Advertisement
ನಗರದ ಅನುಭವ ಮಂಟಪದ ಪರಿಸರದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪದಿಂದ ಹಮ್ಮಿಕೊಂಡ 40ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಎರಡನೇ ದಿನವಾದ ರವಿವಾರ ನಡೆದ ವಚನ ಕಲ್ಯಾಣ-ತಾತ್ವಿಕ ಗೋಷ್ಠಿ-3, ಗ್ರಂಥ ಲೋಕಾರ್ಪಣೆ ಮತ್ತು ಡಾ| ಎಂ.ಎಂ. ಕಲಬುರಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಜಾ.ಲಿ.ಮ. ಬೀದರ್ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಪ್ರಾಸ್ತಾವಿಕ ಮಾತನಾಡಿ, ಸೂಕ್ಷ್ಮವಾದ ಸಂಪೂರ್ಣ ವಿಚಾರ ಮಂಡನೆ ಮಾಡುವುದೇ ತಾತ್ವಿಕ ಚಿಂತನೆಯಾಗಿದೆ. ಹೀಗಾಗಿ ವಚನ ಇದ್ದರೆ ಮಾತ್ರ ಮತ್ತೆ ಕಲ್ಯಾಣ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ನುಡಿದಂತೆ ನಡೆದ ಶರಣರು: ಶರಣರೂ ಮನುಷ್ಯರೇ ಆಗಿದ್ದರು. ಆದರೆ ಅವರು ಭಾಷೆ ಪ್ರಮಾಣ ಮತ್ತು ನುಡಿದಂತೆ ನಡೆಯುತ್ತಿದ್ದರು. ಅವರ ಬದುಕಿನಲ್ಲಿ ಅನುಭವಿಸಿರುವುದೇ ವಚನಗಳ ಮೂಲಕ ಮೂಡಿಬಂದಿದೆ. ಆದ್ದರಿಂದ ವಚನಗಳ ಅಡಿಪಾಯ ಹಾಕುವುದು ತುಂಬ ಅವಶ್ಯ. ಆ ನಿಟ್ಟಿನಲ್ಲಿಯೇ ಅನುಭವ ಮಂಟಪ ಉತ್ಸವ ಹಾಗೂ ಬಸವಾದಿ ಶರಣರ ಚಟುವಟಿಕೆ ನಿರಂತರ ಮಾಡುವ ಉದ್ದೇಶ ನಮ್ಮದಾಗಿದೆ ಎಂದರು.
ಅನುಭವ ಮಂಟಪ ಉತ್ಸವ ಸಮಿತಿ ಅಧ್ಯಕ್ಷರಾದ ಹಾಗೂ ಶಾಸಕ ಬಿ.ನಾರಾಯಣರಾವ್ ಮಾತನಾಡಿದರು. ಈ ವೇಳೆ ಮಹಾಲಿಂಗ ಸ್ವಾಮೀಜಿ, ಗುರುಬಸವ ದೇವರು, ಜಹೀರಾಬಾದ್ ಶಾಸಕ ಮಾಣಿಕರಾವ್, ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಜಿಪಂ ಅಧ್ಯಕ್ಷೆ ಗೀತಾ ಪಂಡೀತ ಚಿದ್ರಿ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಶಿವರಾಜ ನರಶೆಟ್ಟಿ, ಪ್ರದೀಪ ವಾತಡೆ ಸೇರಿದಂತೆ ಇತರರು ಇದ್ದರು.