Advertisement

ಬಸ್‌ ಪ್ರಯಾಣಕ್ಕೆ ಜನರ ಹಿಂಜರಿಕೆ

04:15 PM May 20, 2020 | Naveen |

ಬಸವಕಲ್ಯಾಣ: ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಮಂಗಳವಾರ ನಗರದಲ್ಲಿ ವಾಹನ ಸಂಚಾರ ಹಾಗೂ ಬೀದಿ ವ್ಯಾಪಾರ ಸೇರಿದಂತೆ ಪ್ರತಿಯೊಂದು ವಹಿವಾಟಿಗಳು ಎಂದಿನಂತೆ ನಡೆದವು.

Advertisement

ನಗರದ ಪ್ರಮುಖ ವೃತ್ತಗಳಲ್ಲಿ ಮೋದಲಿನಂತೆ ಬಂಡಿ ಹಾಗೂ ರಸ್ತೆ ಪಕ್ಕದಲ್ಲಿ ಬೀದಿ ವ್ಯಾಪಾರಿಗಳು ಕುಳಿತುಕೊಂಡು ಹಣ್ಣು ಮಾರಾಟ ಮಾಡುವುದು ಕಂಡುಬಂತು. ಆಟೋ, ಜೀಪ್‌ ಸೇರಿದಂತೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಸಂಚರಿಸಿದರು. ಆದರೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಾತ್ರ ಯಾರು ಸಂಚರಿಸಲಿಲ್ಲ. ನಗರದ ನಿಲ್ದಾಣದಲ್ಲಿ ಬೆಳಗ್ಗೆ ಕಲಬುರಗಿ ಮತ್ತು ಬೀದರಗೆ ಹೋಗಲು ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸಂಜೆ ವರೆಗೂ ಪ್ರಯಾಣಿಕರು ಬಸ್‌ ನಿಲ್ದಾಣದ ಕಡೆ ಸುಳಿಯಲಿಲ್ಲ ಎಂದು ಬಸವಕಲ್ಯಾಣ ಘಟಕದ ವ್ಯವಸ್ಥಾಪಕ ಮಾಹಿತಿ ನೀಡಿದರು.

ಹೋಟೆಲ್‌ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಉಪಹಾರ ಹಾಗೂ ಊಟವನ್ನು ಪಾರ್ಸಲ್‌ ನೀಡಿ ವ್ಯಾಪಾರ ಮಾಡಿದರು. ಒಟ್ಟಿನಲ್ಲಿ ಸರ್ಕಾರ ಆದೇಶದಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಲಾಕ್‌ಡೌನ್‌ ಸಡಿಕೆಯಾಗಿದ್ದರಿಂದ ವ್ಯಾಪಾರಸ್ಥರು ವಹಿವಾಟು ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next