ಬಸವಕಲ್ಯಾಣ: ಸರ್ಕಾರಿ, ಖಾಸಗಿ ಕೆಲಸ ಸೇರಿದಂತೆ ಪ್ರತಿಯೊಂದಕ್ಕೂ ಆಧಾರ ಕಾರ್ಡ್ ಕೇಳಲಾಗುತ್ತದೆ. ಆದರೆ ಕೋಹಿನೂರ ಜಿಪಂ ವ್ಯಾಪ್ತಿಗೆ ಬರುವ ಜನರು ಆಧಾರ್ ಕಾರ್ಡ್ ಪಡೆಯಲು ಮತ್ತು ಸಣ್ಣ ತಿದ್ದುಪಡಿ ಮಾಡಿಕೊಳ್ಳಬೇಕಾದರೂ ಸುಮಾರು 35 ಕಿ.ಮೀ. ದೂರದ ಬಸವಕಲ್ಯಾಣ ನಗರಕ್ಕೆ ಬರುವ ಸ್ಥಿತಿ ಇದೆ.
Advertisement
ಹೋಹಿನೂರ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪಹಣಿ, ಜಾತಿ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ಸಿಗಬೇಕೇಂಬ ಉದ್ದೇಶದಿಂದ ಆರಂಭಿಸಲಾದ ಅಟಲ್ಜೀ ಜನಸೇವೆ ಕೇಂದ್ರ ಕೇವಲ ಪಹಣಿ ಮತ್ತು ಜಾತಿಪ್ರಮಾಣ ಪತ್ರ ನೀಡುವುದಕ್ಕೆ ಸೀಮಿತವಾದರೆ, ಉಪ ಅಂಚೆ ಕಚೇರಿಯಲ್ಲಿ ನೆಟ್ವರ್ಕ್ ಸಮಸ್ಯೆ ಹೇಳಿ ಆಧಾರ್ ಕಾರ್ಡ್ ಸೇವೆಯನ್ನು ಬಂದ್ ಮಾಡಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
Related Articles
Advertisement
ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಗ್ರಾಮದ ವೃದ್ಧರು ಮತ್ತು ವಿದ್ಯಾರ್ಥಿಗಳು ಆಧಾರ್ ಕಾರ್ಡ್‌ಗಾಗಿ ತಹಶೀಲ್ದಾರ್ ಕಚೇರಿಗೆ ಮತ್ತು ಪಕ್ಕದ ಊರಿಗೆ ಸುತ್ತಾಡುವಂತಾಗಿದೆ. ಹೀಗಾಗಿ ಸಂಬಂಧ ಪಟ್ಟವರು ಶೀಘ್ರವಾಗಿ ಆಧಾರ್ ಸೇವೆ ಪ್ರಾರಂಭಿಸಿ ಸಮಸ್ಯೆಯಿಂದ ಮುಕ್ತಿಗೊಳಿಸಬೇಕು ಎಂಬುವುದು ಜನರ ಒತ್ತಾಯವಾಗಿದೆ.
ನಗರದಿಂದ ಕೋಹಿನೂರ ಗ್ರಾಮ ಸುಮಾರು 35 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಸಂಬಂಧ ಪಟ್ಟವರು ಆದಷ್ಟು ಬೇಗ ಅಟಲ್ ಜೀ ಸೇವಾ ಕೇಂದ್ರದಲ್ಲಿ ಮತ್ತು ಉಪ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಸಿಗುವಂತೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.•ರತಿಕಾಂತ, ಗ್ರಾಪಂ ಸದಸ್ಯರು