Advertisement

ಸಾಮಾಜಿಕ ಸಮಸ್ಯೆಗೆ ಬಸವಣ್ಣನ ವಚನವೇ ಮದ್ದು 

12:05 PM May 28, 2017 | Team Udayavani |

ಬೆಂಗಳೂರು: ಶ್ರೇಷ್ಠ ದಾರ್ಶನಿಕ ಬಸವಣ್ಣನವರ ವಿಚಾರಧಾರೆಯ ಅನುಷ್ಠಾನದ ಮೂಲಕ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

Advertisement

ಶರಣ ಸಮಾಜದ ವತಿಯಿಂದ ಸಂಜಯನಗರದ ರಮಣ ಮಹರ್ಷಿ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಜಗದ್ಗುರು ಶ್ರೀರೇಣುಕಾಚಾರ್ಯರ ಯುಗಮಾನೋತ್ಸವ ಹಾಗೂ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಸಂಸ್ಕೃತಿಯ ರಕ್ಷಣೆ ಸೇರಿದಂತೆ ಸಮಾಜ ಹಲವು ಸಮಸ್ಯೆ ಎದುರಿಸುತ್ತಿದೆ. ಬಸವಣ್ಣನವರ ವಚನದ ಸಾರಾಂಶವನ್ನು ಅರ್ಥೈಸಿಕೊಂಡು, ಅನುಷ್ಠಾನಕ್ಕೆ ತಂದರೆ ಸಮಾಜದ ಬಹುತೇಕ ಸಮಸ್ಯೆ ದೂರಾಗಲಿದೆ. ಬಸವಣ್ಣನವರ ಸರಳ ಸೂತ್ರವನ್ನು 15 ದಿನಕ್ಕೊಮ್ಮೆ ಸ್ಮರಣೆ ಮಾಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.

ಮಹಿಳಾ ಸಬಲೀಕರಣದ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ, ಅನುಭವ ಮಂಟಪ ಮಾಡಿ ಅಕ್ಕಮಹಾದೇವಿ ಅವರಿಗೆ ಶ್ರೇಷ್ಠ ಸ್ಥಾನಮಾನ ಕಲ್ಪಿಸಿರುವ ಬಸವಣ್ಣನವರ ಚಿಂತನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ಇಂದು  ರಾಜಕೀಯ ಪಕ್ಷಗಳು ಮತ ಪಡೆಯುವುದಕ್ಕೆ ಮಾತ್ರ ಮಹಿಳಾ ಅಭಿವೃದ್ಧಿ ಮತ್ತು ಸಬಲೀಕರಣ ಸೀಮಿತವಾಗಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಗಂಗಾ ಕ್ಷೇತ್ರದ ಮೇಲಣಗವಿಮಠದ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಅಶಿರ್ವಚನ ನೀಡಿ, ಅಚಾರ್ಯ ಪರಂಪರೆ ಹಾಗೂ ಶರಣ ಪರಂಪರೆಯಿಂದ ಸಮಾಜ ಸೇವೆ ನಿರಂತರವಾಗಿದೆ. ಆಚಾರ್ಯರು ಮಠಗಳ ಸ್ಥಾಪನೆ ಮೂಲಕ ಬಡವರಿಗೆ ವಸತಿ, ಆಹಾರ, ವಿದ್ಯೆ ನೀಡುತ್ತಿವೆ. ಶರಣರು ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಬಸವಣ್ಣ ಹಾಗೂ ಶ್ರೀ ರೇಣುಕಾಚಾರ್ಯರ ವಿಚಾರ ಒಂದೇ ಆಗಿದೆ ಎಂದರು.

Advertisement

ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ವೀರಶೈವ ಸಮಾಜ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣ ನವರ ವಚನಗಳಲ್ಲಿನ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಬೇಕೆಂಬ ಉದ್ದೇಶದಿಂದ ಅದನ್ನು 23 ಭಾಷೆಗೆ ಅನುವಾದ ಮಾಡಿಸುವ ಕಾರ್ಯಕ್ಕೆ ಮುಂದಾಗಿ¨ªಾರೆ. ಬಸವಣ್ಣನವರ ವಚನಗಳು  ಮತ್ತು ಸಮಾನತೆಯ ಪರಿಕಲ್ಪನೆ ಇಂದಿನ ಸಮಾಜಕ್ಕೆ ಅವಶ್ಯಕ ಎಂದು ಹೇಳಿದರು.

ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜ್ಯೋತಿ ಪ್ರಕಾಶ್‌ ಮಿರ್ಜಿ, ಶರಣ ಸಮಾಜದ ಅಧ್ಯಕ್ಷ ಡಾ.ಗಿರೀಶ್‌ ಕೆ. ನಾಶಿ, ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next