Advertisement
“ದಿ ಬ್ಯಾರೆನ್ ಐಲ್ಯಾಂಡ್’ ಹೆಸರಿನ ಜ್ವಾಲಾಮುಖೀಯು ಮತ್ತಷ್ಟು ಸಕ್ರಿಯವಾಗಿದ್ದು, ಮತ್ತೂಮ್ಮೆ ಹೊಗೆ ಮತ್ತು ಲಾವಾರಸವನ್ನು ಉಗುಳುತ್ತಿದೆ ಎಂದು ರಾಷ್ಟ್ರೀಯ ಸಾಗರವಿಜ್ಞಾನ ಸಂಸ್ಥೆಯ ಡಾ. ಅಭಯ್ ಮುಧೋಲ್ಕರ್ ನೇತೃತ್ವದ ವಿಜ್ಞಾನಿಗಳ ತಂಡ ತಿಳಿಸಿದೆ. ಜ್ವಾಲಾಮುಖೀಯ ಸುತ್ತಮುತ್ತಲ ಪ್ರದೇಶದಲ್ಲಿನ ನೀರು ಹಾಗೂ ಕೆಸರಿನ ಮಾದರಿಯನ್ನು ವಿಜ್ಞಾನಿಗಳು ಪರೀಕ್ಷಿಸಿದ್ದು, ಅದರಲ್ಲಿ ಕಲ್ಲಿದ್ದಲು ಮಾದರಿಯ ಕಪ್ಪು ಬಣ್ಣದ ಪೈರೋಕ್ಲಾಸ್ಟಿಕ್ ಅಂಶವಿರುವುದನ್ನು ಪತ್ತೆಹಚ್ಚಿದ್ದಾರೆ. ಈ ಅಂಶವು ಜ್ವಾಲಾಮುಖೀ ಸ್ಫೋಟದ ಸುಳಿವನ್ನು ನೀಡುವಂಥದ್ದು. ಇದರ ಜತೆಗೆ, ಅಗ್ನಿಪರ್ವತದ ಮೇಲಿನ ಆಗಸದಲ್ಲಿ ದಟ್ಟ ಹೊಗೆಯು ಆವರಿಸಿದ್ದು ಕೂಡ ಇದಕ್ಕೆ ಪುಷ್ಟಿನೀಡಿದೆ. Advertisement
ಬೆಂಕಿ ಉಗುಳುತ್ತಿರುವ ಭಾರತದ ಅಗ್ನಿಪರ್ವತ
03:45 AM Feb 18, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.