ಬಸವಕಲ್ಯಾಣ: ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ ಹಾಗೂ ಬೋಧನೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ಬೋಧನೆ ಸರಳವಾಗುತ್ತದೆ ಎಂದು ಹಿರನಾಗಾಂವ ಶ್ರೀ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹಿರನಾಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳ ಕಿರು ಹೊತ್ತಿಗೆ ಮತ್ತು ಸಿಡಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕಾಗಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಬಾಳೇಶ ಹತ್ತರಕಿ ಹಾಗೂ “ಜ್ಞಾನ ಸಿಂಚನ’ ಹಾಗೂ “ಜ್ಞಾನ ಕಲ್ಯಾಣ’ “ಸಾಧನೆಯ ಮೆಟ್ಟಲುಗಳು’ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ವರ್ಗಕೋಣೆ ಕೈಪಿಡಿ ರಚಿಸಿ ಅದರ ಜೊತೆಗೆ ತಂತ್ರಜ್ಞಾನ ಆಧಾರಿತ ಸ್ಲೆ„ಡ್ ಶೋ ವಿಡಿಯೋಗಳು ಮತ್ತು ಪಿಪಿಟಿಗಳು ಫೈಲ್‌ಗಳನ್ನು ಸಿಡಿ ಮೂಲಕ ರಚಿಸಿ ಮಕ್ಕಳು ಪರೀಕ್ಷೆಗಳನ್ನು ಸರಳವಾಗಿ ಎದುರಿಸುವಂತೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿ ಕಾರಿ ಸಿ.ಜಿ. ಹಳ್ಳದ ಮಾತನಾಡಿ, ಇಬ್ಬರ ಶಿಕ್ಷಕರ ಕಾರ್ಯ ಶ್ಲಾಘನೀಯವಾದದ್ದು. ಇವರು ರಚಿಸಿದ ಪುಸ್ತಕಗಳನ್ನು ಇಡೀ ತಾಲೂಕಿನ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು. ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಬಾಳೇಶ ಹತ್ತರಕಿ, ಬಸವರಾಜ ಮಾನೋಳೆ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಅಂಬಾದಾಸ ಜಮಾದಾರ ಮಾತನಾಡಿ, ಶಿಕ್ಷಕರ ಕಾರ್ಯ ಇಡೀ ತಾಲೂಕಿಗೆ ಮಾದರಿ ಆಗಿದ್ದು ಎಂದರು. ಕ.ರಾ.ನೌ. ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೇತ್ರ ಮಾತನಾಡಿ, ಶಿಕ್ಷಕರ ಕಾರ್ಯಕವನ್ನು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವ ದಿನ ತಹಶೀಲ್ದಾರ್ ಅವರಿಂದ ಸನ್ಮಾನಿಸಲಾಗುವುದು ಎಂದರು.
ಗಣಿತ ಶಿಕ್ಷಕ ಬಸವರಾಜ ಮಾನೋಳೆ ಅವರ “ಜ್ಞಾನ ಸುರಭಿ’ ಅಧ್ಯಾಯವಾರು ಗಣಿತ ನೋಟ್ಸ್ ರಚಿಸಿ ಪ್ರಟಿಸಿದರು. ಪ್ರೊ| ನರಸಿಂಗರೆಡ್ಡಿ ಗದಲೇಗಾಂವ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯೋಗರಾಜ ಕೆ. ಮಾತನಾಡಿದರು. ಅಧ್ಯಕ್ಷತೆ ಮುಖ್ಯಗುರು ಬಕ್ಕಪ್ಪಾ ಭವಾನಿಕರ್ ವಹಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ, ಹೇಮಾವತಿ ಅಳ್ಳಿಕಟ್ಟಿ, ಮುಖ್ಯಗುರು ಸಂಘದ ಅಧ್ಯಕ್ಷ ಚಂದ್ರಕಾಂತ ಕಿವುಡೆ, ನೌಕರ ಸಂಘದ ಖಜಾಂಚಿ ಸೂರ್ಯಕಾಂತ ಅಡಕೆ , ಸುಧಾಕರ ಮುಳೆ, ಪ್ರಕಾಶ ಘೋರವಾಡೆ, ಅಕ್ಷರ ದಾಸೋಹ ಅಧಿಕಾರಿ ಮಹಿಪಾಲರೆಡ್ಡಿ, ಚನ್ನವೀರ ಜಮಾದಾರ, ಎಸ್ ಡಿಎಂಸಿ ಅಧ್ಯಕ್ಷ ಓಂಕಾರ ಭಂಡಾರಿ, ಶಂಭುಲಿಂಗ ದೇವಕರ್, ಸುಭಾಷ ದೇವಕರ್ ಹಾಗೂ ಶಿಕ್ಷಕರಾದ ಶಿವಾಜಿ ಶೆಟ್ಟಿ, ಬಸವರಾಜ ಕೋಟಿ ಶರಣಪ್ಪ, ಪ್ರವೀಣಕುಮಾರ, ಬಾಲೇಶ ರಜನಿಕಾಂತ, ಶಾಮರಾವ ಇದ್ದರು. ನಾಗೇಂದ್ರ ಬಿರಾದಾರ ನಿರೂಪಿಸಿದರು. ಜಗದೀಶ ಸ್ವಾಗತಿಸಿದರು. ಬಾಳೇಶ ಹತ್ತರಕಿ ವಂದಿಸಿದರು.