ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದಂತೆ. ಎರಡು ತತ್ವಗಳಿಗೆ ಬಹಳಷ್ಟು ಸಾಮ್ಯತೆ ಇದೆ ಎಂದು ಶಿಕ್ಷಕ ಮಲ್ಲಿಕಾರ್ಜುನ ಅಲಗೂಡ ಹೇಳಿದರು.
ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠ ಟ್ರಸ್ಟ್, ಮದ್ವೀರಶೈವ ಸದ್ಬೋಧನ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ತ ನಗರದ ಜಗದ್ಗುರು ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠದಲ್ಲಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮೀಜಿ ಉಪನ್ಯಾಸ ನೀಡಿದರು.
ಮಾನವ ಜನ್ಮ ದೊಡ್ಡದು. ಈ ಜನ್ಮ ಪಾವನ ಮಾಡಿಕೊಳ್ಳಲು ಗುರುವಿನ ಸಾನ್ನಿಧ್ಯ ಅವಶ್ಯ. ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು, ಬಸವಾದಿ ಶಿವಶರಣರು ಮೊದಲಾದ ಮಹಾತ್ಮರು ಉಪದೇಶಗಳನ್ನು ಶ್ರಾವಣ ಮಾಸದಲ್ಲಿ ಕೇಳಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ಧ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಮುಕ್ತಿ ಮಾರ್ಗ ತೋರುವ ಶ್ರೇಷ್ಠ ಸಾಹಿತ್ಯ ವಾಗಿದೆ. ನಿತ್ಯ ಪಠಣದಿಂದ ಮನಸ್ಸು ಪರಿಶುದ್ಧಗೊಂಡು ಹಗುರವಾಗುತ್ತದೆ. ಸಿದ್ಧಾಂತ ಶಿಖಾಮಣಿ ಧರ್ಮಾರ್ಚಾರ ಸ್ಥಲದಲ್ಲಿ ಗುರು ಪ್ರತ್ಯಕ್ಷ ದೈವ. ಗುರುವಿನ ಪ್ರತ್ಯಕ್ಷ ದರ್ಶನದಿಂದ ದೇವರ ದರ್ಶನವಾಗುವುದು. ಗುರು ಪ್ರತ್ಯಕ್ಷ ದರ್ಶನದಿಂದ ಜನ್ಮ ಪಾವನವಾಗುತ್ತದೆ ಎಂದು ಹೇಳಿದರು.
ಸುಭದ್ರಾಬಾಯಿ ವೀರಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಮೇಶ ರಾಜೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ, ಪ್ರೊ| ದಯಾನಂದ ಶೀಲವಂತ, ಬಾಬುರಾವ್ ಚಳಕಾಪುರೆ, ಶಿವಕುಮಾರ ಮಠ, ಶೇಖರ ಪಸ್ತ್ರದ, ವೈಜಿನಾಥ ಸ್ವಾಮಿ, ಕಲ್ಪನಾ ದಯಾನಂದ ಶೀಲವಂತ, ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಸ್ವಾಮಿ, ವಿಮಲಾಬಾಯಿ ಮಾಣಿಕಪ್ಪ ಬಿರಾದಾರ, ಸುನಂದಾ ನಂದಿ, ಶಾಂತಾಬಾಯಿ ಹುಲಿಕಾಂತಿ ಮಠ, ಸಿದ್ದಮ್ಮ ಗುಡ್ಡಾ, ಪಾರ್ವತಿ ರೋಜಾ, ಲಕ್ಷ್ಮೀಬಾಯಿ ಕಟಗಿಮಠ, ಕಸ್ತೂರಬಾಯಿ ಇದ್ದರು. ಪ್ರೊ| ರುದ್ರೆಶ್ವರ ಸ್ವಾಮಿ ಸ್ವಾಗತಿಸಿದರು. ಕಾಶಿನಾಥ ಸ್ವಾಮಿ ವಂದಿಸಿದರು.