Advertisement

ಭವಿಷ್ಯವನ್ನು ಉತ್ತಮಗೊಳಿಸುವ ಹಸಿವಿರಲಿ: ಸಿಎಂ ಬೊಮ್ಮಾಯಿ ಕರೆ

09:25 PM Dec 10, 2022 | Team Udayavani |

ಮೈಸೂರು: ಭವಿಷ್ಯವನ್ನು ಉತ್ತಮಗೊಳಿಸುವ ಹಸಿವಿರಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

Advertisement

ಅವರು ಶನಿವಾರ ಸಂಜೆ ಇಲ್ಲಿ ಇನ್ಫೋಸಿಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಅನ್ ಲೀಶ್ ಇಂಡಿಯಾ 2022 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಪರ್ಕ ಕ್ರಾಂತಿಯಿಂದಾಗಿ ಸ್ಥಳೀಯವಾದುದು ಜಾಗತಿಕ, ಜಾಗತಿಕವಾದುದು ಸ್ಥಳೀಯವಾಗಿದೆ. ವಿಶ್ವದ ಭವಿಷ್ಯದ ಪ್ರಜೆಗಳು ಇವೆರಡರ ಭಾಗವಾಗಿ ಬದುಕಬೇಕಿದೆ ಎಂದರು. ನಮ್ಮ ವ್ಯಕ್ತಿತ್ವದ ಬೆಳವಣಿಗೆಗಾಗಿ ಹಸಿವನ್ನು ಉಳಿಸಿಕೊಳ್ಳಬೇಕು ಎಂದರು.

ಪ್ರತಿ ಆವಿಷ್ಕಾರವೂ ಪರಿಸರವನ್ನು ರಕ್ಷಿಸಲಿ
ಮಾನವ ಪ್ರಕೃತಿಗೆ ಸೇರಿದವನು. ಈ ಸುಂದರ ಪರಿಸರ ಬಿಟ್ಟುಹೋಗಿರುವ ನಮ್ಮ ಹಿರಿಯರಿಗೆ ನಾವು ಕೃತಜ್ಞರಾಗಿರಬೇಕು ಪ್ರಕೃತಿಯ ಹಾನಿ ಅತ್ಯಂತ ವೇಗವಾಗಿ ಆಗುತ್ತಿದೆ. 20 ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಈ ಪ್ರಮಾಣದಲ್ಲಿ ಹಾನಿ ಮುಂದುವರೆದರೆ. ಈ ವಿಶ್ವದಲ್ಲಿ ಬದುಕುವುದು ದುಸ್ತರವಾಗಲಿದೆ. ವಿಜ್ಞಾನ, ತಂತ್ರಜ್ಞಾನ ಯಾವುದೂ ನಮ್ಮನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ನಮಗೆ ದೊರಕಿರುವ ಸುಂದರ ಪ್ರಕೃತಿಯನ್ನು ಮುಂದಿನ ಜನಾಂಗಕ್ಕೂ ಬಿಟ್ಟು ಹೋಗಬೇಕೆಂಬ ಚಿಂತನೆ ಇರಬೇಕು. ಇಲ್ಲದಿದ್ದರೆ ನಾವು ಭವಿಷ್ಯದಿಂದಲೇ ಕದ್ದಂತಾಗುವುದು. ಪ್ರತಿ ಆವಿಷ್ಕಾರವೂ ಪರಿಸರ ಹಾಗೂ ಪ್ರಕೃತಿಯನ್ನು ರಕ್ಷಿಸುವ ಪ್ರಯತ್ನ ಮಾಡಬೇಕು ಎಂದರು.

ನಮ್ಮ ಕ್ರಿಯೆ ಮತ್ತೊಬ್ಬರಿಗೆ ಸಂತೋಷ ನೀಡಬೇಕು
ಇತರರು ನಿಮ್ಮ ಕ್ರಿಯೆಗಳಿಂದ ಸಂತೋಷಪಟ್ಟರೆ ಅದು ಉತ್ತಮ ಬದುಕು. ತೃಪ್ತಿ, ಸಂತಸ ಎನ್ನುವುದು ಶಾಶ್ವತ ಅಂಶಗಳಲ್ಲ. ಕೆಲವು ಘಳಿಗೆ ಗಳನ್ನು ಸಂತೋಷದಿಂದ ಕಳೆಯಬಹುದು.ಆದರೆ ನಾವು ಏನು ಬಿಟ್ಟುಹೋಗುತ್ತೇವೆ ಎನ್ನುವುದು ಮುಖ್ಯ ಎಂದರು.

Advertisement

ಪರಮಹಂಸದಂತೆ ಎತ್ತರಕ್ಕೆ ಏರಿ
ಭೂಮಿ ಎನ್ನುವುದು ಬಹಳ ಬೆಲೆ ಬಾಳುವ ವಸ್ತುವಾಗಿದೆ. ನಮಗೆ ಯಾವುದೂ ಸೇರುವುದಿಲ್ಲ ಎಂದು ಅರಿತಾಗಲೇ ಅಮೃತ ಘಳಿಗೆಯಾಗುತ್ತದೆ. ಸರಸ್ವತಿ ದೇವಿಯ ಪರಮಹಂಸ ಪಕ್ಷಿಯಂತೆ ಅತ್ಯಂತ ಎತ್ತರಕ್ಕೆ ಏರಬೇಕು. ಆ ಎತ್ತರಕ್ಕೆ ಜ್ಞಾನ ಮಾತ್ರ ಕೊಂಡೊಯ್ಯಬಹುದು. ಈ ಜ್ಞಾನದಿಂದ ವಿಶ್ವವನ್ನು ಉತ್ತಮಗೊಳಿಸಿ ಎಂದರು.

ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ದಂಪತಿಗಳು, ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಮಂಡಳಿ ಅಧ್ಯಕ್ಷ ನಂದನ್ ನಿಲೇಕಣಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next