Advertisement

ಹುಬ್ಬಳ್ಳಿಯಲ್ಲಿ ವಿವಿಧೆಡೆ ಸಂಭ್ರಮದ ಬಸವ ಜಯಂತಿ

03:18 PM Apr 30, 2017 | Team Udayavani |

ಹುಬ್ಬಳ್ಳಿ: ನಗರದ ವಿವಿಧೆಡೆ ವಿವಿಧ ಸಂಘ- ಸಂಸ್ಥೆಗಳಿಂದ ಜಗಜ್ಯೋತಿ ಬಸವೇಶ್ವರರ 884ನೇ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. 

Advertisement

ಬಸವ ಸೇವಾ ಸಮಿತಿ: ಇಲ್ಲಿನ ಬಸವ ಸೇವಾ ಸಮಿತಿಯಿಂದ ಶನಿವಾರ ಬಸವ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ಅಶ್ವಾರೂಢ ಮೂರ್ತಿ ಮತ್ತು ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಮೂರುಸಾವಿರಮಠದ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.

ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಹಾಪೌರ ಡಿ.ಕೆ. ಚವ್ಹಾಣ, ಉಪಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಅಜ್ಜಪ್ಪ ಬೆಂಡಿಗೇರಿ, ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಸಚಿನ ಸಂಶಿ ಸೇರಿದಂತೆ ಮೊದಲಾದವರು ಇದ್ದರು.

ಬಸವ ಕೇಂದ್ರ: ಇಲ್ಲಿನ ಬಸವ ಕೇಂದ್ರದಿಂದ ಶನಿವಾರ ದುರ್ಗದ ಬಯಲಿನಲ್ಲಿ ಷಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನಂತರ ಬಸವ ಕೇಂದ್ರದ ಅಧ್ಯಕ್ಷ ಡಾ|ಬಿ.ವಿ. ಶಿರೂರ, ಉಪ ತಹಸೀಲ್ದಾರ ಬಸವರಾಜ ಅಂಗಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಎಸ್‌.ಬಿ. ಜೋಡಳ್ಳಿ, ಬಸವರಾಜ ಯಕಲಾಸಪುರ, ಸುರೇಶ ಹೊರಕೇರಿ ಇನ್ನಿತರರು ಇದ್ದರು. ನಂತರ ದುರ್ಗದ ಬಯಲಿನಿಂದ ಪಥ ಸಂಚಲನ ಮೂಲಕ ಬಸವವನಕ್ಕೆ ತೆರಳಿ ಅಲ್ಲಿನ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. 

Advertisement

ಬಸವ ಮಂಟಪ ಟ್ರಸ್ಟ್‌: ಇಲ್ಲಿನ ವೀರಾಪುರ ಓಣಿ ಶ್ರೀ ಗುರು ಬಸವ ಮಂಟಪ ಟ್ರಸ್ಟ್‌ ಕಮೀಟಿಯಿಂದ ಶನಿವಾರ ಬೆಳಿಗ್ಗೆ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು. ಸಿ.ವಿ.ಕರವೀರಶೆಟ್ಟರ, ಜಿ.ವಿ.ಕರವೀರಶೆಟ್ಟರ, ಎಸ್‌. ಎಂ.ಸಾದರಹಳ್ಳಿ, ಎಸ್‌.ಸಿ.ಭೂಸನೂರ, ಶಶಿಧರ ಕರವೀರಶೆಟ್ಟರನ ಇನ್ನಿತರರು ಇದ್ದರು. 

ವೀರಶೈವ ಯುವ ವೇದಿಕೆ: ಇಲ್ಲಿನ ವೀರಾಪುರ ಓಣಿ ವೀರಶೈವ ಯುವ ವೇದಿಕೆಯಿಂದ ಶನಿವಾರ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯುತ್ಸವ ನಿಮಿತ್ತ ಮೂರುಸಾವಿರ ಮಠದ ಆವರಣದಿಂದ ಎತ್ತಿನ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. ಹುಡಾ ಅಧ್ಯಕ್ಷ ಅನ್ವರ ಮುಧೋಳ, ಪಾಲಿಕೆ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ನಾಗರಾಜ ಗೌರಿ, ನಿರಂಜನ ಹಿರೇಮಠ, ಅಜ್ಜಪ್ಪ ಬೆಂಡಿಗೇರಿ, ವೀರಣ್ಣ ಶಿಂತ್ರಿ ಇನ್ನಿತರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next