Advertisement

ಸಾಧನೆಗೆ ಸತತ ಪ್ರಯತ್ನ ಮುಖ್ಯ

11:48 AM Oct 31, 2019 | Naveen |

ಬಸವಕಲ್ಯಾಣ: ಸಾಧನೆಗೆ ವಯಸ್ಸು ಮುಖ್ಯವಲ್ಲ. ಸತತ ಪ್ರಯತ್ನ ಮುಖ್ಯವಾಗಿದೆ ಎಂದು ನಗರದ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.

Advertisement

ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠದಲ್ಲಿ ನಡೆದ ಶಿವಾನುಭವ ಚಿಂತನ ಮಾಸಿಕ ಅಮಾವಾಸ್ಯೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಗುರುವಿನಲ್ಲಿ ಭಕ್ತಿ ಹೊಂದಿದರೆ ಸಾಧನೆ ಸುಲಭ. ಭಕ್ತರಲ್ಲಿ ಭಕ್ತಿ ಮೂಡಿಸಿ ಸಂಸ್ಕಾರ ಕಲಿಸುವುದೇ ಶಿವಾನುಭವ ಚಿಂತನ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಹಿರಿಯ ನಾಗರಿಕರು ಬೀದರ ಜಿಲ್ಲಾ ಆಡಳಿತ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ 200 ಮೀಟರ್‌ ನಡಿಗೆ ಹಾಗೂ ಜಾನಪದ ಗೀತೆ ಸ್ಪರ್ಧೆಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಹುಮನಾಬಾದ ಕ್ಷೇತ್ರ ಶಿಕ್ಷಣಾ ಧಿಕಾರಿಯಾಗಿ ನಿವೃತ್ತಿ ಹೊಂದಿದ ಗೋರ್ಟಾ ಮೂಲದ ಬಸವರಾಜ ಮಠಪತಿ ಅವರನ್ನು ಸನ್ಮಾನಿಸಿ ಆಶೀರ್ವದಿಸುತ್ತ ಮಠಪತಿ ಅವರು 85ರ ಇಳಿವಯಸ್ಸಿನಲ್ಲೂ ನಿತ್ಯ ನಸುಕಿನಲ್ಲಿ ಬೇಗ ಎದ್ದು ಬಹು ದೂರ ನಡೆದು ಯೋಗ ವ್ಯಾಯಾಮ ಮಾಡುತ್ತ ಯುವಕರಂತೆ ಲವಲವಿಕೆಯಿಂದ ಮಾದರಿಯಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು. ಬಸವರಾಜ ಮಠಪತಿ ಮಾತನಾಡಿ, ನಡಿಗೆ ಯೋಗ ಮಾಡುತ್ತ ವೃತ್ತಿಯಲ್ಲಿಯೂ ಸಾರ್ಥಕ ಸೇವೆ ಮಾಡಿದ ಸಮಾಧಾನವಿದೆ. ನನ್ನ ಗುರುಗಳಾದ ಲಿಂ| ರಾಚೋಟಿ ಶಿವಾಚಾರ್ಯರು, ಗವಿಮಠ ಗುರುಗಳ ಆಶೀರ್ವಾದ ಸದಾ ನನಗೆ ಪ್ರೇರಣೆ. ಗುರುವಿನಲ್ಲಿ ಅಪಾರ ಶಕ್ತಿ ಇದೆ.

Advertisement

ಗುರುವಿನಲ್ಲಿ ಭಕ್ತಿಯಿಟ್ಟು ನಡೆದಾಗ ಕಷ್ಟಗಳು ದೂರಾಗಿ ಸುಖ ದೊರೆಯುತ್ತವೆ ಎಂದು ನುಡಿದರು. ನಗರದ ಪುಣ್ಯಕೋಟಿ ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ| ಸೂರ್ಯಕಾಂತ ಶೀಲವಂತ ಅಧ್ಯಕ್ಷತೆ ವಹಿಸಿದ್ದರು.

ನಾಗಣ್ಣ ಭೂಶೆಟ್ಟೆ, ಮಲ್ಲಿಕಾರ್ಜುನ ಶೀಲವಂತ, ಶಿವಕುಮಾರ ಮಠ, ವೀರಣ್ಣ ಶೀಲವಂತ, ರುದ್ರಮಣಿ ಹಿರೇಮಠ ಇದ್ದರು. ಪ್ರೊ| ರುದ್ರೇಶ್ವರಸ್ವಾಮಿ ಸ್ವಾಗತಿಸಿದರು. ಪ್ರೊ| ಬಸವರಾಜ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next