Advertisement

7ರಿಂದ ಬಸವೇಶ್ವರ ಜಾತ್ರಾ ಮಹೋತ್ಸವ

01:22 PM May 03, 2019 | Naveen |

ಬಸವಕಲ್ಯಾಣ: ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ವತಿಯಿಂದ ಮಹಾತ್ಮ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮೇ 7ರಿಂದ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Advertisement

ಮೇ 7ರಂದು ಬೆಳಗ್ಗೆ 5:00ಕ್ಕೆ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನವರ ಮೂರ್ತಿಗೆ ಅಷ್ಠಗಂಧ ಪೂಜೆ, ನಂತರ ಬಸವ ಭಕ್ತರಿಂದ ವಚನ ಪಠಣ, ಬಸವಣ್ಣನವರ ಬೆಳ್ಳಿ ತೊಟ್ಟಿಲು ಮೆರವಣಿಗೆ ಶಿವಶರಣ ಹರಳಯ್ಯ ಚೌಕದವರೆಗೆ ತಲುಪಿ ಮರಳಿ ದೇವಸ್ಥಾನಕ್ಕೆ ಮರಳಿ ಬರಲಿದೆ. ಸಂಜೆ 7:00ಕ್ಕೆ ಶಾಸಕ ಬಿ.ನಾರಾಯಣರಾವ್‌ ಬೆಳ್ಳಿ ತೊಟ್ಟಿಲು ಪೂಜೆ ನೆರವೇರಿಸುವರು ಮತ್ತು ಸಹಾಯಕ ಆಯುಕ್ತ ಜ್ಞಾನೇಂದ್ರ ಕುಮಾರ ಗಂಗವಾರ ಮೆರವಣಿಗೆಗೆ ಚಾಲನೆ ನೀಡುವರು.

ಷಟಸ್ಥಳ ಧ್ವಜಾರೋಹಣ ನಗರದ ಬಸವೇಶ್ವರ ದೇವಸ್ಥಾನದಲ್ಲಿ ಹರಳಯ್ಯ ಗವಿ ಡಾ| ಅಕ್ಕ ಗಂಗಾಂಬಿಕಾ ಅಕ್ಕ, ಗಾಂಧಿ ವೃತ್ತದಲ್ಲಿ ಮಹಾರಾಷ್ಟ್ರದ ಉಸ್ತುರಗಿ ವಿರಕ್ತಮಠದ ಶ್ರೀ. ಕೋರಣೇಶ್ವರ ಸ್ವಾಮಿಗಳು, ಬಸವೇಶ್ವರ ವೃತ್ತದಲ್ಲಿ ಹುಲಸೂರ ಶ್ರೀ, ಡಾ| ಶಿವಾನಂದ ಮಹಾಸ್ವಾಮಿಗಳು, ಹರಳಯ್ಯ ವೃತ್ತದಲ್ಲಿ ಬೇಲೂರ ಶ್ರೀ, ಗುರುಬಸವೇಶ್ವರ ವಿರಕ್ತ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನೆರವೇರಿಸುವರು.

ಸಂಜೆ 5:00ಕ್ಕೆ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ. ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ನಿರ್ದೇಶಕಿ ಕಲ್ಪನಾ ದಯಾನಂದ ಶೀಲವಂತ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ ಆಗಮಿಸುವರು.ಮೇ 8ರಂದು ಸಂಜೆ 5:00ಕ್ಕೆ ನಂದಿ ಧ್ವಜ ಪಲ್ಲಕ್ಕಿ ಪೂಜೆ ನಡೆಯಲಿದೆ. ಹಾರಕೂಡ ಹಿರೇಮಠ ಸಂಸ್ಥಾನದ ಡಾ| ಚನ್ನವೀರ ಶಿವಾಚಾರ್ಯರು ಪಲ್ಲಕ್ಕಿ ಪೂಜೆ ನೆರವೇರಿಸುವರು. ಸಿಪಿಐ ಮಲ್ಲಿಕಾರ್ಜುನ ಯಾತನೂರ ನಂದಿಧ್ವಜ ಪೂಜೆ ಮಾಡುವರು ಮತ್ತು ಸೋಮಶೇಖರಯ್ಯ ವಸ್ತ್ರದ ಅಧ್ಯಕ್ಷತೆ ವಹಿಸುವರು. ರಾಜಕುಮಾರ ಚಿರಡೆ ಪಾಲ್ಗೊಳ್ಳುವರು.

ಸಂಜೆ 7:00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಉಪಾಧ್ಯಕ್ಷ ಅನೀಲಕುಮಾರ ಮೆಟಗೆ ಕಾರ್ಯಕ್ರಮ ಉದ್ಘಾಟಿಸುವರು, ಸಮಿತಿ ಕಾರ್ಯದರ್ಶಿ ಶಿವರಾಜ ಶಾಶೆಟ್ಟೆ ಅಧ್ಯಕ್ಷತೆ ವಹಿಸುವರು. ಗುರುಪಾದಯ್ಯ ಗಡಿಯಾಳ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಕುರಕೋಟೆ ಭಾಗವಹಿಸುವರು. ಮೇ 9ರಂದು ಬೆಳಗ್ಗೆ 7:30ಕ್ಕೆ ನಗರದ ಬಸವೇಶ್ವರ ರಥ ಮೈದಾನದಲ್ಲಿ ಜಂಗಿ ಕುಸ್ತಿ ನಡೆಯಲಿದೆ. ಎಪಿಎಂಸಿ ಮಾಜಿ ಅದ್ಯಕ್ಷ ಸಿದ್ರಾಮಪ್ಪ ಗುದಗೆ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡುವರು. ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಮಲ್ಲಯ್ಯಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸುವರು.

Advertisement

ಸಂಜೆ 5:30ಕ್ಕೆ ನಗರದ ಬಸವೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜ ಪೂಜೆ ಕಾರ್ಯಕ್ರಮ ನಡೆಯಲಿದೆ. ಸೊಲ್ಲಾಪುರದ ರಾಜಶೇಖರ ಶಿವಾನಂದ ಹಿರೆಹಬ್ಬ ಪೂಜೆ ನೆರವೇರಿಸುವರು. ಕಮಿಟಿ ನಿರ್ದೇಶಕ ಭದ್ರಿನಾಥ ಪಾಟೀಲ ಭಾಗವಹಿಸುವರು.

ರಾತ್ರಿ 7:00ಕ್ಕೆ ನಗರದ ಬಸವೇಶ್ವರ ರಥ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನ ಪಂಚ ಕಮಿಟಿ ಕೋಶಾಧ್ಯಕ್ಷ ಸುಭಾಷ ಹೊಳಕುಂದೆ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಯದರ್ಶಿ ರೇವಣಪ್ಪ ರಾಯವಾಡೆ ಅಧ್ಯಕ್ಷತೆ ವಹಿಸುವರು. ಧಾರವಾಡ, ರಾಮದುರ್ಗ ಕಲಾವಿದರಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:30ಕ್ಕೆ ನಗರದ ಕೋಟೆ ಹತ್ತಿರ ನಂದಿ ಧ್ವಜ ವಿಶೇಷ ಪೂಜೆ ಹಾಗೂ 12:30ಕ್ಕೆ ಮಹಾತ್ಮ ಬಸವೇಶ್ವರ ರಥೋತ್ಸವ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next