Advertisement
ಸ್ವಾಮೀಜಿಯವರು ಮತ್ತು ಸಂಸ್ಥೆಯ ಅಧ್ಯಕ್ಷರಾದ ಬಿ. ಜಿ. ಬಿರಾದಾರ, ವಿಶ್ವಸ್ತ ಮಂಡಳಿಯ ಎಂ. ಎಂ. ಕೋರಿ ಮತ್ತು ಗೌ. ಕಾರ್ಯದರ್ಶಿ ಎನ್. ಬಿ. ಸಾವಳಸಂಗ ಅವರು ಮಹಾತ್ಮಾ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮತ್ತು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Related Articles
Advertisement
ವಚನ ಸಂಗೀತಕಾರ ಗಿರೀಶ ಸಾರವಾಡರನ್ನು ಸ್ವಾಮಿಗಳು ಮತ್ತು ಗೌರವ ಕಾರ್ಯದರ್ಶಿ ಎನ್. ಬಿ. ಸಾವಳ ಸಂಗ ಅವರು ಮಾಡಿದರು. ಪೂಜ್ಯ ಸ್ವಾಮೀಜಿಗಳು ತಮ್ಮ ಪ್ರವಚನದಲ್ಲಿ ಮಹಾತ್ಮಾ ಬಸವೇಶ್ವರರು ಶಂಕರ ಭಗವಾನರ ವಾಹನ ನಂದಿ ಅವತಾರಿಗಳು. ಭೂಲೋಕದಲ್ಲಿಯ ಅನ್ಯಾಯ ಮಾನವರಿಗೆ ಮಾನವರಿಂದ ಆಗುವ ಅತ್ಯಾಚಾರ ವರ್ಣಭೇದ ಅಂಧಶ್ರದ್ಧೆ ಮೂಢನಂಬಿಕೆಗಳನ್ನು ತೊಡೆದು ಹಾಕಲು ಭೂಲೋಕದಲ್ಲಿ ಮನುಷ್ಯ ರೂಪದಲ್ಲಿ ಆಗಮಿಸಿ ಕ್ರಾಂತಿಯನ್ನು ಮಾಡಿದರು.
ಯಾವ ಧರ್ಮದಲ್ಲಿಯೂ ಆಗದ ಸುಧಾರಣೆಯನ್ನು ಅವರು 12ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಕೊಟ್ಟು ಸಮಾಜದಲ್ಲಿಯ ಅಂಧ ಶ್ರದ್ಧೆ, ಮೂಡನಂಬಿಕೆ ವರ್ಣ ಭೇದದಂತಹ ಅನಿಷ್ಟ ಪದ್ಧತಿ ಗಳನ್ನು ನಿರ್ಮೂಲನ ಮಾಡಲು ಪ್ರಯತ್ನಿಸಿದರು. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಿ ಸಮಾಜದ ಎಲ್ಲಾ ಕೆಳವರ್ಗದ ವರನ್ನು ಒಂದುಗೂಡಿಸಿ ವಚನ ಗಳನ್ನು ರಚಿಸಿದರು. ಇಂದಿಗೂ ಆ ವಚನಗಳು ಮಾನವ ಕಲ್ಯಾಣಕ್ಕೆ ಪ್ರಾಧಾನ್ಯವಾಗಿವೆ ಎಂದರು.
ವಿ. ವಿ. ಬಳಿಗಾರ ಅವರ ಸೇವಾರ್ಥವಾಗಿ ಪ್ರಸಾದದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮನೋಹರ ಕೋರಿ ಅವರು ಪ್ರಾಯೋಜಕರನ್ನು ಗೌರವಿಸಿದರು. ಆರ್. ಭೀ. ಗೌಡರ್ ಕಾರ್ಯಕ್ರಮ ನಿರ್ವಹಿಸಿದರು.
ಎಂ. ಎ. ಸಿದ್ನಾಳ, ವಿ. ವಿ. ಬಳಿಗಾರ, ಎಂ. ಬಿ. ಬಿರಾದಾರ, ಅಮರೇಶ ಪಾಟೀಲ, ಆಶೋಕ ಕರಜಗಿ , ಎಂ. ಬಿ. ಕೂಪ್ಪ, ಎಂ. ಎಸ್. ಗಾಣಿಗಿ ಶ್ರೀಧರ ಕೋರಿ, ವಿದ್ಯಾ ಕಾಗೆ, ಅರುಂಧತಿ ಕೋರಿ, ಲಲಿತಾ ಅಂಗಡಿ, ಶಾರದಾ ಅಂಬೆಸಂಗೆ, ಜಯಾ ಅಮರಖೇಡ, ಸಂಗಮೇಶ ಉಣಕಿ ಉಪಸ್ಥಿತರಿದ್ದರು.