ಧಾರವಾಡ: ತಾಲೂಕಿನ ಮನಗುಂಡಿ ಗ್ರಾಮದ ಚನ್ನಯ್ಯಗಿರಿಯ ಶ್ರೀಗುರು ಬಸವ ಮಹಾಮನೆಯಲ್ಲಿ 131ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಯಿತು.
ಸಾನಿಧ್ಯವಹಿಸಿದ್ದ ಬೊಮ್ಮಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಜೀವನ ಸಾರ್ಥಕವಾಗಬೇಕಾದರೆ ಬಸವತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರೊಂದಿಗೆ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪರಿಸರ ಕಾಳಜಿ ವಹಿಸಬೇಕು ಎಂದರು.
ತೇಜೋಮಯಿ ಮಾತಾಜಿ ಮಾತನಾಡಿ, ವಿವೇಕಾನಂದರ ಆದರ್ಶಗಳು ಮತ್ತು ಜೀವನವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದರು. ಮನಗುಂಡಿ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಟೆಡ್ಸ್ ನವೋದಯ ತರಬೇತಿ ಕೇಂದ್ರದ ಅಧ್ಯಕ್ಷ ಶಿವಾನಂದ ಗಾಳಿ ಉಪನ್ಯಾಸ ನೀಡಿದರು. ಲೇಖಕಿ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಕಾಯಕ ಮತ್ತು ದಾಸೋಹ ಹಾಗೂ ಬಸವತತ್ವಗಳ ಬಗ್ಗೆ ಮಾತನಾಡಿದರು.
ಸುಗುಣಾತಾಯಿ, ಸ್ವರ್ಣಭೂಮಿ ಗೋಶಾಲಾ ಸಂಸ್ಥಾಪಕ ರಾಘವೇಂದ್ರ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವಾನಂದ ಸ್ವಾಮೀಜಿ ಅವರು ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.