Advertisement

ಮೋದಿ ನೇತೃತ್ವದಲ್ಲಿ ನವಭಾರತ ನಿರ್ಮಾಣ: ಖೂಬಾ

04:12 PM Jul 08, 2019 | Team Udayavani |

ಬಸವಕಲ್ಯಾಣ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದಮೇಲೆ ಭಾರತ ಹಳೇ ಜನಾಂಗದ ದೇಶವಾಗಿರದೇ ನವ ಭಾರತ ಹಾಗೂ ಯುವ ಭಾರತವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

Advertisement

ನಗರದ ಬಸವೇಶ್ವರ ವೃತ್ತದ ಬಳಿಯ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ರವಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಭಗವಂತ ಖೂಬಾ ಯಾರು ಎಂಬುದು ಪ್ರಶ್ನೆಯಾಗಿತ್ತು. ಆದರೆ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಪರಿಶ್ರಮದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.

ನರೇಂದ್ರ ಮೋದಿ ಅವರು 5 ವರ್ಷಗಳಲ್ಲಿ ಮಾಡಿದ ಸಾಧನೆಗಳು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ, ಕಾರ್ಯಕರ್ತರು 6 ತಿಂಗಳ ಕಾಲ ಶ್ರಮ ವಹಿಸಿ ವಿರೋಧ ಪಕ್ಷದ ಟಿಕೆಗಳಿಗೆ ಒಳಗಾಗದಂತೆ 2019ರ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಶ್ರಮ ಪಟ್ಟಿದ್ದಾರೆ. ಆದ್ದರಿಂದಲೇ ಎರಡನೇ ಬಾರಿಯೂ ನಿರೀಕ್ಷೆಗೆ ಮೀರಿ ಮತಗಳನ್ನು ಪಡೆದು ಗೆಲ್ಲಲು ಸಾಧ್ಯವಾಯಿತು ಎಂದರು. ದೇಶದ 27 ಕೋಟಿ ಹಾಗೂ ರಾಜ್ಯದ 6 ಲಕ್ಷ ಜನರಿಗೆ ಮೋದಿ ಜಾರಿಗೊಳಿಸಿಸ ಯೋಜನೆಗಳನ್ನು ಮನೆ-ಮನೆಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದರು.

ಮೂಲಭೂತ ಸೌಕರ್ಯಕ್ಕಾಗಿ ಬರುವ ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡಲಾಗುತ್ತಿದೆ. ಇದರಿಂದ ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಸಿಗಲಿವೆ. ಬರುವ ಐದು ವರ್ಷಗಳಲ್ಲಿ ದೇಶದ ಹಣಕಾಸಿನ ವ್ಯವಹಾರ 5 ಮಿಲಿಯನ್‌ ಡಾಲರ್‌ ಆಗಬೇಕು ಎಂಬ ಗುರಿಯನ್ನು ಪ್ರಧಾನಿ ಮೋದಿ ಅವರು ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರ ಕಾರ್ಯಕ್ಕೆ ನಾವು ಯಾವರೀತಿ ಪ್ರೋತ್ಸಾಹ ನೀಡಬೇಕಾಗಿದೆ ಎಂಬುದನ್ನು ಮತದಾರರು ತಿಳಿದುಕೊಳ್ಳಬೇಕಾಗಿದೆ ಎಂದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಕೇಂದ್ರ ಸರ್ಕಾರ ಮಹಿಳೆಯರು ಸೇರಿದಂತೆ ಆರ್ಥಿಕ ಮತ್ತು ಸ್ವಾವಲಂಬಿ ಜೀವನ ನಡೆಸಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಏಕೆಂದರೆ ರಾಜ್ಯ ಸರ್ಕಾರ ಸತ್ತಿದೆ. ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿದ್ದು, ಇನ್ನೂ 20 ದಿನಗಳ ಒಳಗೆ ಬಿಎಸ್‌ವೈ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ, ಜಿಪಂ ಸದ್ಯರಾದ ಗುಂಡುರೆಡ್ಡಿ, ಸುಧಿಧೀರ ಕಾಡಾದಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವಪುತ್ರ ಗೌರ, ವೀರಣ್ಣಾ ಹಲಗೆ, ಪ್ರಮುಖರಾದ ಬಾಬುರಾವ್‌ ಕಾರಬಾರಿ, ಶಾಂತಪ್ಪಾ ಜಿ.ಪಾಟೀಲ, ರವಿ ಚಂದನಕೇರೆ, ಅನೀಲ ಭೂಸಾರೆ, ಸಂಜಯ ಪಟವಾರಿ, ವಿಜಯಕುಮಾರ ಮಂಠಾಳೆ, ಪ್ರದೀಪ ವಾತಡೆ, ರವಿ ಸ್ವಾಮಿ ನಾರಾಯಣಪುರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next