Advertisement

ನಿಸ್ವಾರ್ಥ ಸೇವೆ ಇದ್ದಲ್ಲಿ ದೇವರ ಸಾಕ್ಷಾತ್ಕಾರ

05:20 PM Dec 30, 2019 | Naveen |

ಬಸವಕಲ್ಯಾಣ: ಆತ್ಮ, ದೇಹ ಹಾಗೂ ಜ್ಞಾನ ಶಕ್ತಿಯನ್ನು ನಂಬಿಕೊಂಡು, ಪ್ರಾಮಾಣಿಕ ಸ್ವಾವಲಂಬಿಯಾಗಿ ದುಡಿಯುವುದರಲ್ಲಿ ದೇವರು ಕಾಣುತ್ತಾನೆ. ಅದುವೇ ನೀಜವಾದ ದೈವಭಕ್ತಿಯಾಗಿದ್ದು ಅದನ್ನು ನಂಬಿದವರು ಶ್ರೀ ಕನಕದಾಸರು ಎಂದು ತಿಂಥಣಿಯ ಕನಕ ಗುರುಪೀಠದ ಶ್ರೀ ಸಿದ್ಧಾರಾಮನಂದಪುರಿ
ಸ್ವಾಮೀಜಿ ಹೇಳಿದರು.

Advertisement

ಮುಚಳಂಬ ಗ್ರಾಮದಲ್ಲಿ ರವಿವಾರ ನಡೆದ ಭಕ್ತ ಕನಕದಾಸರ ಮೂರ್ತಿ ಅನಾವರಣ ಹಾಗೂ 532ನೇ ಕನಕ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕೇವಲ ಸನ್ಯಾಸಿ ಹಾಗೂ ಮೇಲ್ವರ್ಗದವರಿಗೆ ಮಾತ್ರ ದೇವರು ಒಲಿಯುತ್ತಾನೆ ಎಂಬುದನ್ನು ಸುಳ್ಳಾಗಿಸಿದ ಭಕ್ತ ಕನಕದಾಸರು, ನೈಜ ಭಕ್ತಿವೊಂದಿದ್ದರೆ ಸಾಕು ದೇವರು ಎಲ್ಲರಿಗೂ ಸಮವಾಗಿ ಒಲಿಯುತ್ತಾನೆ ಎಂದು ದಾಸರು ತಮ್ಮ ಸಾಹಿತ್ಯದಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.

ಕನಕದಾಸರ ಸಾಹಿತ್ಯ ಶ್ರೀಸಾಮಾನ್ಯರಿಗೂ ತಿಳಿಯುವಂತಹದು. ಗಾಳಿ-ಬೆಳಕಿನಂತೆ ಮಹಾತ್ಮರು ಶ್ರೇಷ್ಠರು. ಅವರ ತಾತ್ವಿಕ ನೆಲೆಯನ್ನು ಅನುಭವಿಸಬೇಕು. ನಿಸರ್ಗ ಸೃಷ್ಟಿ ಅದ್ಭುತ. ಅದು
ಜಾತಿಭೇದ ಮಾಡದೆ ನಿಸ್ವಾರ್ಥ ಸೇವೆ ನೀಡುತ್ತದೆ. ಮನೆಯಲ್ಲಿ ಹಿರಿಯರು ಮಕ್ಕಳಿಗೆ ಶ್ರಮ ಹಾಗೂ ದಾನದ ಗುಣಗಳನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಮುಚಳಂಬ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ಮಹಾನ್‌ ವ್ಯಕ್ತಿಗಳ- ಸತು³ರುಷರ ಮೂರ್ತಿ ಪ್ರತಿಷ್ಠಾಪಿಸುವುದು, ಜಯಂತಿ ಆಚರಿಸುವುದಷ್ಟೆ ಅಲ್ಲ. ಅವರ ತತ್ವಾದರ್ಶಗಳನ್ನು ಪಾಲಿಸಬೇಕು. ಆಗ ಮಾತ್ರ ಅವರ ಜಯಂತಿ ಆಚರಣೆ ಸಾರ್ಥಕ ವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ನಾರಾಯಣರಾವ್‌ ಮಾತನಾಡಿ, ಕವಿ ಹಾಗೂ ಕೀರ್ತನಕಾರರು ಆಗಿರುವ ಕನಕದಾಸರು 15-16ನೇ ಶತಮಾನದ ದಾಸ ಪರಂಪರೆಯಲ್ಲೇ ಅತ್ಯಂತ ಶ್ರೇಷ್ಠರು. ಈ ಕನ್ನಡ ನಾಡು ಎಂಥ ಪುಣ್ಯಭೂಮಿ ಎಂದರೆ ಇಲ್ಲಿ ಅನೇಕ ಶರಣರು, ಸಂತರು, ವಚನಕಾರರು ಆಗಿ ಹೋಗಿದ್ದಾರೆ ಎಂದರು.

Advertisement

ನಂತರ ಪಂಡಿತರಾವ್‌ ಚಿದ್ರಿ ಮಾತನಾಡಿದರು. ಗೌರ ಗ್ರಾಮದ ಕನಕ ಗುರುಪೀಠದ ಬೀರಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಬೀದರ್‌ ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ, ಬಸವಕಲ್ಯಾಣ ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ್‌, ಜಿಪಂ ಸದಸ್ಯೆ ನಿರ್ಮಲಾ ಮಾನೆಗೋಪಾಳೆ, ಬಿಜೆಪಿ ಯುವ ಮುಖಂಡ ಶರಣು ಸಲಗರ, ಕೆಪಿಸಿಸಿ ಸದಸ್ಯ ಶಿವರಾಜ ನರಶೆಟ್ಟಿ, ತಾಪಂ ಸದಸ್ಯೆ ಶಾಂತಾಬಾಯಿ ಪಾಂಚಾಳ, ಕೆ.ಡಿ. ಗಣೇಶ, ಸಂತೋಷ್‌ ಗುತ್ತೆದಾರ್‌, ರಮೇಶ್‌ ರಂಗೆ ಇದ್ದರು. ಶಿವಶರಣಪ್ಪಾ ಎನ್‌. ಛತ್ರೆ ಸ್ವಾಗತಿಸಿದರು. ಮಲ್ಲಿಕಾರ್ಜುನ್‌ ಎನ್‌. ಛತ್ರೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next