Advertisement
ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಒಟ್ಟು 274 ಜನರು ಬಿಡುಗಡೆಗೊಂಡಿದ್ದು, 672 ಜನರೂ ಸದ್ಯವೇ ಬಿಡು ಗಡೆಗೊಳ್ಳುವರು. ಅವರಿಗೆ ಬೇಕಾದ ಎಲ್ಲ ಆರೋಗ್ಯ ಸಂಬಂಧಿ ಸೌಲಭ್ಯಗಳನ್ನು ಒದಗಿಸಲಾಗು ವುದು ಎಂದರು.
ಜಿಲ್ಲಾಡಳಿತಕ್ಕೆ ಮೆಚ್ಚುಗೆ ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಕ್ವಾರಂಟೈನ್ ಕೇಂದ್ರಗಳಲ್ಲಿ 12,530 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕ್ವಾರಂಟೈನ್‌ಗೆ ಒಳಗಾದ ಎಲ್ಲರ ಮಾದರಿಗಳನ್ನೂ ಸಂಗ್ರಹಿಸಿದ ಉಡುಪಿ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ದೊಡ್ಡ ಸಂಖ್ಯೆಯಲ್ಲಿ ಬಂದ ಹೊರ ರಾಜ್ಯದವರನ್ನು ಉತ್ತಮ ರೀತಿಯಲ್ಲಿ ಜಿಲ್ಲಾಡಳಿತ ನಿಭಾಯಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 10-12 ದಿನಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಕಾರ್ಯಾರಂಭಗೊ ಳ್ಳಲಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.
Related Articles
ಕಾರ್ಕಳ ಮತ್ತು ಕುಂದಾಪು ರದ ಆಸ್ಪತ್ರೆಗಳಿಗೂ ಕೋವಿಡ್ ಆಸ್ಪತ್ರೆಗೆ ಇರುವಂತೆ ಸಿಬಂದಿಯ ನೇಮಕಕ್ಕೂ ಆರೋಗ್ಯ ಸಚಿವರಲ್ಲಿ ಮಾತನಾಡಿ ಆದೇಶ ಹೊರಡಿಸಲಾಗುವುದು ಎಂದರು.
Advertisement
ನರೇಗಾ: ಉತ್ತಮ ಸಾಧನೆನರೇಗಾ ಕಾಮಗಾರಿಗಳಲ್ಲಿ ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಗತಿಯಾಗಿದೆ. ಕಳೆದ ವರ್ಷ 77,190 ಮಾನವ ದಿನಗಳ
ಕೆಲಸ ನಡೆದರೆ, ಈ ವರ್ಷ ಇದು ವರೆಗೆ 2.1 ಲಕ್ಷ ಮಾನವ ದಿನಗಳ ಕೆಲಸ ನಡೆದಿದೆ ಎಂದರು. ಜಿಲ್ಲೆಯಲ್ಲಿ 1,640 ಮನೆಗ ಳನ್ನು ಹಿಂದಿನ ಸರಕಾರ ಬ್ಲಾಕ್ ಮಾಡಿತ್ತು. ನಮ್ಮ ಸರಕಾರ ಅವು ಗಳನ್ನು ಅನ್‌ಬ್ಲಾಕ್ ಮಾಡಿದೆ. ಮನೆ ನಿರ್ಮಾಣಕ್ಕೆ ಇನ್ನು ತೊಡಕಿಲ್ಲ ಎಂದರು. ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಐಜಿಪಿ ದೇವಜ್ಯೋತಿ ರಾಯ್, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್ ಉಪಸ್ಥಿತರಿದ್ದರು.