Advertisement

ಬೈರತಿ ರಾಜೀನಾಮೆಗೆ ಪಟ್ಟು; ಬಿಜೆಪಿ-ಕಾಂಗ್ರೆಸ್‌ ಶಾಸಕರ ನಡುವೆ ಬಿರುಸಿನ ವಾಗ್ವಾದ

01:07 AM Dec 18, 2021 | Team Udayavani |

ಬೆಳಗಾವಿ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ವಿರುದ್ಧದ ಭೂ ಕಬಳಿಕೆ, ವಂಚನೆ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಶುಕ್ರವಾರ ಕಾಂಗ್ರೆಸ್‌ ವಿಧಾನಸಭೆಯಲ್ಲಿ ಪಟ್ಟುಹಿಡಿದುದು ಆಡಳಿತ-ವಿಪಕ್ಷ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

Advertisement

ನಿಯಮ 69ರಡಿ ನಿಲುವಳಿ ಸೂಚನೆ ಮಂಡಿಸಿ ನಿಯಮ 60ರಡಿ ಆದರೂ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಚರ್ಚೆಗೆ ಅವಕಾಶ ಇಲ್ಲ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದರು.

ಇದಕ್ಕೆ ಒಪ್ಪದ ಸಿದ್ದರಾಮಯ್ಯ, ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಚರ್ಚೆಗೆ ಅವಕಾಶ ನೀಡಲಾಗಿತ್ತು. ಈಗಲೂ ಅದೇ ನಿಯಮ ಊರ್ಜಿತ ದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಬೈರತಿ ಬಸವರಾಜ್‌ ರಾಜೀ ನಾಮೆ ನೀಡಬೇಕು. ಯಾರದೋ ಪಾಪದ ಕೂಸು ನೀವ್ಯಾಕೆ ಹೊತ್ತು ಕೊಳ್ಳುತ್ತೀರಿ ಎಂದು ಸಿದ್ದರಾಮಯ್ಯ ಛೇಡಿ ಸಿದರು.

ಇದನ್ನೂ ಓದಿ:ಪೆಗಾಸಸ್‌ ವಿವಾದ: ಪ.ಬಂಗಾಳಕ್ಕೆ ಮುಖಭಂಗ; ಸಮಿತಿಯ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ

ಕಾಂಗ್ರೆಸಿಗರು ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾದರು. ಗದ್ದಲದ ನಡುವೆ ಸ್ಪೀಕರ್‌ ಪ್ರವಾಹ ಸಮಸ್ಯೆ ಮತ್ತು ಬೆಳೆಹಾನಿ ಕುರಿತು ಸರಕಾರದಿಂದ ಉತ್ತರ ನೀಡುವಂತೆ ಸೂಚಿಸಿದರು. ಆದರೆ ಸೋಮವಾರ ಉತ್ತರ ಕೊಡುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ಬಳಿಕ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

Advertisement

ಕಾಂಗ್ರೆಸ್‌ಗೆ ಬೆಂಬಲ
ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರು ಸಚಿವ ಬೈರತಿ ಬಸವರಾಜ್‌ ರಾಜೀ ನಾಮೆಗೆ ಆಗ್ರಹಿಸಿ ಸದನದ ಬಾವಿ ಗಿಳಿದು ಪ್ರತಿಭಟನೆ ನಡೆಸಲು ಮುಂದಾ ದಾಗ ಅವರಿಗೆ ಜೆಡಿಎಸ್‌ ಶಾಸಕ ಕೋಲಾರದ ಶ್ರೀನಿವಾಸ ಗೌಡ ಬೆಂಬಲ ನೀಡಿದರು. ಅವರು ಕೂಡ ಸದನದ ಬಾವಿಗೆ ಇಳಿದು ಕಾಂಗ್ರೆಸ್‌ ಶಾಸಕರ ಜತೆಗೆ ಪ್ರತಿಭಟನೆ ನಡೆಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next