Advertisement

ನಿರ್ಮಾಣ ಹಂತದಲ್ಲೇ ಬಿರುಕು ಬಿಟ್ಟ ಬಸವ ಭವನ ಕಟ್ಟಡ!

01:45 PM Dec 24, 2020 | Suhan S |

ನಂಜನಗೂಡು: ತಾಲೂಕಿನಲ್ಲಿ ಬಹು ನಿರೀಕ್ಷೆಯ ಬಸವ ಭವನ ಕಟ್ಟಡ ಪೂರ್ಣಗೊಳ್ಳುವ ಮುನ್ನವೇ ಬಿರುಕುಬಿಡಲಾರಂಭಿಸಿದೆ. ಇದಕ್ಕೆ ಕಳಪೆ ಕಾಮಗಾರಿಯೇಕಾರಣವಾಗಿದೆ ಎನ್ನಲಾಗಿದೆ.

Advertisement

ನಗರದ ಅಂಡುನಹಳ್ಳಿ ಬಡವಾಣೆಯಲ್ಲಿ 2017 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಪ್ರಥಮ ಹಂತದಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಬಸವ ಭವನ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಈಗಾಗಲೇ 1.83 ಕೋಟಿ ರೂ.ಗಳನ್ನು ಬಸವ ಭವನದನೆಲಅಂತಸ್ತಿನಕಟ್ಟಡಕಾಮಗಾರಿಗಾಗಿಯೇ ವ್ಯಯಿಸಲಾಗಿದ್ದು, ಇಷ್ಟು ಮೊತ್ತವನ್ನು ಖರ್ಚುಮಾಡಿದ್ದರೂ ಗೋಡೆಗಳು ಬಿರುಕು ಬಿಡುತ್ತಿವೆ. ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವನಿಕರು ಆಪಾದಿಸಿದ್ದಾರೆ.

ಹೊಸ ಸರ್ಕಾರ ಬಂದ ಬಳಿಕ ಯಾರೂ ಕಾಳಜಿ ವಹಿಸದ ಕಾರಣ ಕಾಮಗಾರಿ ಸ್ಥಗಿತಗೊಂಡಿದ್ದು, ನೆಲಅಂತಸ್ತಿನ ಈ ಕಟ್ಟಡ ಪಾಳು ಬಿದ್ದಿರುವಂತೆ ಕಾಣುತ್ತಿದೆ. ಈ ಭವನದ ಹಣಕಾಸಿನ ನೆರವುಕನ್ನಡ ಹಾಗೂ ಸಂಸ್ಕೃತಿ ಇಲಾಖೆಯದ್ದಾಗಿದ್ದು, ಕಾಮಗಾರಿಯ ನೇರ ಉಸ್ತುವಾರಿ ಲೋಕೋಪಯೋಗಿ ಇಲಾಖೆಯದ್ದಾಗಿದೆ. ಸುಮಾರು 10 ಕೋಟಿ ರೂ. ಅಂದಾಜು ವೆಚ್ಚದ ಈ ಭವನಕ್ಕೆ ಈಗಾಗಲೇ 2 ಕೋಟಿ ರೂ. ಬಿಡುಗಡೆ ಯಾಗಿದ್ದು, 1.84 ಕೋಟಿರೂ. ವ್ಯಯಿಸಲಾಗಿದೆ. ನಂತರ ಹಣ ಬಿಡುಗಡೆ ಯಾಗದ ಕಾರಣ ಇದು ಪಾಳು ಬೀಳುವಂತಾಗಿದೆ. ಕಳಪೆ ಕಾಮಗಾರಿಗೆ ಕಡಿವಾಣ ಹಾಕಿ ಗುಣಮಟ್ಟದ ಕಾಮಗಾರಿಗಾಗಿ ನಿರ್ಮಿಸಬೇಕು. ಬಾಕಿ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಿ ಬಸವ ಭವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ.

ತನಿಖೆ ನಡೆಸಿ: ತಾಲೂಕಿನ ವೀರಶೈವ ಲಿಂಗಾಯ ತರಕನಸಿನ ಬಸವ ಭವನ ಉದ್ಘಾಟನೆಗೂ ಮೊದಲೇ ಅದು ಬಿರುಕು ಬಿಟ್ಟಿದೆ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಭವನದ ಕಾಮಾಗಾರಿಯನ್ನು ಪೂರ್ಣಗೊಳಿಸಬೇಕು ಎಂದು ವೀರಶೈವ ಸಹಕಾರ ಸಂಘದಅಧ್ಯಕ್ಷಎನ್‌.ಸಿ.ಬಸವಣ್ಣ ಆಗ್ರಹಿಸಿದ್ದಾರೆ.

Advertisement

10 ಕೋಟಿ ರೂ. ವೆಚ್ಚದ ಭವನ ಪೂರ್ಣಗೊಳಿಸಿ.. :

ಸುಮಾರು10ಕೋಟಿ ರೂ. ಅಂದಾಜು ವೆಚ್ಚದ ಬಸವ ಭವನ ಅಪೂರ್ಣಗೊಂಡಿದೆ.ಕೇವಲ 2 ಕೋಟಿ ರೂ.ಮಾತ್ರ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ1.84ಕೋಟಿ ರೂ. ವ್ಯಯಿಸಲಾಗಿದೆ. ಅಪೂರ್ಣಗೊಂಡಿರುವಕಾಮಗಾರಿ ಕಳಪೆಯಿಂದಕೂಡಿದ್ದು, ಇದ ರಿಂದಲೇ ಗೋಡೆ ಬಿರುಕು ಬಿಟ್ಟಿದೆ.ಕನ್ನಡ ಹಾಗೂ ಸಂಸ್ಕೃತಿ ಇಲಾಖೆ, ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಉಸ್ತುವರಿ ಸಚಿವರು,ಕ್ಷೇತ್ರದ ಶಾಸಕರು ಉಳಿದ ಹಣ ಬಿಡುಗಡೆಗೆಕ್ರಮಕೈಗೊಂಡು ಬಸವಭವನವನ್ನು ಪೂರ್ಣಗೊಳಿಸಬೇಕು. ಗುಣಮಟ್ಟದಕಾಮಗಾರಿ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಬಸವ ಭವನದ ಕಟ್ಟಡ ಬಿರುಕು ಬಿಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಇಲ್ಲಿಗೆ ಬರುವುದಕ್ಕೂ ಮೊದಲೇ ಹಣವಿಲ್ಲದೇಕಾಮಗಾರಿ ಸ್ಥಗಿತವಾಗಿತ್ತು. ನಾಳೆ(ಗುರುವಾರ) ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ. ಮುತ್ತುರಾಜ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌

 

ಶ್ರೀಧರ್‌ ಆರ್‌.ಭಟ್

Advertisement

Udayavani is now on Telegram. Click here to join our channel and stay updated with the latest news.

Next