವಾಗಿ ಮಾತನಾಡಿದ ಸಿಎಂ, “ನಿನ್ನೆ ಚಿತ್ರರಂಗದವರು ಭೇಟಿಯಾಗಿದ್ದರು. ಅವರ ಜೊತೆ ಮಾತಾಡಿದ್ದೇನೆ. ತಾಂತ್ರಿಕ ಸಲಹಾ ಸಮಿತಿ‌ ಶಿಫಾರಸ್ಸಿನ ಮೇರೆಗೆ ನಿರ್ಧಾರ ಮಾಡಿದ್ದೇವೆ. ಮತ್ತೆ ತಾಂತ್ರಿಕ ಸಲಹಾ ಸಮಿತಿ ಮುಂದೆ ಚಿತ್ರರಂಗದ ಮನವಿ ಮುಂದಿಡುತ್ತೇವೆ. ಆ ಬಳಿಕ ನಿರ್ಧಾರ ಮಾಡುತ್ತೇವೆ” ಎಂದರು.

Advertisement

ಕಾಂಗ್ರೆಸ್  ಗುಣ ಬದಲಾವಣೆಯಾಗದು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಳ ಜಗಳ ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ಯಾವಾಗಲೂ ಕೂಡ ಜನ ಹಿತವಾಗಿ ಕೆಲಸ ಮಾಡಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸೋದು ಬಿಟ್ಟರೆ, ಬೇರೆ ಅಭಿವೃದ್ಧಿಗೆ ಬಳಕೆ ಮಾಡಿಲ್ಲ, ಯಾರೇ ನಾಯಕರು ಬದಲಾವಣೆಯಾದರೂ ಸರಿಯೇ ಸ್ವಾರ್ಥಕ್ಕಾಗಿ ಅವರ ರಾಜಕಾರಣ. ಹೀಗಾಗಿ ಅವರ ಗುಣಗಳು ಎಂದಿಗೂ ಬದಲಾವಣೆ ಆಗೋಲ್ಲ ಎಂದು ಸಿಎಂ ಟಾಂಗ್ ನೀಡಿದರು.

ಆರು ತಿಂಗಳ ಸರ್ಕಾರದ ಸಾಧನೆ ಬಗ್ಗೆ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, “ಸಿದ್ದರಾಮಯ್ಯರಿಂದ ಬೇರೆ ಏನು ನಿರೀಕ್ಷೆ ಮಾಡಲುಕೆ ಸಾಧ್ಯ. ಜನ ಹಿತಕ್ಕಾಗಿ ಏನಾಗಿದೆಂದು ನೋಡಬೇಕು. ಅದು ಬಿಟ್ಟು ಮೊಸರಲ್ಲಿ ಹುಡುಕುವ ಕೆಲಸ ಮಾಡಬಾರದು. ಪ್ರಣಾಳಿಕೆಯಲ್ಲಿ ಶೇ90 ಮಾಡಿದ್ದೀವಿ ಎನ್ನುತ್ತಾರೆ. ಆದರೆ ಎಲ್ಲಿ ಮಾಡಿದ್ದಾರೆ? ಅದಕ್ಕಾಗಿ ಅವರನ್ನು ಜನರು ತಿರಸ್ಕಾರ ಮಾಡಿರುವುದು. ಅವರ ಪ್ರಣಾಳಿಕೆಯ ಯೋಜನೆಗಳು ಘೋಷಣೆಯಷ್ಟೇ, ಅನುಷ್ಠಾನವಾಗಿಲ್ಲ. ಯಾವ ಕಾರ್ಯಕ್ರಮ ಯಾವ ರೀತಿ ಅನುಷ್ಠಾನ ಮಾಡಿ, ಯಾರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಅರಿವು ನಮಗೆ ಇದೆ, ಈ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next