Advertisement
ಶುಕ್ರವಾರ ಪಟ್ಟಣದ ಮಿನಿವಿಧಾನ ಸೌಧದ ಮುಂದೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು.
Related Articles
Advertisement
ನಮ್ಮ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದು ಭೇಟಿ ನೀಡಿದ್ದು ಸ್ವಾಗತಾರ್ಹ. ಆದಷ್ಟು ಬೇಗ ತಾವು ಕೂಡಾ ರಾಜ್ಯ ಸರಕಾರದ ಮೇಲೆ ಒತ್ತಡ ತಂದು ಕೈ ಬಿಟ್ಟು ಹೋಗಿರುವ ಬರಗಾಲ ಪಟ್ಟಿಯಿಂದ ತಾಲೂಕುಗಳನ್ನು ಪುನಃ ಸೇರ್ಪಡೆ ಮಾಡಿಸುವಂತೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ವಕೀಲರ ಬೆಂಬಲ: ಶುಕ್ರವಾರ ವಕೀಲರು ಕೋರ್ಟ್ ಕಲಾಪದಿಂದ ದೂರ ಉಳಿದು ರೈತರು ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯಸರಕಾರಕ್ಕೆ ಒತ್ತಾಯಿಸಿದರು.
ನ್ಯಾಯವಾಗಳ ಸಂಘದ ತಾಲೂಕಾಧ್ಯಕ್ಷ ಎನ್.ಎಸ್. ಪಾಟೀಲ, ನ್ಯಾಯವಾದಿಗಳಾದ ಆರ್.ವಿ. ಗುತ್ತರಗಿಮಠ, ಮಲ್ಲಿಕಾರ್ಜುನ ಗೊಳಸಂಗಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಕಳೆದ 4-5 ವರ್ಷದಿಂದ ಭೀಕರ ಬರಗಾಲಕ್ಕೆ ತುತ್ತಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬಸವನಬಾಗೇವಾಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶದಿಂದ ಕೈ ಬಿಟ್ಟಿರುವುದು ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು ಹೇಳಿದರು.
ನ್ಯಾಯವಾದಿಗಳಾದ ಪ್ರಕಾಶ ಗಬ್ಬೂರ, ರವಿ ರಾಠೊಡ, ಸುರೇಶ ಚಿಂಚೋಳಿ, ವೀರಣ್ಣ ಮರ್ತೂರ, ಮಲ್ಲಿಕಾರ್ಜುನ ದೇವರಮನಿ, ಜಿ.ಜಿ. ಬಿಸನಾಳ, ಪಿ.ಎಚ್. ಹಡಪದ, ಶಿವಾನಂದ ಒನರೆಟ್ಟಿ, ಆರ್.ಎನ್. ಮ್ಯಾಗೇರಿ, ಆರ್.ಎಸ್. ಬಂಡಿಪಾಟೀಲ, ಪಿ.ಪಿ. ರಾಠೊಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಧರಣಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಲ್. ಪಾಟೀಲ, ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ಅಶೋಕ ಹಾರಿವಾಳ, ಬಿ.ಎಸ್. ಹೊರ್ತಿ, ಕೃಷ್ಣಪ್ಪ ಬಮರೆಡಿ, ತಾಲೂಕು ಉಪಾಧ್ಯಕ್ಷ ಹೊನಕೆರೆಪ್ಪ ತೆಲಗಿ, ಸಂಜಯ ಕುಲಕರ್ಣಿ ಬಸಣ್ಣ ಗುರಡ್ಡಿ, ಕಲ್ಲಪ್ಪ ಕುಂಬಾರ, ರಾಮಣ್ಣ ಚಿಮ್ಮಲಗಿ, ಸಿದ್ದಪ್ಪ ಹಿಪ್ಪರಗಿ, ಕಾಸಪ್ಪ ಶಿವಣಗಿ, ಅಡಿವೇಪ್ಪ ಉಪ್ಪಾರ, ಯಲ್ಲಪ್ಪ ಯಂಬತ್ನಾಳ, ಶಾಂತಗೌಡ ಬಿರಾದಾರ, ರುದ್ರಪ್ಪ ಮಡಿಕೇಶ್ವರ, ಸಿದ್ದಪ್ಪ ಆಸಂಗಿ ಭಾಗವಹಿಸಿದ್ದರು.
ಬಸವನಬಾಗೇವಾಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.