Advertisement

ಬಹಿರ್ದೆಸೆ ಜಾಗದಲ್ಲೇ ಬಸವ ಭವನ!

06:30 PM Aug 09, 2021 | Nagendra Trasi |

ಬಸವನಬಾಗೇವಾಡಿ: ಸರ್ಕಾರ ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ, ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಸವ ಭವನವೇ ಸಾಕ್ಷಿ. ಕಳೆದ ಹಲವು ವರ್ಷಗಳ ಹಿಂದೆ ಈ ಜಾಗೆ ಬಯಲು ಬಹಿರ್ದೆಸೆಗೆ ಉಪಯೋಗವಾಗುತ್ತಿತ್ತು. ಆದರೆ ಇಂದು ಈ ಜಾಗೆಯಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ಬೃಹತ್‌ ಬಸವ ಭವನ ತೆಲೆ ಎತ್ತಿ ನಿಂತಿದೆ.

Advertisement

ಪಟ್ಟಣದ ವಿಜಯಪುರ ರಸ್ತೆಯ ಯಾತ್ರಿ ನಿವಾಸದ ಪಕ್ಕದಲ್ಲಿರುವ ಮನಗೂಳಿ- ಬಿಜ್ಜಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ 150ಗಿ150 ವಿಶಾಲವಾದ ಜಾಗೆಯಲ್ಲಿ 100ಗಿ100 ಅಳತೆಯಲ್ಲಿ ಮೂರು ಅಂತಸ್ತಿನ ಭವ್ಯವಾದ ಬಸವ ಭವನ ನಿರ್ಮಾಣ ಕಾರ್ಯ ಶೇ.99 ಪೂರ್ಣಗೊಂಡಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಿದೆ.

ಶಾಸಕ ಶಿವಾನಂದ ಪಾಟೀಲ ತಾಲೂಕಿನ ಎಲ್ಲ ಸಮುದಾಯದ ಜನರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಈ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರ ಪ್ರಯತ್ನದ ಫಲದಿಂದ ಮೂರು ಅಂತಸ್ತಿನ ಬೃಹತ್‌ ಬಸವ ಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಜನರ ಬಹುದಿನಗಳ ಆಸೆಗೆ ರೆಕ್ಕೆ ಪುಕ್ಕ ಬಂದಿದೆ.

ವಿಶೇಷ ಸೌಲಭ್ಯಗಳೇನು?: ಮೂರು ಅಂತಸ್ತಿನ ಭವ್ಯವಾದ ಬಸವ ಭವನದ ಕೆಳ ಮಹಡಿಯಲ್ಲಿ ಅಡುಗೆ ತಯಾರಿಸುವ ಕೋಣೆ ಹಾಗೂ ಊಟದ ಕೋಣೆ, 2 ನೇ ಮಹಡಿಯಲ್ಲಿ ಸುಮಾರು 500ರಿಂದ 1000 ಜನ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸುವ ಬೃಹತ್‌ ವೇದಿಕೆ ನಿರ್ಮಾಣವಾಗಿದೆ.

ಮೊದಲನೇ ಮಹಡಿಯಲ್ಲಿ 2 ವಿಐಪಿ ಕೋಣೆಗಳು, 10 ಸಾಮಾನ್ಯ ಕೋಣೆಗಳಿದ್ದು, ಎಲ್ಲ ಕೊಣೆಗಳಲ್ಲಿ ಇಂಡಿಯನ್‌ ಸೇರಿದಂತೆ ವೆಸ್ಟರ್ನ್ ಶೌಚಾಲಯ, ಬಾತ್‌ ರೂಂ, ಫ್ಯಾನ್‌, ಎಸಿ, ಶುದ್ಧ ಕುಡಿವ ನೀರಿನ ವ್ಯವಸ್ಥೆ ಇದೆ. ಭವನದ ಮುಂದೆ ಚಿಕ್ಕದಾದ ಉದ್ಯಾನವನ ಹಾಗೂ ಪಕ್ಕದಲ್ಲಿರುವ 140ಗಿ130 ಜಾಗೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಹೀಗೆ ಹತ್ತಾರು ಸೌಲಭ್ಯ ಬಸವಭವನ ಹೊಂದಿದೆ.

Advertisement

ಎಲ್ಲ ಸಮುದಾಯದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯದೊಂದಿಗೆ ಸರ್ಕಾರದಿಂದ ಹೈಟೆಕ್‌ ಬಸವ ಭವನ ನಿರ್ಮಿಸಲಾಗಿದೆ. ಕೊರೊನಾದಿಂದ ಕಾಮಗಾರಿ ವಿಳಂಬವಾಗಿದ್ದು, ಶೇ.99 ಕಾರ್ಯ ಪೂರ್ಣವಾಗಿದೆ. ಕೆಲವೇ ತಿಂಗಳಗಳಲ್ಲಿ ಲೋಕಾರ್ಪಣೆಯಾಗಲಿದೆ.
ಶಿವಾನಂದ ಪಾಟೀಲ, ಶಾಸಕ

ಬಸವನಾಡಿನಲ್ಲಿ ಬಸವ ಭವನ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯ. ಭವನದ ಬಗ್ಗೆ ಸಿದ್ದೇಶ್ವರ ಶ್ರೀಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವನ ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಳ್ಳಬೇಕು. ಆಗ ಶಾಸಕ ಶಿವಾನಂದ ಪಾಟೀಲರ ಕಾರ್ಯ ಅರ್ಥಪೂರ್ಣವಾಗುತ್ತದೆ.
ಸಿದ್ದಲಿಂಗ ಶ್ರೀ, ವಿರಕ್ತಮಠ

ಶಾಸಕ ಶಿವಾನಂದ ಪಾಟೀಲರ ಪ್ರತಿಯೊಂದು ಯೋಜನೆಗಳು ಮುಂದಿನ ಯುವ ಪೀಳಿಗೆಗೆ ಉಪಯುಕ್ತವಾಗಲಿವೆ. ಅವರ ಕೈಗೊಂಡ ಕಾರ್ಯಗಳು ಜನ ಮೆಚ್ಚುಗೆ ಗಳಿಸಿವೆ.
ರವಿಗೌಡ ಚಿಕ್ಕೊಂಡ,ಯುವ
ಮುಖಂಡ

2015ರಲ್ಲಿ ಪಟ್ಟಣದಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ ನಡೆಸಲಾಗಿತ್ತು. ಈ ಸ್ಥಳ ನೋಡಿ ಶ್ರೀಗಳು ಇಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಕಟ್ಟಡ ನಿರ್ಮಾಣವಾಗಲಿ ಎಂಬ ಆಸೆ ವ್ಯಕ್ತಪಡಿಸಿದ್ದರು. ಅದರಂತೆ ಶಾಸಕ ಪಾಟೀಲರು ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ.
ವಿನೂತ ಕಲ್ಲೂರ, ಯುವ ಮುಖಂಡ

ಪ್ರಕಾಶ ಬೆಣ್ಣೂರ

Advertisement

Udayavani is now on Telegram. Click here to join our channel and stay updated with the latest news.

Next