ಅಧಿ ಕಾರ ಪಡೆಯುವುದರಿಂದ ಜೀವನ ಸಾರ್ಥಕವಾಗುವುದಿಲ್ಲ. ಧರ್ಮದ ಚೌಕಟ್ಟಿನಲ್ಲಿ, ಹಿಂದಿನ ಪರಂಪರೆ, ಸಂಪ್ರದಾಯ ಮುಂದುವರಿಸಿಕೊಂಡು ಹೋದಾಗ ಬದುಕು ಸಾರ್ಥಕವಾಗುತ್ತದೆ
ಎಂದು ಹಿರಿಯ ಸಂಶೋಧಕ, ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅಭಿಪ್ರಾಯಪಟ್ಟರು.
Advertisement
ಶನಿವಾರ ತಾಲೂಕಿನ ಕೊಲ್ಹಾರ ಪಟ್ಟಣದ ಸಂಗಪ್ಪ ಗಣಿಯವರಉಪ್ಪಲದಿನ್ನಿ ರಸ್ತೆಯ ತೋಟದಲ್ಲಿ ನೂತನವಾಗಿ ನಿರ್ಮಿಸಿರುವ
ಸಂಗಮೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ
ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಪ್ರತಿಯೊಂದು ಊರಿಗೆ, ಸಮಾಜಕ್ಕೆ ಹಾಗೂ ಮನೆತನಗಳಿಗೆ ತನ್ನದೇಯಾದ ಇತಿಹಾಸವಿರುತ್ತದೆ. ಕೇವಲ ಮಂತ್ರ, ತಂತ್ರಗಳಲ್ಲಿ, ಹೋಮ ಹವನಗಳಲ್ಲಿ ಆಶೀರ್ವಚನಗಳಲ್ಲಿ ಧರ್ಮವಿಲ್ಲ. ಸಂಪ್ರದಾಯದಿಂದ ಬಂದಂತಹ ಹಿರಿಯರು ಹಾಕಿಕೊಟ್ಟ ದಾರಿಯನ್ನು ಚಾಚು ತಪ್ಪದೇ ಮುಂದುವರಿಸಿಕೊಂಡು ಹೋಗುವುದೇ ಧರ್ಮ ಎಂದು ಹೇಳಿದರು.
ಶಿವಾಚಾರ್ಯರು, ಮುರುಘೇಂದ್ರ ಸ್ವಾಮಿಗಳು, ಕೊಲ್ಹಾರ ದಿಗಂಬರೇಶ್ವರ ಮಠದ ಸ್ವಾಮಿಗಳು ಹಾಗೂ ಶೀಲವಂತ ಹಿರೇಮಠದ ಕೈಲಾಸನಾಥ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ.ವಿ.ಡಿ. ಐಹೊಳೆ, ಸ್ಥಾನಿಕ ಸಂಪಾದಕ ವಾಸುದೇವ ಹೆರಕಲ್ ಸೇರಿದಂತೆ ಇತರರು ಭಾವಹಿಸಿದ್ದರು.