Advertisement

ರಾಮಮಂದಿರ ಶೀಘ್ರ ನಿರ್ಮಾಣ

11:35 AM Feb 13, 2020 | Naveen |

ಬಸವನಬಾಗೇವಾಡಿ: ಭಾರತದ ಬುಹುಕೋಟಿ ಜನರ ಬಹು ದಿನಗಳ ಆಸೆಯಂತೆ ಅಯೋಧ್ಯೆಯಲ್ಲಿ ಶೀಘ್ರ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಭಾರತದ ಜನರ ಆಸೆ ಈಡೇರಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಹೇಳಿದರು.

Advertisement

ಮಂಗಳವಾರ ಪಟ್ಟಣದ ವಿರಕ್ತ ಮಠದಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕು ಘಟಕದಿಂದ ಪಂಡಿತ್‌ ದೀನದಯಾಳ ಉಪಾಧ್ಯಾಯ ಅವರ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವಾರು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ
ನಿರ್ಮಾಣವಾಗಬೇಕಾಗಿತ್ತು. ಆದರೆ ಕೆಲವು ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಮಮಂದಿರ ನಿರ್ಮಾಣಕ್ಕೆ ಅಡೆತಡೆ ಒಡ್ಡಿದ್ದವು. ಈಗ ರಾಮಮಂದಿರ ನಿರ್ಮಾಣ ಕಾರ್ಯ ಶಿಘ್ರ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಪಂಡಿತ್‌ ದೀನದಯಾಳ ಉಪಾಧ್ಯಾಯ ಅವರದು ಭಾರತದ ರಾಜಕೀಯದಲ್ಲಿ ಅಚ್ಚಳಿಯದ ಹೆಸರು. ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಬ ದ್ಧತೆಯೊಂದಿಗೆ ಹೊಸ ರಾಜಕಾರಣದ ದಿಕ್ಕು ಪ್ರಾರಂಭಿಸಿದವರು. ಸರಳ ಹಾಗೂ ವಿನಯವಂತಿಕೆ ವ್ಯಕ್ತಿತ್ವ ಹೊಂದಿದ್ದ ಉಪಾಧ್ಯಾಯ ಅವರು 1951ರಲ್ಲಿ ಜನ ಸಂಘವನ್ನು ಕಟ್ಟಿ ಪಕ್ಷಕ್ಕಾಗಿ ಸರ್ವಸ್ವವನ್ನೆ ತ್ಯಾಗ ಮಾಡಿದ ತ್ಯಾಗ ಜೀವಿಯಾಗಿದ್ದಾರೆ. ಇಂಥವರ ಆದರ್ಶ ಅಳವಡಿಸಿಕೊಂಡು ಸದೃಢ ಭಾರತ ಕಟ್ಟೋಣ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಬಿಜೆಪಿ ಅನೇಕ ನಾಯಕರು ರಾಷ್ಟ್ರಪ್ರೇಮದಿಂದ ಪಕ್ಷದಲ್ಲಿ ತಮ್ಮ ಜೀವನವನ್ನೆ ದಾರೆ ಎರೆದಿದ್ದಾರೆ. ಇಂಥವರ ಮಾರ್ಗದರ್ಶನ ಮತ್ತು ಅವರ ಆದರ್ಶದೊಂದಿಗೆ ನಾವು ಕೂಡಾ ರಾಷ್ಟ್ರ ಸೇವೆಗಾಗಿ ಪಕ್ಷಕ್ಕೆ ಸೇವೆ ಸಲ್ಲಿಸೋಣ ಎಂದರು.

Advertisement

ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ನೀಲಪ್ಪ ನಾಯಕ, ಪ್ರವೀಣ ಪವಾರ, ಬಿಜೆಪಿ ಮುಖಂಡರಾದ ಅಂಬೋಜಿ ಪವಾರ, ವಿ.ಎಂ. ಪರೆಣ್ಣನವರ, ಬಸವರಾಜ ಬಿಜಾಪುರ, ಸಾವಿತ್ರಿ ಕಲ್ಯಾಣಶೆಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next