Advertisement

ಪ್ರಕೃತಿ ಮಾತೆಗೆ ಪೂಜೆ ಸಲ್ಲಿಸಿ

05:45 PM Dec 09, 2019 | Naveen |

ಬಸವನಬಾಗೇವಾಡಿ: ಜಾತ್ಯತೀತ ಭಾರತ ದೇಶದಲ್ಲಿ 33 ಕೋಟಿ ದೇವರುಗಳನ್ನು ಪೂಜಿಸುತ್ತಾರೆ. ಆದರೆ ಪ್ರಕೃತಿ ಮಾತ್ರ ನಮ್ಮ ದೇವರು, ಅದನ್ನು ನಾವು ನಿತ್ಯ ಪೂಜಿಸಿದಾಗ ಮಾತ್ರ ಬದುಕಲು ಸಾಧ್ಯವಾಗುತ್ತದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಪಟ್ಟಣದ ಇಕ್ಬಾಲ್‌ ನಗರದಲ್ಲಿ ಅಮೋಘ ಸಿದ್ದೇಶ್ವರ ಜಾತ್ರಾ ಮೋಹತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಜನ್ಮ ಭೂಮಿಯಲ್ಲಿ ಅನೇಕ ಶರಣರು, ಸಂತರು, ಸೂಫಿಗಳು ಅನೇಕ ಕೊಡುಗೆ ನೀಡಿದ್ದಾರೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗಾಗಿ ಹೋರಾಟ ಮಾಡಿದ ಫಲದಿಂದ 21ನೇ ಶತಮಾನದಲ್ಲಿ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ಸಿಗುತ್ತಿದೆ. ಮಹಿಳೆಯರು ಎಲ್ಲ ರಂಗದಲ್ಲಿ ತಮ್ಮ ಸಾಧನೆ ತೋರುತ್ತಿದ್ದಾರೆ. ಒಬ್ಬ ಮಹಿಳೆ ಶೈಕ್ಷಣಿಕವಾಗಿ ಪ್ರಗತಿ ಸಾ ಧಿಸಿದರೆ ಇಡಿ ಕುಟುಂಬ ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈರಯ್ಯ ಹಿರೇಮಠ ಸಾನ್ನಿಧ್ಯ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಬಿ. ಒಡೆಯರ, ಸಂಗಮೇಶ ಓಲೇಕಾರ, ಅಶೋಕ ಚಲವಾದಿ, ಸಾಹಿತಿ ಲ.ರು. ಗೊಳಸಂಗಿ, ಡಾ| ಮಹಾಂತೇಶ ಜಾಲಗೇರಿ, ಡಾ| ಅಮರೇಶ ಮಿಣಜಗಿ, ಪುರಸಭೆ ಸದಸ್ಯ ಅಶೋಕ ಹಾರಿವಾಳ, ರಾಜು ಬೂತನಾಳ, ದೇವೇಂದ್ರ ನಾಯಕ, ಪ್ರವೀಣ ಪೂಜಾರ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಬಸಣ್ಣ ದೇಸಾಯಿ, ಎಸ್‌.ಜಿ. ಹೆಗಡ್ಯಾಳ, ಶರಣಪ್ಪ ಬಲ್ಲದ, ಎಂ.ಎಸ್‌. ಬೂದಿಹಾಳ, ಸಂಗಮೇಶ ಪೂಜಾರಿ, ಎಸ್‌.ಎಸ್‌. ಕುದರಕರ, ಬಿ.ಎ. ಸೌದಾಗರ, ಲಾಲಸಾಬ ರಗಟಿ, ಇಸಾಕ್‌ ನಾಯ್ಕೋಡಿ, ಅಬ್ದುಲ್‌ ಶಿವಣಗಿ, ಮಹಿಬೂಬಸಾಬ ಮಮದಾಪುರ ಇದ್ದರು.

ಅಶೋಕ ಚಲವಾದಿ ಸ್ವಾಗತಿಸಿದರು. ಮೈಬೂಸಾಬ ನಾಯ್ಕೋಡಿ ನಿರೂಪಿಸಿದರು. ಎಂ.ಎಸ್‌. ಅಂಗಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next