Advertisement
ಅಮ್ಮನ ಮಡಿಲು ಚಾರಿಟೇಬಲ್ ಹೆಸರಿನ ಸೇವಾ ಸಂಸ್ಥೆಯನ್ನು ನಡೆಸುತ್ತಿರುವ ಸಂಗಮೇಶ ಬಬಲೇಶ್ವರ ಹಾಗೂ ಶ್ವೇತಾ ಬಬಲೇಶ್ವರ ಇವರು ತಂದೆ-ತಾಯಿಯನ್ನು ಕಳೆದುಕೊಂಡಿರುವ ಅಭಿಷೇಕ ಜಾಧವ ಎಂಬ ವಿದ್ಯಾರ್ಥಿಯ ಶಿಕ್ಷಣ ದತ್ತು ಪಡೆದು ವಿಶೇಷ ಸ್ಮರಣೆಯೊಂದಿಗೆ ಬಸವ ಜಯಂತಿ ಆಚರಿಸಿದ್ದಾರೆ.
Related Articles
Advertisement
ಈ ಸಂದರ್ಭದಲ್ಲಿ ಮಾತನಾಡಿದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹೆತ್ತವರಿಲ್ಲದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನನ್ನ ಬದುಕಿನ ಬಹು ಮುಖ್ಯ ಜವಾಬ್ದಾರಿ. ಈ ಸೇವಾ ಕಾರ್ಯದಲ್ಲಿ ಸಿಗುವ ಆತ್ಮತೃಪ್ತಿ ನನಗೆ ಬೇರೆ ಯಾವುದರಲ್ಲೂ ಇಲ್ಲ ಎಂದರು.
ಶ್ವೇತಾ ಬಬಲೇಶ್ವರ ಮಾತನಾಡಿ, ನಮ್ಮ ಮನೆಗೆ ಬಂದ ಅಜ್ಜಿಯೊಬ್ಬರು ನನ್ನೊಂದಿಗೆ ಹಂಚಿಕೊಂಡ ನೋವಿನ ಸಂಗತಿಗೆ ನಾವು ಪರಿಹಾರವಾಗಬೇಕು ಎಂಬ ಆಶಯದೊಂದಿಗೆ ಅಭಿಷೇಕನನ್ನು ಹುಡುಕಿಕೊಂಡು ಹೋಗಿದ್ದೇವೆ. ಆತನ ಶೈಕಣಿಕ ಬದುಕಿಗೆ ನೆರವು ನೀಡಿರುವುದು ಸಮಾಜಕ್ಕೆ ಸಕಾತಾತ್ಮಕ ಸಂದೇಶ ನೀಡುವುದಾಗಿದಯೇ ಹೊರತು, ಪ್ರಚಾರದ ಉದ್ದೇಶವಿಲ್ಲ ಎಂದು ಸಮಜಾಯಿಸಿ ನೀಡಿದರು.