Advertisement

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ

10:51 AM Aug 23, 2019 | Team Udayavani |

ಬಸವಕಲ್ಯಾಣ: ತ್ರಿಪುರಾಂತದ ಬಂದವರ ಓಣಿಯಲ್ಲಿ ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ಶ್ರೀ ರಾಮಲಿಂಗೇಶ್ವರ ಗುಡಿಯಲ್ಲಿನ ಲಿಂಗ ಮತ್ತು ಗವಿಯೊಳಗಿನ ಶ್ರೀ ರಾಮಲಿಂಗೇಶ್ವರ ಭಾವಚಿತ್ರ ತೆರವು ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ಹೇಳಿದರು.

Advertisement

ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ, ಟೋಕ್ರಿ ಕೋಲಿ ಮತ್ತು ಬಸವಕಲ್ಯಾಣ ಲಿಂಗಾಯತ ಸಮಾಜದ ಮುಖಂಡ ಸಮ್ಮುಖದಲ್ಲಿ ಗುರುವಾರ ನಡೆದ ಶಾಂತಿ ಸಂಧಾನ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಏಪ್ರಿಲ್ನಲ್ಲಿ ಕಿಡಿಗೇಡಿಗಳು ಬಂದವರ ಓಣಿಯ ಶ್ರೀ ರಾಮಲಿಂಗೇಶ್ವರ ಗುಡಿಯೊಳಗಿದ್ದ ಲಿಂಗ ಮತ್ತು ಗವಿಯೊಳಗಿದ್ದ ಶ್ರೀ ರಾಮಲಿಂಗೇಶ್ವರ ಭಾವಚಿತ್ರವನ್ನು ತೆರವುಗೊಳಿಸಿ ಅವುಗಳ ಸ್ಥಳದಲ್ಲಿ ಅಕ್ಕಮಹಾದೇವಿಯ ಭಾವಚಿತ್ರ ಇಟ್ಟಿದ್ದರು. ಈ ಘಟನೆ ಖಂಡಿಸಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಷಣ್ಮುಖಪ್ಪ ಮರಗಣ್ಣಾ ಬೊಕ್ಕೆ ಮತ್ತು ಬಾಬುರಾವ್‌ ಮಹಾರಾಜ ಇಲ್ಲಾಳ ಅವರು ತಹಶೀಲ್ದಾರ್‌ ಕಚೇರಿಗೆ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಒಳಗೆ ಜಿಲ್ಲಾಧಿಕಾರಿ ಮತ್ತು ಬಿಕೆಡಿಬಿಯ ಅಂದಿನ ವಿಶೇಷಾಧಿಕಾರಿ ಡಾ| ಎಸ್‌.ಎಂ.ಜಾಮದಾರ ನೇತೃತ್ವದಲ್ಲಿ ಸಭೆ ಆಯೋಜಿಸಿ, ಈ ಕುರಿತು ಚರ್ಚಿಸುವ ಮೂಲಕ ಯಾವರೀತಿ ಅದನ್ನು ಬಗೆಹರಿಸಬೇಕು ಎಂಬುವುದರ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರಿಗೆ ಬಂದವರ ಓಣಿ ಸರ್ಕಾರ ಸಂರಕ್ಷಣೆಯಲ್ಲಿ ಇರುತ್ತದೆ. ಅಲ್ಲಿಯವರಿಗೆ ಎಲ್ಲರೂ ಶಾಂತಿಯಿಂದ ಇರಬೇಕು ಮನವಿ ಮಾಡಿದರು.

ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಇದು ವಿಶ್ವಗುರು ಬಸವಣ್ಣನವರ ಕರ್ಮಭೂಮಿಯಾಗಿದೆ. ಎಲ್ಲರು ಸಹೋದರರಂತೆ ಬದುಕಬೇಕು. ಜಿಲ್ಲಾಧಿಕಾರಿ ಮತ್ತು ಅಂದಿನ ಬಿಕೆಡಿಬಿ ವಿಶೇಷಾಧಿಕಾರಿಯಾಗಿದ್ದ ಡಾ| ಎಸ್‌.ಎಂ.ಜಾಮದಾರ ಅವರನ್ನು ಕರೆಸಿ ಚರ್ಚಿಸಲಾಗುವುದು. ನಂತರ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರು ಬದ್ಧರಾಗಬೇಕು ಎಂದು ಸಲಹೆ ನೀಡಿದರು.

ಲಿಂಗಾಯತ ಸಮಾಜದ ವತಿಯಿಂದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನಿಲ್ಕುಮಾರ ರಗಟೆ, ಡಾ| ಎಸ್‌.ಬಿ. ದುರ್ಗೆ, ಬಸವರಾಜ ಬಾಲಿಕೀಲೆ, ರವಿ ಕೊಳಕುರ್‌, ಕಾಶಪ್ಪ ಸಕ್ಕರಬಾವೆ ಹಾಗೂ ಟೋಕ್ರಿ-ಕೋಳಿ ಸಮಾಜದ ವತಿಯಿಂದ ಗೋವಿಂದ ಚಾಮಾಲೆ, ನಗರಸಭೆ ಸದಸ್ಯ ಮಲ್ಲಿಕಾರ್ಜುನ್‌ ಬೊಕ್ಕೆ, ರಾಮಣ್ಣಾ ಮಂಠಾಳೆ, ನಾಗನಾಥ ಚಾಮಾಲೆ, ದಿಗಂಬರ ಬೊಕ್ಕೆ, ಸುನಿಲ್ ಬೋಯಿನೆ, ಮರಗಪ್ಪ ಬೊಕ್ಕೆ ಹಾಜರಿದ್ದರು.

Advertisement

ಸಭೆ ಮುಕ್ತಾಯ ಬಳಿಕ ಶಾಸಕ ಬಿ.ನಾರಾಯಣರಾವ್‌, ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ, ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ಬಿಕೆಡಿಬಿ ಆಯುಕ್ತ ಶರಣಬಸಪ್ಪಾ ಕೊಟ್ಟೆಪ್ಪಗೊಳ ಅವರು ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ, ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಕುರಿತು ಉಪವಾಸ ಸತ್ಯಾಗ್ರಹ ಕೈಗೊಂಡವರಿಗೆ ಮನವರಿಕೆ ಮಾಡಿದ ನಂತರ ಸತ್ಯಾಗ್ರಹ ಕೈ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next