Advertisement

ಪ್ರಾಧ್ಯಾಪಕ ವೃತ್ತಿಗಿದೆ ದೇಶ ರೂಪಿಸುವ ಶಕ್ತಿ: ಗಂಗಾಂಬಿಕಾ

04:24 PM Jun 02, 2019 | Naveen |

ಬಸವಕಲ್ಯಾಣ: ಪ್ರಾಧ್ಯಾಪಕರ ವೃತ್ತಿ ದೇಶ ರೂಪಿಸುವ ಹಾಗೂ ಹೊಸ ಬೆಳಕಿನ ಕಡೆಗೆ ಕೊಂಡೊಯ್ಯುವ ಕಾಯಕವಾಗಿದೆ ಎಂದು ಹರಳಯ್ಯನವರ ಪೀಠದ ಅಧ್ಯಕ್ಷೆ ಅಕ್ಕ ಡಾ|ಗಂಗಾಂಬಿಕಾ ಪಾಟೀಲ ಹೇಳಿದರು.

Advertisement

ನಗರದ ಬಿಕೆಡಿಬಿ ಯಾತ್ರಿನಿವಾಸದಲ್ಲಿ ನಡೆದ ಶಾಂತಿನಿಕೇತನ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ, ಸಾಹಿತಿ ಹಣಮಂತರಾವ್‌ ವಿಸಾಜಿ ಅವರ ಬೀಳ್ಕೊಡುಗೆ, ಬಸವಣ್ಣನವರ ವಚನಗಳ ಸಂಗ್ರಹ ಮತ್ತು ಭಾವನವಾದ ಕೃತಿ ಬಿಡುಗಡೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಈ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಜ್ಞಾನ ಸಾಧಿಸುವ ಮಾರ್ಗವಿದೆ ಎಂದರು.

ಅಧ್ಯಾಪಕರು ಸಾಮುದಾಯಿಕ ಜ್ಞಾನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದಾರೆ. ಬಸವಾದಿ ಶರಣರು ಲೋಕ ಜ್ಞಾನದ, ಸಮಾನತೆ ಸಾರಿದ ಅಧ್ಯಾಪಕರಾಗಿದ್ದರು ಎಂದು ಅಭಿಪ್ರಾಯಪಟ್ಟರು. ಹಣಮಂತರಾವ್‌ ವಿಸಾಜಿಯವರು ಶರಣರ ಹಾಗೂ ಬಸವಣ್ಣನವರ ತತ್ವಗಳನ್ನು ಅನುಸರಿಸಿ ಬದುಕಿದವರು. ಸರಳ ಸೌಜನ್ಯತೆಯನ್ನು ಮೈಗೂಡಿಸಿಕೊಂಡು ಬಂದವರು. ತಮ್ಮ 38 ವರ್ಷಗಳ ಸೇವಾ ಅವಧಿಯಲ್ಲಿ ಬಸವತತ್ವ ಮತ್ತು ಕಾಯಕ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದ ಶರಣ ಚೇತನರು ಎಂದು ಬಣ್ಣಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ ಮಾತಾನಾಡಿ, ಶಿಕ್ಷಕ ಹುದ್ದೆ ಅತ್ಯಂತ ಪವಿತ್ರವಾದದ್ದು. ವೃತ್ತಿಪರತೆ ಕೊರತೆಯನ್ನು ನೀಗಿಸುವ ಹೊಣೆಗಾರಿಕೆ ಇಂದಿನ ಎಲ್ಲ ಶಿಕ್ಷಕರಲ್ಲಿ ಬರಬೇಕು. ತಮ್ಮ ತಮ್ಮ ವೃತ್ತಿ ಬದ್ಧತೆಯೇ ಅಧ್ಯಾಪಕರನ್ನು ಬೆಳೆಸುತ್ತದೆ. ಆಯ್ಕೆ ಮಾಡಿಯೋ ಆಕಸ್ಮಿಕವಾಗಿಯೋ ಶಿಕ್ಷಕರಾದ ಎಲ್ಲರಲ್ಲಿ ಅಧ್ಯಾಪನ ಕ್ರಿಯೆಗಳು ಪ್ರಾಮಾಣಿಕವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ಭೀಮಾಶಂಕರ ಬಿರಾದಾರ ಮಾತ‌ನಾಡಿದರು. ಇದೇ ವೇಳೆ ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ ಹಾಗೂ ನಿವೃತ್ತ ಉಪನ್ಯಾಸಕಿ ಸರಸ್ವತಿ ಪಾಟೀಲ ಅವರು ಬಸವಣ್ಣನವರ ವಚನಗಳ ಸಂಗ್ರಹ ಪುಸ್ತಕ ಬಿಡುಗಡೆ ಮಾಡಿದರು.

Advertisement

ಜಿಪಂ ಸದಸ್ಯ ಆನಂದ ಪಾಟೀಲ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಗಿರೀಶ ರಾಜೋಳಕರ, ತೋಟಗಾರಿಕೆ ಅಧಿಕಾರಿ ಸಂತೋಷ ತಾಂಡೂರ, ಅನುದಾನಿತ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಅಶೋಕ ರಾಯಪಳ್ಳೆ, ಪ್ರಾಚಾರ್ಯ ಪ್ರಭುಲಿಂಗಯ್ಯ ಟಂಕಸಾಲಿಮಠ, ಶಿವರಾಜ ಖೇಲೆ, ಶ್ರೀಶೈಲ ಹುಡೇದ, ಬಕ್ಕಯ್ಯ ಸ್ವಾಮಿ, ಮಹಾದೇವಪ್ಪ ಇಜಾರೆ, ನಾಗಪ್ಪ ನಿಣ್ಣೆ, ಸುಲೋಚನಾ ಮಾಮಾ, ಅನಂತ ಬಂಡಿ, ರೇವಣಸಿದ್ದಪ್ಪ ಡೊಂಗರೆ, ಪ್ರಶಾಂತ ಬೇಲೂರೆ ಸೇರಿದಂತೆ ಮತ್ತಿತರರು ಇದ್ದರು. ಹಣಮಂತರಾವ್‌ ವಿಸಾಜಿ ದಂಪತಿಯನ್ನು ಸನ್ಮಾನಿಸಲಾಯಿತು. ದೇವೇಂದ್ರ ಬರಗಾಲೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next