Advertisement

5 ಸಾವಿರ ಹಿಂದೂ ಸ್ಲಂ ಕುಟುಂಬಗಳಿಗೆ ಯತ್ನಾಳ್ ದೀಪಾವಳಿ ಉಡುಗೊರೆ

05:04 PM Oct 20, 2021 | Team Udayavani |

ವಿಜಯಪುರ : ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಗರದ ಕೊಳಚೆ ಪ್ರದೇಶದ 5 ಸಾವಿರ ಹಿಂದೂ ನಿವಾಸಿಗಳಿಗೆ ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಗೆ ಉಡುಗೊರೆ ನೀಡಲು ಮುಂದಾಗಿದ್ದಾರೆ. ಅಲ್ಲದೇ ಹಬ್ಬದ ಖಾದ್ಯ ತಯಾರಿಗೆ ಆಹಾರ ಧಾನ್ಯದ ಕಿಟ್ ಕೂಡ ಕೊಡಲು ನಿರ್ಧರಿಸಿದ್ದಾರೆ.

Advertisement

ನಗರದ ಕೊಳಚೆ ಪ್ರದೇಶದ ಹಿಂದೂ ಸಮುದಾಯದ ಬಡವರು, ನಿರ್ಗತಿಕ 5001 ಕುಟುಂಬಗಳಿಗೆ ಅ.25 ರಂದು ಹಬ್ಬಕ್ಕೆ ಮುನ್ನವೇ ದೀಪಾವಳಿ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಪವಿತ್ರ ದೀಪಾವಳಿ ದೊಡ್ಡಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿ ಹಬ್ಬಕ್ಕೆ ಸ್ಲಂ ನಿವಾಸಿಗಳಿಗೆ ಶಾಸಕ ಯತ್ನಾಳ ಉಡುಗಡೆ ನೀಡಲು ಮುಂದಾಗಿದ್ದಾರೆ.

ಪ್ರತಿ ಕುಟುಂಬಕ್ಕೆ ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಗೆ 1 ಸಾವಿರ ರೂ. ಮೊತ್ತದ ಸ್ಮಾರ್ಟ್‍ಕಾರ್ಡ್ ನೀಡಲಿದ್ದಾರೆ. ಜೊತೆಗೆ ಹಬ್ಬದ ಸವಿಯೂಟಕ್ಕಾಗಿ 1 ಕೆ.ಜಿ ಬೆಲ್ಲ, 1 ಕೆ.ಜಿಕಡ್ಲೆ ಬೇಳೆ, 1/2 ಕೆ.ಜಿ ಶುದ್ಧ ಕುಶಬಿ ಎಣ್ಣೆ, 1 ಕೆ.ಜಿ. ಗೋಧಿ ಹಿಟ್ಟು, 1 ಕೆ.ಜಿ. ಅಕ್ಕಿ, 100 ಗ್ರಾಂ ಗೋಡಂಬಿ, 100 ಗ್ರಾಂ ಬದಾಮ್ , 100 ಗ್ರಾಂ ಒಣದ್ರಾಕ್ಷಿ, ಕುಂಬಾರರ ಮಣ್ಣಿನ 5 ಹಣತೆ ಸೇರಿದಂತೆ 599 ರೂ.ಮೊತ್ತದ ಆಹಾರ ಧಾನ್ಯದ ಕಿಟ್ ಕೂಡ ಉಡುಗೊರೆಯಲ್ಲಿ ಸೇರಲಿದೆ.

ಹೀಗೆ 5001 ಕುಟುಂಬಗಳಿಗೆ ತಲಾ 1599 ರೂ. ಮೌಲ್ಯದ ದೀಪಾವಳಿ ಉಡುಗೊರೆ ನೀಡಲಿದ್ದಾರೆ.
ಬಟ್ಟೆ ಖರೀದಿಗೆ ಸ್ಮಾರ್ಟ್‍ಕಾರ್ಡ್‍ನ್ನು ಬಳಸಿ ಶ್ರೀಸಿದ್ಧೇಶ್ವರ ದೇವಸ್ಥಾನದ ಹತ್ತಿರ ಇರುವ ಭೀಮಾ ಕಾಂಪ್ಲೆಕ್ಸ್ ನಲ್ಲಿರುವ ಸಿದ್ಧ ಉಡುಪಿನ ಮಳಿಗೆಯಲ್ಲಿ ಬಟ್ಟೆ ಖರೀದಿಸಬಹುದು. ಇದೇ ಕಾರ್ಡ್ ಮೂಲಕ 599 ರೂ. ಮೌಲ್ಯದ ಆಹಾರ ಕಿಟ್‍ಗಳನ್ನು ಎಸ್ ಮಾರ್ಟ್ ಕೇಂದ್ರಗಳಿರುವ ಕಾಮತ್ ಹೊಟೇಲ್, ಶ್ರೀಸಿದ್ಧೇಶ್ವರ ದೇವಸ್ಥಾನ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಸ್ ಹೈಪರ್ ಮಾರ್ಟ್‍ನಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next