Advertisement

ಮನುಕುಲ ಉದ್ಧರಿಸಿದ ಬಸವಣ್ಣ

10:03 AM Jan 14, 2019 | |

ಬೀದರ: 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತ, ಪಂಥ, ಭೇದವೆನ್ನದೇ ಸಕಲ ಮಾನವರು ನಮ್ಮವರು ಎಂಬ ಸಂದೇಶ ಸಾರಿದ್ದಾರೆ. ಮಾನವ ಜನಾಂಗವನ್ನು ಒಂದುಗೂಡಿಸುವ ಕಾರ್ಯ ಮಾಡಿ ಮನುಕುಲ ಉದ್ಧಾರ ಮಾಡಿದ್ದಾರೆ ಎಂದು ಡಾ|ದೇವಕಿ ಅಶೋಕ ನಾಗೂರೆ ಹೇಳಿದರು.

Advertisement

ನಗರದ ಪ್ರಸಾದ ನಿಲಯದಲ್ಲಿ ಅನುಭವ ಮಂಟಪ 100ನೇ ತಿಂಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರ ಮಾರ್ಗದಂತೆ ಡಾ| ಚನ್ನಬಸವ ಪಟ್ಟದ್ದೇವರು ದೀನ, ದಲಿತರ ಮನೆಗೆ ಹೋಗಿ ಲಿಂಗದೀಕ್ಷೆ ನೀಡುವ ಮೂಲಕ ಪಾವನಗೊಳಿಸಿ, ಬಡಮಕ್ಕಳು ದಲಿತರಿಗಾಗಿ ಪ್ರಸಾದ ನಿಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದರು. ಶ್ರೀಗಳು ಸರಳ ಸಜ್ಜನಿಕೆಯ ಗುರುಗಳಾಗಿ ನಿರಂತರ ಕಾಯಕ ಪರಿಶ್ರಮ ಜೀವಿಯಾಗಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿ, ಬಸವ ತತ್ವವನ್ನು ದೇಶದ ಹಳ್ಳಿ ಹಳ್ಳಿಗೆ ಮುಟ್ಟಿಸುವ ಶ್ರೇಷ್ಠ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಬಸವಕಲ್ಯಾಣ ಅನುಭವ ಮಂಟಪದ ಸಂಗಮೇಶ್ವರ ದೇವರು ಮಾತನಾಡಿ, ಮಾನವನ ಜೀವನವು ಜ್ಞಾನ ಹಾಗೂ ಪ್ರೀತಿಯನ್ನು ಒಳಗೊಂಡು ನಡೆಯುವ ಉದ್ದೇಶ ಹೊಂದಿರಬೇಕು. ಬಸವಣ್ಣನವರು ಮಾನವಕುಲಕ್ಕೆ ಆಧ್ಯಾತ್ಮಿಕ ಜ್ಞಾನ ಕೊಡಲು ಅನುಭವ ಮಂಟಪವನ್ನು ಆಧ್ಯಾತ್ಮಿಕ ಕೇಂದ್ರವನ್ನಾಗಿ ಸ್ಥಾಪಿಸಿದ್ದಾರೆ. ಇಂದು ಮಾನವ ಬದುಕಿನ ನಿಜವಾದ ಅರಿವು ತಿಳಿಯದೇ ನಶ್ವರದ ಬದುಕಿನಡೆಗೆ ಸಾಗುತ್ತಿದ್ದಾನೆ. ಪರಮ ಸತ್ಯದ ಶೋಧನೆ ಮಾಡಿದಾಗ ಮಾತ್ರ ಮಾನವನಿಗೆ ಪರಮ ಶಾಂತಿ ದೊರಕುತ್ತದೆ. ಜೀವನದ ಅಂತಿಮ ಗುರಿಯು ಜ್ಞಾನ ಸಂಪಾದನೆ ಆಗಬೇಕು ಎಂದರು. 12ನೇ ಶತಮಾನದಲ್ಲಿ ಕಾಶ್ಮೀರದ ಮಹಾದೇವ ಭೂಪಾಲ, ಸತ್ಯ ದರ್ಶನಕ್ಕಾಗಿ ಅಧಿಕಾರ ರಾಜ್ಯವೈಭವನ್ನು ಬಿಟ್ಟು ಆತ್ಮ ಸಾಕ್ಷಾತ್ಕಾರಕ್ಕಾಗಿ ಕಲ್ಯಾಣದೆಡೆಗೆ ಬಂದು, ಶರಣ ಸಮೂಹದಲ್ಲಿ ಕಟ್ಟಿಗೆ ಕಾಯಕ ಮಾಡಿ ಪರಮ ಸುಖ ಪಡೆದಿದ್ದಾರೆ ಎಂದು ಹೇಳಿದರು.

ಡಾ| ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ವ್ಯಕ್ತಿ ಬದುಕು ಸಮತೋಲನ ಮಾಡಿಕೊಳ್ಳಬೇಕಾದರೆ ನಿರಂತರವಾಗಿ ಶಿವಜ್ಞಾನ, ಶಿವಧ್ಯಾನ ಮಾಡಲು ಹಾತೊರೆಯಬೇಕು. ಶರಣರ ಸಂತರ ಅನುಭಾವ ಪಡೆದು ಆಧ್ಯಾತ್ಮಿಕತೆ ಕಡೆಗೆ ಸಾಗಬೇಕು. ದೈವಿಶಕ್ತಿ ಪಡೆದುಕೊಳ್ಳಲು ಪ್ರಕೃತಿಯಲ್ಲಿ ಪರಮಾತ್ಮನ ತರಂಗಗಳು ವಿಶ್ವ ತುಂಬೆಲ್ಲ ಹರಡಿರುತ್ತವೆ. ವ್ಯಕ್ತಿಯು ಬಾಹ್ಯ ಪ್ರಪಂಚದಿಂದ ಹೊರ ಬಂದು ವ್ಯಕ್ತಿ ಅಂತರ್ಮುಖೀಯಾದಾಗ ಮಾತ್ರ ವ್ಯಕ್ತಿಗೆ ಪರಮಾನಂದ ಪರಮ ಸುಖ ದೊರಕುತ್ತದೆ ಎಂದು ನುಡಿದರು.

Advertisement

ಸಿದ್ಧಗಂಗಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಬೀದರ ಜಿಲ್ಲಾ ಅಧ್ಯಕ್ಷ ಶಿವಕುಮಾರ ಪಾಟೀಲ ತೆಗಂಪೂರ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ, ಗುರುಬಸವ ಪಟ್ಟದ್ದೇವರು, ಮಹಾಲಿಂಗ ಮಹಾಸ್ವಾಮೀಜಿ, ಬಸವಲಿಂಗ ದೇವರು, ಕೋನಮೇಳಕುಂದದ ಗ್ರಾಮ ಪಂಚಾಯತ ಅಧ್ಯಕ್ಷ ಶಶಿಧರ ಕೋಸಂಬೆ, ಪ್ರೊ| ಎಸ್‌.ಬಿ.ಬಿರಾದಾರ, ವಿದ್ಯಾವತಿ ಬಸವರಾಜ ಉಂಡೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next