Advertisement

ಸಂಸ್ಕಾರ-ಸಂಸ್ಕೃತಿ ಕಲಿಸುವ ಶಾಲೆ ಮುಖ್ಯ

11:06 AM Sep 06, 2019 | Team Udayavani |

ಬಸವಕಲ್ಯಾಣ: ಇಂಗ್ಲಿಷ್‌ ಶಾಲೆ ಮುಖ್ಯವಲ್ಲ. ಬದಲಾಗಿ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವ ಶಾಲೆ ಸಮಾಜಕ್ಕೆ ಬೇಕಾಗಿವೆ ಎಂದು ಸುಕ್ಷೇತ್ರ ಹಾರಕೂಡ ಹಿರೇಮಠ ಸಂಸ್ಥಾನದ ಡಾ| ಚನ್ನವೀರ ಶಿವಾಚಾರ್ಯರು ಹೇಳಿದರು.

Advertisement

ಬಸವಕಲ್ಯಾಣ ಮತ್ತು ಹುಲಸೂರು ತಾಲೂಕಿ ಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ನಗರದ ಬಿಕೆಡಿಬಿ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ 58ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ಹುದ್ದೆ ಸಾಮಾನ್ಯವಾದ ಹುದ್ದೆ ಅಲ್ಲ. ಪ್ರತಿಯೊಬ್ಬರನ್ನು ತಯಾರಿಸುವ, ಅಧ್ಯಾತ್ಮಕತೆಯ ಕೇಂದ್ರವನ್ನು ಸ್ಥಾಪನೆ ಮಾಡುವ ಹಾಗೂ ಭವಿಷ್ಯದ ಜನಾಂಗವನ್ನು ರೂಪಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಕ್ಷೇತ್ರದಲ್ಲಿ ಕೇವಲ ರಸ್ತೆ, ಕಟ್ಟಡಗಳು ಅಭಿವೃದ್ಧಿಗೊಂಡರೆ ಸಾಲದು. ಮಾನವ ಸಂಪನ್ಮೂಲ ಗಟ್ಟಿ ಆಗಬೇಕಾಗುತ್ತದೆ.ಆ ನಿಟ್ಟಿನಲ್ಲಿ ಶಿಕ್ಷಕರು ಗಮನ ಹರಿಸುವುದು ತುಂಬಾ ಅವಶ್ಯವಾಗಿದೆ ಎಂದರು.

2017-18ನೇ ಸಾಲಿನಲ್ಲಿ ಶೇ.42 ಫಲಿತಾಂಶ ಬಂದಿತ್ತು. ಕಳೆದ ವರ್ಷ ಶೇ.62ರಷ್ಟು ಫಲಿತಾಂಶ ಬಂದಿದ್ದು, ಬರುವ ವರ್ಷ ಶೇ.80 ರಿಂದ 85ರ ವರೆಗೆ ಫಲಿತಾಂಶ ಬರುವಂತೆ ಶಿಕ್ಷಕರು ಪ್ರಯತ್ನಿಸಬೇಕು. ಅದಕ್ಕೆ ಬೇಕಾದ ಅನುದಾನ ಮತ್ತು ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಪ್ರಾಸ್ತಾವಿಕವಾಗಿ ಮಾತನಾಡಿ, ಗುರು ಎಂಬುದು ಜಗತ್ತಿನ ಶ್ರೇಷ್ಠವಾದ ಹುದ್ದೆಯಾಗಿದೆ. ಹಾಗಾಗಿ ಸಮಾಜದಲ್ಲಿ ಶಿಕ್ಷಕರ ಸ್ಥಾನಕ್ಕೆ ಅಮುಲ್ಯವಾದ ಸ್ಥಾನ ಇದೆ. ಆದ್ದರಿಂದ ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕೆಲಸ ಮಾಡುವುದು ನಮ್ಮ ಜವಬ್ದಾರಿಯಾಗಿದೆ ಎಂದರು.

ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ಹಾಗೂ ತಹಶೀಲ್ದಾರ ಸಾವಿತ್ರಿ ಶರಣು ಸಲಗರ ಮಾತನಾಡಿದರು. ಕಲಬುರಗಿ ಸಾ.ಶಿ.ಇ. ಪ್ರವಾಚಕರು ಜಿ.ಎಂ.ವಿಜಯಕುಮಾರ ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಯಶೋಧಾ ಎನ್‌.ರಾಠೊಡ, ಬಿಕೆಡಿಬಿ ಆಯುಕ್ತ ಶರಣಬಸಪ್ಪಾ ಕೊಟ್ಟೆಪ್ಪಗೋಳ, ತಾಪಂ ಇಒ ಮಡೋಳಪ್ಪಾ ಪಿ.ಎಸ್‌., ಓಂಪ್ರಕಾಶ ಪಾಟೀಲ, ಜಿಪಂ ಸದಸ್ಯರಾದ ಆನಂದ ಪಾಟೀಲ, ಸುಧೀರ ಕಾಡಾದಿ, ಅಣ್ಣಾರಾವ್‌ ರಾಠೊಡ, ನಗರಸಭೆ ಆಯುಕ್ತ ಸುರೇಶ ಬಬಲಾದ, ಸರ್ಕಾರಿ ನೌರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ, ಎಸ್‌.ಎಸ್‌.ಕಾಂಗೆ, ಡಾ| ಅಂಬಾದಾಸ, ಮಹಿಪಾಲರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next