Advertisement
ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು, 270ಕ್ಕೂ ಹೆಚ್ಚು ವಿವಿಧ ಮಠಗಳ ಮಠಾಧಿಧೀಶರು ಮತ್ತು ಸಾಹಿತಿಗಳು ಸೇರಿದಂತೆ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಮಠದ ಆವರಣದಲ್ಲಿ ಸುಮಾರು 8 ಸಾವಿರ ಭಕ್ತಾದಿಗಳು ಕುಳಿತುಕೊಳ್ಳುವಷ್ಟು 160-250 ಅಳತೆಯ ಬೃಹತ್ ಮಂಟಪ ಮತ್ತು ವೇದಿಕೆ ನಿರ್ಮಿಸಲಾಗಿದ್ದು, ಭಕ್ತಾದಿಗಳಿಗೆ ತೊಂದರೆ ಆಗದಂತೆ ಊಟ, ವಸತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಸುಮಂಲೆಯರಿಗೆ ಉಡಿ ತುಂಬುವುದು, ಅನಂತರ ಸಾವಿರಾರು ಪೂರ್ಣಕುಂಭಗಳೊಂದಿಗೆ ಶ್ರೀ ನಾಗಭೂಷಣ ಶಿವಯೋಗಿಗಳ ಪ್ರತಿಮೆ, ಶ್ರೀ ರಾಮಲಿಂಗೇಶ್ವರ ಮೂರ್ತಿ ಹಾಗೂ ಶ್ರೀ ಉಜ್ಜಯನಿ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 9:30 ಗಂಟೆಗೆ ಪ್ರವಚನ ನಡೆಯಲಿದೆ. ಉಜ್ಜಯಿನಿ ಭಗತ್ಪಾದರು ಸದ್ಧರ್ಮ ಸಿಂಹಾಸನ ಶ್ರೀ 1008 ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸುವುರು. ಬೀದರ್ ಚಿದಂಬರಾಶ್ರಮ ಸಿದ್ದಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮಿಗಳು ನೇತೃತ್ವ ವಹಿಸುವರು.
Related Articles
Advertisement
ಫೆ.2ರಂದು ಬೆಳಗ್ಗೆ 9:30ಕ್ಕೆ “ಈಶ್ವರ ನಾಮವುರಸನೆಗೆ ಬರಲು ಶಾಶ್ವತ ಸುಕೃತಗಳಿಗಿಂತ ಮಿಗಿಲು’ ಪ್ರವಚನ ನಡೆಯಲಿದೆ. ಬೀದರ ಶ್ರೀ ಸಿದ್ಧಾರೂಢ ಮಠದ ಡಾ|ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ, ಗ್ರಾಮೀಣ ವಿಕಾಸ ರಾಜ್ಯ ಸಚಿವೆ ಶ್ರೀ ಸಾ ಧ್ವಿ ನಿರಂಜನ ಜ್ಯೋತಿ ಮತ್ತು ಶ್ರೀ ಫಾಲಾಕ್ಷ ನೇತೃತ್ವ ವಹಿಸುವರು. ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು.
ಕೇಂದ್ರದ ರೈಲ್ವೆ ಸಚಿವ ಸುರೇಶ ಅಂಗಡಿ ಉದ್ಘಾಟನೆ ನೆರವೇರಿಸುವರು. ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಮತ್ತಿತರರು ಭಾಗವಹಿಸುವರು. ಸಂಜೆ 5:30 ಗಂಟೆಗೆ “ಭಾಗ್ಯವಿಲ್ಲದಾಗದು’ ಪ್ರವಚನ ನಡೆಯಲಿದೆ. ಶ್ರೀ 1008 ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಡಾ|ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಪರಮರಾಮಾರೂಢ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು.ಫೆ.3ರಂದು ಬೆಳಗ್ಗೆ 9:30 ಗಂಟೆಗೆ “ಯೋಗಚಿತ್ತವೃತ್ತಿ ನಿರೋಧ’ ಪ್ರವಚನ ಮತ್ತು ಶ್ರೀ ರವಿಶಂಕರ ಗುರೂಜಿ ಅವರಿಗೆ “ಯೋಗರತ್ನ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಆರ್ಟ್ ಆಫ್ ಲೀವಿಂಗ್‌ನ ಶ್ರೀ ರವಿಶಂಕರ ಗುರೂಜಿ ಮತ್ತು ಡಾ| ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಸಂಜೆ 5:30ಕ್ಕೆ “ಎಲ್ಲಕ್ಕು ದಾನಿಯೇ ಲೇಸು’ ಪ್ರವಚನ ನಡೆಯಲಿದೆ. ವಿಜಯಪುರದ ಶ್ರೀ ಅಭಿವನ ಶಿವಪುತ್ರ ಮಹಾಸ್ವಾಮಿಗಳು, ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಫೆ. 4ರಂದು “ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ’ ಪ್ರವಚನ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ| ನಿರ್ಮಲಾನಂದನಾಥ ಮಹಾಸ್ವಾಮಿಗಳು, ಗದಗ ತೊಂಟದಾರ್ಯಮಠ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಡಾ| ವಿಶ್ವಸಂತೋಷ ಭಾರತಿ ಶ್ರೀಪಾದರು, ಡಾ| ಬಸವಲಿಂಗ ಪಟ್ಟದ್ದೇವರು ನೇತೃತ್ವ ವಹಿಸುವರು. ಡಾ| ಶಿವಕುಮಾರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಫೆ.4 ರಂದು 5:30ಕ್ಕೆ “ಸಾಧೂನಾಂ ದರ್ಶನಂ ಪುಣ್ಯ’ ಪ್ರವಚನ ನಡೆಯಲಿದೆ. ಫೆ. 5ರಂದು 9:30ಕ್ಕೆ ಹಿತವಾವುದಿನ ಪರದೊಳು ಧರ್ಮ ರತಿ ಪ್ರವಚನ ಮತ್ತು ಯೋಗಿರಾಜ ನಾಗಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಾಡಿಯೂರಪ್ಪ ಉದ್ಘಾಟನೆ ನೆರವೇರಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಗ್ರಂಥ ಬಿಡುಗಡೆ ಗೊಳಿಸುವರು. ಅತಿಥಿಯಾಗಿ ಸಚಿವರಾದ ವಿ.ಸೋಮಣ್ಣ, ಜಗದೀಶ ಶೆಟ್ಟರ್, ಪ್ರಭು ಚವ್ಹಾಣ ಮತ್ತು ಶಾಸಕರಾದ ರಾಜಕುಮಾರ ಪಾಟೀಲ, ಸಚಿನ ಕಲ್ಯಾಣಶೆಟ್ಟಿ, ರಘುನಾಥ ಮಲ್ಕಾಪೂರೆ, ಡಾ| ವಿಶ್ವನಾಥ ಪಾಟೀಲ ಆಗಮಿಸುವರು. ರಾತ್ರಿ 9:30ಕ್ಕೆ “ಯೋಗಿಯ ನೊಲಿಸಿದಡಿಹಪರಸಿದ್ಧಿ’ ಪ್ರವಚನ ನಡೆಯಲಿದೆ. ಫೆ.6ಂದು ಬೆಳಗ್ಗೆ 9:30ಕ್ಕೆ ಕಿಂ ತೀರ್ಥಂ ಅಚ್ಛಾ ಮತಿ: ವಿಷಯ ಕುರಿತು ಪ್ರವಚನ, 5:30ಕ್ಕೆ ಕಂಡು ಕೇಳಿ ಮತ್ತೆ ಮೋಹಿಪರೆ ಪ್ರವಚನ ನಡೆಯಲಿದೆ. ಫೆ.7 ರಂದು ಬೆಳಗ್ಗೆ 9:30 ಗಂಟೆಗೆ ಗುರುರೇಕೋ ಹಿ ತಾರಕ ಪ್ರವಚನ ನಡೆಯಲಿದೆ. ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೆರವೇರಿಸುವರು. ಅತಿಥಿಯಾಗಿ ಎಸ್.ಆರ್.ಪಾಟೀಲ, ಎಂ.ಬಿ.ಪಾಟೀಲ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು.