Advertisement

ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದೆ ವಸತಿ ಶಾಲೆ

11:36 AM Oct 30, 2019 | |

ವೀರಾರೆಡ್ಡಿ.ಆರ್‌.ಎಸ್‌.
ಬಸವಕಲ್ಯಾಣ: ತಾಲೂಕಿನ ಕೋಹಿನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರಾಗಿ ಹಲವು ವರ್ಷಗಳಾದರೂ ಸಂಬಂಧಪಟ್ಟ ಇಲಾಖೆ ಗಮನ ಹರಿಸದೇ ಇರುವುದರಿಂದ ಖಾಸಗಿ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕಾಗಿ ಪ್ರತಿ ತಿಂಗಳು 58 ಸಾವಿರ ರೂಪಾಯಿ ಬಾಡಿಗೆ ಕೊಡುತ್ತಿದೆ.

Advertisement

ಸರ್ಕಾರ 2008ರಲ್ಲಿ ಇಲ್ಲಿ ಮೊರಾರ್ಜಿ ಶಾಲೆ ಆರಂಭಿಸಿದೆ. ಸರ್ಕಾರದ ಸ್ವಂತ ಕಟ್ಟಡ ಇಲ್ಲದ ಕಾರಣ ಇದುವರೆಗೂ ಖಾಸಗಿ ಕಟ್ಟದಲ್ಲೇ ಶಾಲೆ ನಡೆಸುತ್ತಿರುವುದು ಶೋಚನೀಯ ಸಂಗತಿ. ಇದುವರೆಗೂ ಸುಮಾರು ಅಂದಾಜು 30 ರಿಂದ 35 ಲಕ್ಷ ರೂ. ಬಾಡಿಗೆ ದರ ಪಾವತಿಸಿದೆ. ಒಂದು ವೇಳೆ 2008 ರಿಂದಲೇ ಸರ್ಕಾರದ ಈ ಹಣವನ್ನು ಸರ್ಕಾರ ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ ಬಳಸಿದ್ದರೆ ವಿದ್ಯಾರ್ಥಿಗಳಿಗೆ ಸ್ವಂತ ಸೂರು ಸಿಗುವುದಲ್ಲದೆ ಸರ್ಕಾರಿ ಕಟ್ಟಡದಲ್ಲಿ ವ್ಯಾಸಂಗ ಮಾಡುವ ಖುಷಿಯಾದರೂ ಸಿಗುತ್ತಿತ್ತು. ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಕೋಹಿನೂರ ಗ್ರಾಮದ ಸಮೀಪ 2013-14 ನೇ ಸಾಲಿನಲ್ಲಿ ಅಂದಾಜು 7 ಲಕ್ಷ ರೂ. ಗಳಲ್ಲಿ 7.20 ಎಕರೆ ಜಮೀನು ಖರೀದಿಸಲಾಗಿದೆ.

ಇದಲ್ಲದೆ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ವಸತಿ ಶಾಲೆ‌ ಸಂಸ್ಥೆಗಳ ಸಂಘ 16 ಕೋಟಿ ರೂ. ಘೋಷಣೆ ಮಾಡಿದೆ. ಆದರೆ ಇಂದಿಗೂ ಒಂದು ನಯಾಪೈಸೆಯೂ ಬಿಡುಗಡೆ ಆಗದಿರುವುದು ಉನ್ನತಾ ಧಿಕಾರಿಗಳ ಹಾಗೂ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಲಕ್ಷಾಂತರ ರೂ. ಗಳು ಬಾಡಿಗೆ ರೂಪದಲ್ಲಿ ಖರ್ಚಾಗುತ್ತಿದೆ.

ಈ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ನಡೆಯುತ್ತಿದ್ದು, 260 ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ನೀಡುವ ಉದ್ದೇಶದಿಂದ ಸರ್ಕಾರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭಿಸಿದೆ. ಆದರೆ, ಸರ್ಕಾರದ ಉದ್ದೇಶ ಸಫಲವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next