Advertisement

ಬಸವಣ್ಣ ಓರ್ವ ವಿಸ್ಮಯ ವ್ಯಕ್ತಿಯಾಗಿದ್ದರು

01:16 PM Apr 24, 2017 | Team Udayavani |

ದಾವಣಗೆರೆ: ಬಸವಣ್ಣ ಎಂದರೆ ವಿಸ್ಮಯ ವ್ಯಕ್ತಿ. 12ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಿಸಿ, ಕ್ರಾಂತಿ ಮಾಡಿದರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ವಿರಕ್ತ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಭಾತ್‌ ಪೇರಿ ಶತಮಾನೋತ್ಸವಕ್ಕೆ ಚಾಲನೆನೀಡಿ ಮಾತನಾಡಿದರು.

Advertisement

ಬಸವಣ್ಣನವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಕಾಯಕ ದಿನಾವನ್ನಾಗಿ ಆಚರಣೆ ಮಾಡುವುದರ ಜೊತೆಗೆ ಆ ದಿನದ ರಜೆಯನ್ನು ರದ್ದುಮಾಡಿ ಒಂದು ಗಂಟೆ ಹೆಚ್ಚು ಕಾಲ ಕಾಯಕ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಎಂದರು. ವಿವಿಧ ಮಹಾತ್ಮರ ಜಯಂತಿ ಹೆಸರಿನಲ್ಲಿ ಸರ್ಕಾರ ರಜೆ ಘೋಷಿಸಿ, ಕಾಯಕಕ್ಕೆ ಇರುವ ಮಹತ್ವವನ್ನು ಹಾಳು ಮಾಡುತ್ತಿದೆ.

ಇದರಿಂದ ದೇಶದ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎಂದು ವಿಷಾದಿಸಿದರು. ಬಸವಣ್ಣನ ತತ್ವಗಳು ಎಂದರೆ ಕೇವಲ ಒಂದು ಸಮಾಜದ, ರಾಜ್ಯದ, ದೇಶದ ಉದ್ದಾರಕ್ಕಾಗಿ ಇಲ್ಲ. ಅವು ವಿಶ್ವದ ಉದ್ಧಾರಕ್ಕೆ ಸಂಬಂಧಿಸಿದ್ದರಿಂದ ಈ ಬಗ್ಗೆ ಪ್ರಮುಖವಾದ ಹೆಜ್ಜೆಯನ್ನಿಟ್ಟು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ಜಯಂತಿ ಆಚರಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಒತ್ತಡ ತರಬೇಕು ಎಂದು ತಿಳಿಸಿದರು.

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂದರೆ 1913ರಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಿದ ಕೀರ್ತಿ ದಾವಣಗೆರೆಯ ವಿರಕ್ತಮಠಕ್ಕೆ ಸಲ್ಲುತ್ತದೆ. ಅದೇ ರೀತಿಯಾಗಿ ಇದೇ ಮಠದಿಂದ 1917ರಲ್ಲಿ ಶ್ರೀ ಮೃತ್ಯುಂಜಯ ಅಪ್ಪಗಳು, ಹಡೇìಕರ್‌ ಮಂಜಪ್ಪನವರು ಬಸವ ಪ್ರಭಾತ್‌ ಫೇರಿಯನ್ನು ಪ್ರಾರಂಭಿಸಿದರು.

ನಂತರ ಚಿತ್ರದುರ್ಗ ಜಗದ್ಗುರುಗಳ ಅಪ್ಪಣೆಯಂತೆ ಕಣಕುಪ್ಪಿ ಕೊಟ್ರಬಸಪ್ಪ, ಗುರುಪಾದಪ್ಪನವರು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಈಗ ನೂರು ವರ್ಷಗಳು ಸಂದಿವೆ ಎಂದು ಸ್ಮರಿಸಿದರು.  ಚಿತ್ರದುರ್ಗ ಮೇದಾರ ಕೇತೇಶ್ವರ ಮಠದ ಶ್ರೀ ಬಸವ ಕೇತೇಶ್ವರ ಹಣಮಂತಯ್ಯ ಸ್ವಾಮೀಜಿ, ಮುಖಂಡರಾದ ಕಣಕುಪ್ಪಿ ಮುರುಗೇಶಪ್ಪ,

Advertisement

ಬೂಸನೂರು ಗುರುಬಸಪ್ಪ, ಚಿತ್ರನಟ ಜ್ಯೂನಿಯರ್‌ ನರಸಿಂಹರಾಜ್‌, ಎಂ.ಜಯಕುಮಾರ್‌, ಪಲ್ಲಾಗಟ್ಟಿ ಕೊಟ್ರೇಶಪ್ಪ, ಬಾಳೆಕಾಯಿ ಮುರಿಗೇಶ, ಬಾವಿಕಟ್ಟಿ ಜಗದೀಶ, ಶಾಂತಕುಮಾರ ಸೋಗಿ, ಬಿ.ಎಸ್‌.ಹಿರೇಮಠ, ಮೈಸೂರು ಮಠದ ಮುಪ್ಪಯ್ಯ, ಎಂ.ಕೆ.ಬಕ್ಕಪ್ಪ, ತಿಪ್ಪಣ್ಣ, ವೀರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next