Advertisement

ಬಸವ ತತ್ವ ಬದುಕಿಗೆ ದಾರಿದೀಪ

11:51 AM Nov 13, 2017 | Team Udayavani |

ಆಳಂದ: ಬಸವ ತತ್ವ ಆಚರಣೆ ಬದುಕಿಗೆ ದಾರಿ ದೀಪವಾಗಿದೆ ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ| ಶಿವರಾಜ ಪಾಟೀಲ ಹೇಳಿದರು. ತಾಲೂಕಿನ ನರೋಣಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ನರೋಣಾ ವಲಯದ ಘಟಕ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ವಚನಗಳ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಜಾತ್ಯತೀತ ಮನೋಭಾವ, ಕಾಯಕ, ದಾಸೋಹ ಸಮಾನತೆ ತತ್ವಗಳ ಸಾರಿದ ಬಸವಾದಿ ಶಿವಶರಣರ ಕನಸು ನನಸಾಗಿಸಲು ಮುಂದಾಗಬೇಕು ಎಂದು ಹೇಳಿದರು.

ಕಲಬುರಗಿ ಜಿಲ್ಲಾ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿ, ಶರಣರು ಯಾವುದೇ ಜಾತಿ ಪಂಥಕ್ಕೆ ಸೀಮಿತವಲ್ಲ. ಮನುಷ್ಯ ಧರ್ಮವನ್ನು ಪ್ರತಿಪಾದಿಸಿದ್ದಾರೆ. ಅವರ ನೀಡಿದ ವಚನಗಳ ಮಾಡಿದ ಕಾರ್ಯವನ್ನು ಇಂದಿನ ಎಲ್ಲರಿಗೂ ಆದರ್ಶಪ್ರಯಾವಾಗಿದೆ. ವಚನಗಳನ್ನು ಅಧ್ಯಯನದ ಮೂಲಕ ಆಚರಣೆಗೆ ತರಬೇಕು ಎಂದು
ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಶಿವಶಾಂತರೆಡ್ಡಿ ಮತ್ತು ಅಪ್ಪಸಾಹೇಬ ತೀರ್ಥೆ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗ್ರಾಮದ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿದರು. ಗ್ರಾಮದ ಚಂದ್ರಕಾಂತ ಸಿ. ವಾಲಿ, ಅಪ್ಪಾರಾವ ಪಾಟೀಲ, ಸಿದ್ದಪ್ಪ ವಾಗªರಗಿ, ಬಾಳಪ್ಪ ಬೋಳಶೆಟ್ಟಿ, ಗ್ರಾಪಂ ಸದಸ್ಯ ಪ್ರಭುಲಿಂಗ ಹೀರಾ, ಮಲ್ಕಪ್ಪ ಬಂಕುರ, ತಸ್ಲಿಮಾ ಖಜೂರಿ, ವೀರಭದ್ರಪ್ಪ ಹಾರಕೆ, ನಾಗಣ್ಣ ಬಿರಾದಾರ, ಕಲ್ಯಾಣಿ ತುಕಾಣೆ, ಮುಖ್ಯ ಶಿಕ್ಷಕ ಶಂಕರ ಜಾಧವ, ಸುವರ್ಣ ಮಾಲೀಪಾಟೀಲ, ಅಂಬಾರಾಯ ಗಣಜಲಖೇಡ, ಕ್ಷೇಮಲಿಂಗ ಎಸ್‌. ಮುರಡಿ ಇದ್ದರು. ಶಿಕ್ಷಕ ನಿಂಗಪ್ಪ ಮಾಗೊಂಡ ಸ್ವಾಗತಿಸಿದರು. ವೀರಣ್ಣ ಬೋಳಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿಂಗರಾಜ ವಾಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next