Advertisement

ಧಾರವಾಡ ವಿ.ವಿ.ಗೆ ಬಸವಣ್ಣನ ಹೆಸರು : ಶಾಲಾ-ಕಾಲೇಜು ಪಠ್ಯದಲ್ಲಿ ಶರಣ ಜೀವನ ಪರಿಚಯ

09:56 AM Feb 18, 2020 | sudhir |

ಬೆಂಗಳೂರು: ವಚನ ಸಾಹಿತ್ಯ ಮತ್ತು ಶರಣರ ಜೀವನ ಕುರಿತು ಪಠ್ಯ ಸೇರ್ಪಡೆ, ಧಾರವಾಡ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಬಸವಣ್ಣನ ಹೆಸರಿಡಬೇಕು ಎಂದು ಅಸಂಖ್ಯ ಪ್ರಮಥರ ಗಣಮೇಳ ತೀರ್ಮಾನಿಸಿದೆ.
ಇಲ್ಲಿನ ನೈಸ್‌ ರಸ್ತೆ ಬಳಿಯ ನಂದಿ ಮೈದಾನದಲ್ಲಿ ರವಿವಾರ ನಡೆದ ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಏಳು ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಅವುಗಳ ಅನುಷ್ಠಾನಕ್ಕಾಗಿ ಸರಕಾರವನ್ನು ಒತ್ತಾಯಿಸುವುದಕ್ಕೂ ತೀರ್ಮಾನಿಸಲಾಯಿತು.

Advertisement

ಪ್ರಮುಖವಾಗಿ ವಚನ ಚಳವಳಿಯನ್ನು ಮುಂಬರುವ ಪೀಳಿಗೆಗಳಿಗೆ ಪರಿಚಯಿಸುವ ದೃಷ್ಟಿಯಿಂದ ಶಾಲಾ- ಕಾಲೇಜು ಹಂತಗಳಲ್ಲಿ ಶರಣ ಸಾಹಿತ್ಯ ಕುರಿತ ಪಠ್ಯವನ್ನು ಸೇರಿಸಬೇಕು. ಜತೆಗೆ ಧಾರವಾಡ ವಿ.ವಿ.ಗೆ ವಿಶ್ವಗುರು ಬಸವಣ್ಣನ ಮತ್ತು ಕಲಬುರಗಿ ವಿ.ವಿ.ಗೆ ಡಾ| ಬಿ.ಆರ್‌. ಅಂಬೇಡ್ಕರ್‌ ಹೆಸರಿಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಇದಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸಿದ ಸ್ವಾಮೀಜಿಗಳ ಸ್ಮಾರಕಗಳ ಸಂರಕ್ಷಣೆಗೆ ಸರಕಾರ ಮುಂದಾಗಬೇಕು. ಕೇಂದ್ರ- ರಾಜ್ಯ ಸರಕಾರಿ ಹು¨ªೆಗಳ ಭರ್ತಿಯಲ್ಲಿ ಕನ್ನಡಿಗ ರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಬೇಕು. ಬಸವ ಕಲ್ಯಾಣದ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು. ಮುರುಘಾ ಮಠದಲ್ಲಿ ನಿರ್ಮಾಣವಾಗುತ್ತಿರುವ 325 ಅಡಿ ಎತ್ತರದ ಬಸವಣ್ಣನವರ ಮೂರ್ತಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಮೇಳದ ಸ್ವಾಗತ ಸಮಿತಿ ಉಪಾಧ್ಯಕ್ಷ ಅರುಣ್‌ ಕುಮಾರ್‌ ಸೋಮಣ್ಣ ಗಣಮೇಳದ ನಿರ್ಣಯ ಮಂಡಿಸಿದರು. ಇದಕ್ಕೆ ನೆರೆದ ಭಕ್ತಸಮೂಹ ಒಕ್ಕೊರಲಿನಿಂದ ಸಮ್ಮತಿಸಿತು.

ರೈತನ ನೆಮ್ಮದಿ ಬಜೆಟ್‌ ಗುರಿ
ಈ ಬಾರಿಯ ರಾಜ್ಯ ಬಜೆಟ್‌ ರೈತನ ನೆಮ್ಮದಿಯನ್ನು ಗುರಿ ಯಾಗಿಸಿಕೊಂಡಿದ್ದು, ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುವುದು. ರೈತರು ಸ್ವಾಭಿಮಾನ ಮತ್ತು ನೆಮ್ಮದಿಯಿಂದ ಬದುಕು ನಡೆಸಬೇಕಾಗಿದೆ. ಇದಕ್ಕಾಗಿ ಈ ಬಾರಿ ಮಾ.5ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಸಾಕಷ್ಟು ಹಣ ಮೀಸಲಿಡಲಾಗುವುದು. ಪ್ರಮುಖವಾಗಿ ನೀರಾವರಿಗೆ ಆದ್ಯತೆ ನೀಡುವ ಜತೆಗೆ ಬೆಳೆಗಳಿಗೆ ಹೆಚ್ಚು ಬೆಂಬಲ ಬೆಲೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಈ ಪೈಕಿ 100 ಕೋಟಿ ರೂಪಾಯಿಗಳನ್ನು ಇದೇ ವರ್ಷದಲ್ಲಿ ವಿನಿಯೋಗಿಸಲಾಗುವುದು. ಈ ಮೂಲಕ ದೇಶವೇ ಕಲ್ಯಾಣ ಕರ್ನಾಟಕದತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಲಾಗುವುದು. ರಾಜ್ಯದಲ್ಲಿ ಮಠಮಂದಿರಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಈಗಾಗಲೇ ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ಬಸವ ಮೂರ್ತಿಗೆ ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು.

ಮುರುಘಾಶ್ರೀಗೆ ಕರ್ನಾಟಕ ರತ್ನ
ಗಣಮೇಳದ ನಿರ್ಣಯಗಳಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿಗೆ “ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎನ್ನುವುದೂ ಸೇರಿದೆ. ಇದಕ್ಕೆ ಭಕ್ತರು ಕರತಾಡನದ ಮೂಲಕ ಒಪ್ಪಿಗೆ ಸೂಚಿಸಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತಿಗಿಳಿದಾಗಲೂ ಮುರುಘಾಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಎಂಬ ಕೂಗು ಭಕ್ತರಿಂದ ತೂರಿಬಂತು.

ಸಮರಸದ ಬದುಕಿಗೆ ಮತ್ತಷ್ಟು ಶಕ್ತಿ
ಮುರುಘಾ ಶರಣರು ನಡೆಸಿದ ಈ ಜಾತ್ಯತೀತ ಗಣಮೇಳದ ಫಲಿತಾಂಶವು ನಾಡಿನಲ್ಲಿ ಸಾಮರಸ್ಯ ಬದುಕಿಗೆ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಮಥರಗಣ ಮೇಳದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಅನುಭವ ಮಂಟಪದಲ್ಲಿ ಶರಣರು ಜಾತಿ, ಮತ, ಧರ್ಮದ ಚೌಕಟ್ಟಿಲ್ಲದೆ ವೈಚಾರಿಕತೆಯಲ್ಲಿ ನಡೆದು ಬಂದಿದ್ದರು. ಆ ದಿನಗಳಲ್ಲಿಯೇ ಬಸವಣ್ಣ ನವರು 1.96 ಲಕ್ಷ ಜನರನ್ನು ಒಗ್ಗೂಡಿಸಿ ಜಾತ್ಯತೀತ ವೈಚಾರಿಕ ಗಣಮೇಳ ನಡೆಸಿದ್ದರು ಎಂದು ದಾಖಲಾಗಿದೆ. ಈಗ ಮತ್ತೂಮ್ಮೆ ಮುರುಘಾ ಮಠದ ಶ್ರೀಗಳು ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಗಣಮೇಳ ನಡೆಸುವ ಮೂಲಕ ಅನುಭವ ಮಂಟಪದ ದಿನಗಳನ್ನು ಮರುಕಳಿಸಿದ್ದಾರೆ. ಈ ಮೇಳವು ನಾಡಿನಲ್ಲಿ ವೈಚಾರಿಕತೆ ಮೂಡಿಸಿ ಸಾಮರಸ್ಯ ಬದುಕಿಗೆ ಶಕ್ತಿ ನೀಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next