Advertisement

ಬಸರಕೋಡ ರಥೋತ್ಸವ ದುರಂತ : ನಾಲ್ವರ ವಿರುದ್ಧ ದೂರು ದಾಖಲು

08:38 PM Apr 28, 2021 | Ganesh Hiremath |

ವಿಜಯಪುರ : ಕೋವಿಡ್ ನಿರ್ಬಂಧ ಉಲ್ಲಂಘಿಸಿ ಬಸರಕೋಡ ಗ್ರಾಮದಲ್ಲಿ ಪವಾಡ ಬಸವೇಶ್ವರ ರಥೋತ್ಸ ನಡೆಸಿದ ಹಾಗೂ ರಥೋತ್ಸದ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಓರ್ವ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನ ಸಮಿತಿಯ ಪ್ರಮುಖರ ಮೇಲೆ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೋವಿಡ್ ನಿಷೇಧದ ನಡುವೆಯೂ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದ ಜಾತ್ರೆಯ ರಥೋತ್ಸವ ನಡೆಸಲಾಗಿದೆ. ರಥೋತ್ಸವದ ಸಂದರ್ಭದಲ್ಲಿ ಗಾಲಿಗೆ ಸಿಕ್ಕು ಕರೆಪ್ಪ ಬಸಪ್ಪ ಆರೆಶಂಕರ ಉರ್ಫ ಕಿಲ್ಲೇದ ಮೃತಪಟ್ಟಿದ್ದಾನೆ. ಈ ಘಟನೆ ಕುರಿತು ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಐ.ಬಿರಾದಾರ, ಉಪಾಧ್ಯಕ್ಷ ಎಂ.ಆರ್.ನಾಡಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ನಾಡಗೌಡ ಹಾಗೂ ಕಾರ್ಯದರ್ಶಿ ಎಸ್.ಎಂ.ಕೊಣ್ಣೂರು ಇವರ ವಿರುದ್ದ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸರಕೋಡ ಗ್ರಾ.ಪಂ. ಪಿಡಿಒ ಎಚ್.ಆರ್.ವಡ್ಡರ, ಗ್ರಾಮಲೆಕ್ಕಾಧಿಕಾರಿ ಡಿ.ಎಸ್.ಮಠಪತಿ ಇವರ ವರದಿ ಅಧರಿಸಿ ಢವಳಗಿ ಉಪ ತಹಶೀಲ್ದಾರ ಎಂ.ಎಸ್.ಜಹಗೀರದಾರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next