Advertisement

ಶ್ರೀಗುರು ಆರೂಢರ ಮಹಾರಥೋತ್ಸವ

11:43 AM Feb 15, 2020 | Naveen |

ಬಸವನಬಾಗೇವಾಡಿ: ಸುಕ್ಷೇತ್ರ ಆರೂಢರ ಐಕ್ಯಸ್ಥಳ ಆರೂಢನಂದಿ ಹಾಳದ ಬ್ರಹ್ಮಸ್ವರೂಪಿ ಶ್ರೀಗುರು ಆರೂಢರ 37ನೇ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ ಜರುಗಿತು.

Advertisement

ಜಾತ್ರೆ ನಿಮಿತ್ತ ಗುರು ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀಗುರು ಆರೂಢರ ಗ್ರಂಥ ಪಾರಾಯಣ, ಅಭಿಷೇಕದ ನಂತರ ಕಳಸವನ್ನು ಸುಮಂಗಲೆಯರಿಂದ ಗಂಗಾಸ್ಥಳಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿ ಡೊಳ್ಳಿನ ಮೇಳದೊಂದಿಗೆ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಲಾಯಿತು.

ಸಂಜೆ ಪುಣೆ, ಔರಂಗಾಬಾದ, ಚಿತ್ರದುರ್ಗ, ಮೈಸೂರು, ಗೋವಾ, ಹುಬ್ಬಳ್ಳಿ, ಹಾವೇರಿ, ಬೆಂಗಳೂರು, ಹೂವಿನಹಿಪ್ಪರಗಿ, ಹುಣಸಗಿ, ಆಲಮೇಲ, ಮುದ್ದೇಬಿಹಾಳ, ಯಡ್ರಾಮಿ, ತೆಲಗಬಾಳ, ವಿಜಯಪುರ, ಬನಹಟ್ಟಿ, ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಸಹಸ್ರ ಸಂಖ್ಯೆ ಭಕ್ತಾ ದಿಗಳು ಶ್ರೀಮಠದಿಂದ ಯಾಳವಾರ ರಸ್ತೆಯಲ್ಲಿರುವ ಪಾದಗಟ್ಟೆವರೆಗೆ ತೇರು ಎಳೆದು ಭಕ್ತಿ ಸಮರ್ಪಿಸಿದರು.

ಜಾತ್ರೆಗೆ ಆಗಮಿಸಿದ್ದ ಭಕ್ತರು ಉತ್ತತ್ತಿ, ಹೂ, ಹಣ್ಣು, ಕಬ್ಬು ಸಮರ್ಪಿಸಿದರು. ಅಹೋರಾತ್ರಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಪ್ರಧಾನ ನಾಟಕ ಪ್ರದರ್ಶನವಾಯಿತು. ನಂತರ ಜರುಗಿದ ಬಾನಂಗಳದಲ್ಲಿ ಮದ್ದು ಸಿಡಿಯುವ ರಂಗವಲ್ಲಿಯ ಚಿತ್ತಾರ ಬಿಡಿಸಿದ್ದು ಭಕ್ತರ ಹರ್ಷವನ್ನು ಮತ್ತಷ್ಟು ಇಮ್ಮಡಿಗೊಳಿಸುವಂತಿತ್ತು. ರಥೋತ್ಸವಕ್ಕೆ ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಕಮಿಟಿ ಅಧ್ಯಕ್ಷ ಎಸ್‌.ವಿ. ಕನ್ನೂರ, ಕಾರ್ಯದರ್ಶಿ ಬಮ್ಮಯ್ಯ ಹಿರೇಮಠ, ಕೆಂಚಪ್ಪ ವಾಲೀಕಾರ, ಬಸಣ್ಣ ಬಡಿಗೇರ, ಕೆಂಚು ವಾಲೀಕಾರ, ಗುರುನಗೌಡ ಪಾಟೀಲ, ಪತ್ತು ಚಪ್ಪರಬಂದ, ಇರಗಂಟೆಪ್ಪ ಸಜ್ಜನ, ಖಾಸ್ಗತ ಮದರಿ, ಗುರುನಾಥ ಸಜ್ಜನ, ಸಂಗಪ್ಪ ಅಂಗಡಿ, ಚನ್ನಪ್ಪ ಸಜ್ಜನ, ಗುರು ಹಿರೇಮಠ, ಸಿದ್ದು ಮದರಿ, ಖಾಸ್ಗತ ಸಜ್ಜನ, ಶಾಂತಯ್ಯ ಹಿರೇಮಠ, ಶ್ರೀಶೈಲ ಹಬ್ಯಾಳ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next