Advertisement
ಜಿಲ್ಲೆಯ ಗೌರಿಬಿದನೂರು ಪಟ್ಟಣದ ಬಸವೇಶ್ವರರ ರಸ್ತೆಯಲ್ಲಿ ಭಾನುವಾರ ಸ್ಥಳೀಯ ವೀರಶೈವ ಸೇವಾ ಸಮಿತಿ ಹಮ್ಮಿಕೊಂಡಿದ್ದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಅಭಿನಂಧನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
Related Articles
ಕಾಯಕಕ್ಕೂ ಕರ್ತವ ಕೆಲಸ ಪೂರ್ಣಗೊಳ್ಳುವವರೆಗೆ ಹಿಂದಕ್ಕೆ ಹೆಜ್ಜೆಯಿಡದೆ ಕಾಯಕವನ್ನು ಪ್ರಮುಖವಾಗಿ ಭಾರತದಲ್ಲಿ ಅನ್ನದಾಸೋಹ ಮತ್ತು ಅಕ್ಷರ ದಾಸೋಹಗಳ ಚಿಂತನೆಯನ್ನು ತಂದವರು ಬಸವಣ್ಣನವರು ಈ ಒಂದು ಚಿಂತನೆಯನ್ನು ಹುಟ್ಟುಹಾಕಿದ ಸಮಾಜವೇ ವೀರಶೈವ ಸಮಾಜ ಎನ್ನಬಹುದು, ಜೈನರು ಅಹಿಂಸಾ ಧರ್ಮವನ್ನು ದೇಶದಲ್ಲಿ ಪ್ರತಿಪಾದಿಸಿತು, ಭಾರತದಲ್ಲಿ ಭಕ್ತಿ ಪಂಥದ ಚಳುವಳಿಯನ್ನು ಹುಟ್ಟು ಹಾಕಿದವರು ವೀರಶೈವರೇ ಎಂದರು.
Advertisement
ನನ್ನ ಅವಧಿಯಲ್ಲಿ ನೀರಾವರಿ ಯೋಜನೆ;ಈ ಹಿಂದೆ ನಾನು ಬೃಹತ್ ನೀರಾವರಿ ಸಚಿವನಾಗಿದ್ದಾಗ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿನ ನೀರು ಮತ್ತು ಅಂತರ್ಜಲ ಸಮಸ್ಯೆಯನ್ನು ಮನಗೊಂಡು ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಯಿತು, ಅಂದಿನ ನಮ್ಮ ಸರ್ಕಾರ ನಮೂದನೆಯನ್ನು ನೀಡಿ ಆರ್ಥಿಕ ಅನುಮೋದನೆಯನ್ನೂ ನೀಡಿತ್ತು ಎಂದು ತಿಳಿಸಿದ ಅವರು ಅವಿಭಜಿತ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಯಲ್ಲಿ ಹಿಂದೆ ತೋಟಗಾರಿಕೆ ಬೆಳೆಗೆ ಹೆಸರಾಗಿತ್ತು ಹೈನುಗಾರಿಕೆ ಉತ್ತಮವಾಗಿತ್ತು ಇದನ್ನು ನಾನು ಬಲ್ಲೆ ಆದರೆ ಎರಡು ದಶಕಗಳಿಂದ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ ಈ ಸಮಸ್ಯೆಗೆ ಪರಿಸರವನ್ನು ಸಂರಕ್ಷಿಸಲು ಗಿಡಮರಗಳನ್ನು ಬೆಳೆಸಬೇಕು, ಮಳೆ ನೀರನ್ನು ಸಂಗ್ರಹ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀಶೈಲಪೀಠದ ಶ್ರೀ ಚನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿಗಳು, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನುಬಳಿಗಾರ್, ತಾಲೂಕು ವೀರಶೈವ ಸೇವಾಸಮಿತಿ ಅಧ್ಯಕ್ಷರಾದ ಎಲ್.ಮಹಾದೇವಯ್ಯ ಕಾರ್ಯಾಧ್ಯಕ್ಷರಾದ ಶಶಿಧರ್, ಎಸ್.ಎಸ್.ಪಾಟೀಲ್,ಕೆಪಿಟಿಸಿಎಲ್ ನಿರ್ದೇಶಕರಾದ ಶಿವಕುಮಾರ್, ಉಪಾಧ್ಯಕ್ಷರಾದ ಮಲ್ಲೇಶಣ್ಣ, ಕಾರ್ಯದರ್ಶಿಗಳಾದ ಶಿವಪ್ರಸಾದ್, ಖಜಾಂಚಿ ನಂಜಪ್ಪ ವಿದ್ಯಾರ್ಥಿನಿಲಯದ ಅಧ್ಯಕ್ಷರಾದ ಚಿಕ್ಕಣ್ಣ ನಿರ್ದೇಶಕರಾದ ನವೀನ್ ಕುಮಾರ್ ಉಮಾದೇವಿ ದೇವರಾಜು ಶಂಕ್ರಪ್ಪ ರೇವಣಸಿದ್ದೇಶ್ವರ ನಂಜುಂಡಪ್ಪ ಪರಮೇಶ್ ಮತ್ತಿತರರು ಇದ್ದರು.