Advertisement

ಬಸವಣ್ಣ ದೇವರ ಮಹಾ ರಥೋತ್ಸವಕ್ಕೆ ಚಾಲನೆ

03:26 PM Feb 24, 2020 | Suhan S |

ಬಂಕಾಪುರ: ಪಟ್ಟಣದ ಕೊಟ್ಟಗೇರಿಯ ಶ್ರೀ ಬಂಗಾರ ಬಸವಣ್ಣ ದೇವರ 35ನೇ ವರ್ಷದ ಜಾತ್ರೋತ್ಸವ ಅಂಗವಾಗಿ ನಡೆದ ಬಂಗಾರ ಬಸವಣ್ಣ ದೇವರ ಮಹಾ ರಥೋತ್ಸವಕ್ಕೆ ಅರಳೆಲೆ ಮಠದ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

Advertisement

ಶ್ರೀ ಬಂಗಾರ ಬಸವಣ್ಣ ದೇವರ ರಥೋತ್ಸವ ಭಕ್ತ ಜನಸಾಗರದ ಮಧ್ಯ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂದಿತು. ಭಕ್ತರು ರಥೋತ್ಸವಕ್ಕೆ ಹೂವಿನಮಾಲೆ, ಹಣ್ಣು, ಕಾಯಿ, ಉತ್ತತ್ತಿ ಸಮರ್ಪಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು. ತನ್ನಿಮಿತ್ಯ ಪ್ರಾಥ:ಕಾಲ ಶ್ರೀಬಂಗಾರ ಬಸವಣ್ಣ ದೇವರಿಗೆ ಭಕ್ತ ಮಹೋದಯರಿಂದ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮುತ್ತೆ$çದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ಬಡ್ಡಿ, ಜಿಪಂ ಮಾಜಿ ಸದಸ್ಯ ಎಸ್‌.ಬಿ. ಗಚ್ಚಿನಮಠ, ದೇವಸ್ಥಾನದ ಶಾಸ್ತ್ರೀಜಿ ರಾಚಯ್ಯ ಆದವಾನಿಮಠ, ಬಸಪ್ಪ ಸೊಪ್ಪಿನ, ಈರಣ್ಣ ಅಂಗಡಿ, ಶಿವಾನಂದ ಎಲಿಗಾರ, ಮಲ್ಲೇಶಪ್ಪ ಬಡ್ಡಿ, ಸತೀಷ ವನಹಳ್ಳಿ, ಮಲ್ಲೇಶಪ್ಪ ಬಂಗಿ, ಈರಪ್ಪ ಕೋಣನತಂಬಗಿ, ಚನ್ನವೀರಪ್ಪ ಎಲಿಗಾರ, ಫಕ್ಕೀರೇಶ ಸಣ್ಣಮನಿ, ಗದಿಗಯ್ಯ ಹುಣಸಿಕಟ್ಟಿಮಠ ಸೇರಿದಂತೆ ಬಿಸನಳ್ಳಿ ಕಾಶಿ ಪೀಠದ ವೇದ ಪಾಠಶಾಲೆಯ ಮಕ್ಕಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next