ಬಸವನಬಾಗೇವಾಡಿ: ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ಉಪಾಹಾರ ಮತ್ತು ಊಟ ಮಾಡಿದರೆ ರೋಗ ಕಟ್ಟಿಟ್ಟ ಬುತ್ತಿ ಎಂಬ ಮಾತು ಕೇಳಿ ಬರುತ್ತಿದೆ.
ರಾಜ್ಯ ಸರಕಾರದ ಮಹತ್ತರ ಯೋಜನೆಯಾದ ಇಂದಿರಾ ಕ್ಯಾಂಟೀನ್ ಫೆ. 2ರಂದು ಉದ್ಘಾಟನೆಗೊಂಡ ಕೇವಲ 2 ತಿಂಗಳಲ್ಲಿ ಸಾರ್ವಜನಿಕರು ಈ ಕ್ಯಾಂಟೀನ್‌ತ್ತ ಉಪಾಹಾರ ಮತ್ತು ಊಟ ಮಾಡಿಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂದಿರಾ ಕ್ಯಾಂಟಿನ್‌ಲ್ಲಿ ತಯಾರಿಸುವ ಆಹಾರದ ಮುಸರೆ ನೀರು ಕಾಂಪೌಂಡ್‌ನ ಒಂದು ಡೊಂಗೆಯಲ್ಲಿ ಸಂಗ್ರಹವಾಗುತ್ತಿದೆ. ಹೀಗಾಗಿ ನಿಂತ ನೀರಿನಲ್ಲಿ ಅನೇಕ ಕ್ರೀಮಿ ಕೀಟಗಳು ಹುಟ್ಟುತ್ತಿದ್ದು ಗಬ್ಬೆದ್ದು ನಾರುತ್ತಿರುವುದರಿಂದ ಸಾರ್ವಜನಿಕರು ಇಂದಿರಾ ಕ್ಯಾಂಟಿನ್ ಹತ್ತಿರ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರ ಕೇವಲ 5 ರೂ. ಹಾಗೂ ಮಧ್ಯಾಹ್ನದ ಊಟ 10 ರೂ.ಗೆ ಸಿಗುತ್ತದೆ. ಆರಂಭವಾದಾಗಿನಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಈಗ ಕ್ಯಾಂಟೀನ್‌ಲ್ಲಿ ಸ್ವಚ್ಛತೆ ಇಲ್ಲದ ಕಾರಣ ಜನರು ಇತ್ತ ಸುಳಿಯುತ್ತಿಲ್ಲ. ಒಂದು ವೇಳೆ ಬಂದರೂ ಸಹ ಮೂಗು ಮುಚ್ಚಿಕೊಂಡು ಆಹಾರ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಕೊಳಚೆ ನೀರನ್ನು ಬೇರೆ ಕಡೆ ಸಾಗಿಸುವಂತೆ ವ್ಯವಸ್ಥೆ ಮಾಡಿದರೆ ಮತ್ತೆ ಜನರು ಇಂದಿರಾ ಕ್ಯಾಂಟೀನ್‌ತ್ತ ಹೆಜ್ಜೆ ಹಾಕುವುದು ನಿಶ್ಚಿತ.
ಪ್ರಕಾಶ ಬೆಣ್ಣೂರ