Advertisement

ರೈತರ ಸಮಸ್ಯೆಗೆ ಸ್ಪಂದಿಸಲು ಒತ್ತಾಯ

01:31 PM Jul 03, 2019 | Naveen |

ಬಸವನಬಾಗೇವಾಡಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತರು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೆಲ ಹೊತ್ತು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ಬಸ್‌ ನಿಲ್ದಾಣ ಮಾರ್ಗವಾಗಿ ಮುದ್ದೇಬಿಹಾಳ ರಸ್ತೆಯ ತಹಶೀಲ್ದಾರ್‌ ಕಚೇರಿಗೆ ತೆರಳಿದರು.

ಈ ವೇಳೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯ ಸರಕಾರ ಅನ್ನದಾತರೊಂದಿಗೆ ಚಲ್ಲಾಟವಾಡದೆ ಅವರ ಹಕ್ಕನ್ನು ಅವರಿಗೆ ನೀಡಿ ಇಲ್ಲವಾದರೆ ಮುಂದಾಗುವ ಹೋರಾಟದ ಪರಿಣಾಮಕ್ಕೆ ರಾಜ್ಯ ಸರಕಾರವೇ ಹೊಣೆಯಾಗಬೇಕಾಗುತ್ತದೆ. ಇದನ್ನು ಅರಿತುಕೊಂಡು ತಕ್ಷಣ ಬೆಳೆ ಪರಿಹಾರ ವಿತರಣೆ ಮಾಡಬೇಕು ಎಂದರು.

ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಆದರೆ ಕಳೆದ 4-5 ವರ್ಷದಿಂದ ಭೀಕರ ಬರಗಾಲಕ್ಕೆ ತುತ್ತಾಗಿರುವ ಬಸವನಬಾಗೇವಾಡಿ ಹಾಗೂ ನೂತನ ತಾಲೂಕುಗಳಾದ ಕೊಲಾØರ, ನಿಡಗುಂದಿ ತಾಲೂಕುಗಳು ಮಾತ್ರ ಬರಗಾಲ ಪೀಡಿತದಿಂದ ಕೈ ಬಿಟ್ಟಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು. ರಾಜ್ಯ ಸರಕಾರ ಇನ್ನೂ 2-3 ದಿನಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ಬಸವನಬಾಗೇವಾಡಿ ಸೇರಿದಂತೆ ವಿವಿಧ ತಾಲೂಕುಗಳನ್ನು ಬಂದ್‌ ಮಾಡಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರಭಂಟನಾಳದ ಶಿವಕುಮಾರ ಶ್ರೀಗಳು, ಮಸಬಿನಾಳ ವಿರಕ್ತಮಠದ ಸಿದ್ದರಾಮ ಶ್ರೀಗಳು ಮಾತನಾಡಿ, ಈಗ ತಾಲೂಕಿನಾದ್ಯಾಂತ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದು ಬಿತ್ತನೆ ಕಾರ್ಯ ಚುರುಕಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ರೈತರು ಕಳೆದ 8 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು ಕೂಡಾ ರಾಜ್ಯ ಸರಕಾರ ಮಾತ್ರ ರೈತರ ನೆರವಿಗೆ ಬರದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಹೇಳಿದರು.

Advertisement

ತಾಲೂಕಿನ ರೈತರ ಸಮಸ್ಯೆ ಮನಗಂಡು ಇಂದು ತಾಲೂಕಿನ ವಿವಿಧ ಮಠಗಳ ಮಠಾಧಿಧೀಶರು ಬೀದಿಗಿಳಿದು ರೈತರ ಹಕ್ಕಿಗಾಗಿ ಹೋರಾಟ ಮಾಡುವಂತ ಸ್ಥಿತಿ ಬಂದೊದಗಿದೆ. ಈಗಲಾದರು ರಾಜ್ಯಸರಕಾರ ಎಚ್ಚೆತ್ತುಗೊಂಡು ತಾಲೂಕಿನ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಕಾರ್ಯಕ್ಕೆ ಮುಂದಾಹಬೇಕು. ಒಂದು ವೇಳೆ ಹೀಗೆ ಮುಂದುವರಿದರೆ ರೈತರ ಶಾಪ ತಟ್ಟುವುದು ನಿಶ್ಚಿತ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಹುಣಶ್ಯಾಳದ ಬಸವಾನಂದ ಶ್ರೀಗಳು, ಕೃಷಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಲ್. ಪಾಟೀಲ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ರಂಜಣಗಿ, ಕರವೇ ಜಿಲ್ಲಾ ಉಪಾಧ್ಯಕ್ಷ ಅಶೋಕ ಹಾರಿವಾಳ, ರೈತ ಸಂಘದ ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ತಾಲೂಕು ಉಪಾಧ್ಯಕ್ಷ ಹೊನಕೆರೆಪ್ಪ ತೆಲಗಿ, ಉಮೇಶ ಅವಟಿ, ಶ್ರೀಶೈಲ ಹೆಬ್ಟಾಳ, ಆನಂದ ನಾಶಿ, ಮೌನೇಶ ಪತ್ತಾರ, ಶ್ರೀಶೈಲ ಬಿರಾದಾರ, ಸಿದ್ದು ಮೇಟಿ, ಸುನೀಲ ರಾಠೊಡ, ವಿಜಯಕುಮಾರ ಯಂಭತ್ನಾಳ, ವಿಲಾಸ ರಾಠೊಡ, ರಾಜಶೇಖರ ಹುಲ್ಲೂರ, ರಾಮದೇವ ರಾಠೊಡ, ರಾಜು ದೊರೆ, ವಿವೇಕಾನಂದ ಹಿರೇಮಠ, ರೈತ ಮುಖಂಡರಾದ ಸದಾಶಿವ ಬರಟಗಿ, ಗುರು ಕೋಟ್ಯಾಳ, ಬಸವರಾಜ ಜಂಗಮಶೆಟ್ಟಿ, ಈರಣ್ಣ ದೇವರಗುಡಿ, ಕೃಷ್ಣಪ್ಪ ಬಮರೆಡ್ಡಿ, ಶೆಟ್ಟೆಪ್ಪ ಲಮಾಣಿ, ಚಂದ್ರಾಮ ತೆಲಗಿ, ಹನುಮಂತ ತೋಟದ, ಶಿವಪ್ಪ ಮಂಗೊಂಡ, ಶಾರದ ಲಮಾಣಿ, ಈರಣ್ಣ ದೇವರಗುಡಿ, ಶಂಕರ ಲಮಾಣಿ, ಮಾಚ ಪ್ಪ ಹೊರ್ತಿ, ರಾಮಣ್ಣ ವಾಲೀಕಾರ, ಮಹಿಬೂಬಸಾಬ ಅವಟಿ, ಅಂದಾನೆಪ್ಪ ಬಿರಾದಾರ, ಸಾಯಬಣ್ಣ ಪೂಜಾರಿ, ರಾಮು ಲಮಾಣಿ, ರಾಮಚಂದ್ರ ಬಡಿಗೇರ, ಸಂಜಯ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next