Advertisement

ಮಧುವಣಗಿತ್ತಿಯಾದ ಬಸವಕಲ್ಯಾಣ

11:45 AM Nov 08, 2019 | Team Udayavani |

„ವೀರಾರೆಡ್ಡಿ ಆರ್‌.ಎಸ್‌.
ಬಸವಕಲ್ಯಾಣ:
ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು, ದಾಸೋಹ ರತ್ನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾರಕೂಡ ಸಂಸ್ಥಾನ ಹಿರೇಮಠದ ಡಾ|ಚೆನ್ನವೀರ ಶಿವಾಚಾರ್ಯರ 57ನೇ ಜನ್ಮದಿನ ಅಂಗವಾಗಿ ನಗರವನ್ನು ಮಧುವಣಗಿತ್ತಯಂತೆ ಶೃಂಗರಿಸಲಾಗಿದೆ.

Advertisement

ನ.8 ಮತ್ತು 9ರಂದು ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಮಹರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಸಾಹಿತಿಗಳು, ಗಣ್ಯರು ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಜನ್ಮದಿನವನ್ನು ದಸರಾ-ದೀಪಾವಳಿ ಹಬ್ಬದಂತೆ ಆಚರಿಸಲು ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಸಾಸಕ ಬಿ.ನಾರಾಯಣರಾವ್‌ ನೇತೃತ್ವದಲ್ಲಿ ಭಕ್ತಾದಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದ ಎರಡು ದಿನ ವೇದಿಕೆ ಕಾರ್ಯಕ್ರಮ ನಡೆಯುವ ಬಿಕೆಡಿಬಿ ಸಭಾಭವನಕ್ಕೆ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಭವನದ ಒಳಗೆ ವೇದಿಕೆ ಕಾರ್ಯಕ್ರಮವನ್ನು ಭಕ್ತರು ವೀಕ್ಷಿಸಲು ನಾಲ್ಕು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ ಮತ್ತು ವೇದಿಕೆಯನ್ನು ವಿವಿಧ ಹೂಗಳಿಂದ ಶೃಂಗರಿಸಲಾಗಿದೆ.

ಶ್ರೀಗಳ ಜನ್ಮದಿನದ ಅಂಗವಾಗಿ ಕಲ್ಯಾಣಕ್ಕೆ ಬರುವ ಭಕ್ತಾದಿಗಳಿಗೆ ಆಕರ್ಷಕವಾಗಿ ಕಾಣುವಂತೆ ಎಲ್ಲೆಡೆ ಕಾವಿ ಬಣ್ಣದ ಧ್ವಜಗಳು ಮತ್ತು ಪರಾರಿಗಳನ್ನು ಕಟ್ಟಲಾಗಿದೆ. ಭಕ್ತರಿಗೆ ಎರಡು ದಿನ ಅಚ್ಚುಕಟ್ಟಾದ ದಾಸೋಹ ವ್ಯವಸ್ಥೆ ಕೂಡ ಮಾಡಲಾಗಿದೆ.

57ನೇ ಜನ್ಮದಿನ ಇರುವುದರಿಂದ ನಗರದ ಕೋಟೆಯಿಂದ ಬಂಗ್ಲಾ ವರೆಗೆ 57 ದೊಡ್ಡ ಕಮಾನು ಹಾಗೂ ಪ್ರಮುಖ ವೃತ್ತಗಳಲ್ಲಿ ಬ್ಯಾನರ್‌ ಗಳನ್ನು ಅಳವಡಿಸಲಾಗಿದೆ. ದೀಪಾವಳಿ ಹಬ್ಬದಂತೆ ಭಕ್ತಾದಿಗಳು ತಮ್ಮ ತಮ್ಮ ಅಂಗಡಿಗಳಿಗೆ ಸ್ವ ಇಚ್ಛೆಯಿಂದ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿದ್ದಾರೆ. ಹೀಗೆ ಶ್ರೀಗಳ ಜನ್ಮದಿನಾಚರಣೆ ನಗರದಲ್ಲಿ ಸಡಗರ-ಸಂಭ್ರಮ ತಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next