Advertisement

ಆ. 4: ಬಂಟರ ಭವನದಲ್ಲಿ  ಶ್ರೀನಿವಾಸ ಕಲ್ಯಾಣೋತ್ಸವ

01:33 PM Jul 29, 2018 | Team Udayavani |

ಮುಂಬಯಿ: ಅಳಿಯ ಕಟ್ಟು ಸಂಸ್ಕೃತಿಯ ಉಗಮ ಸಾœನವಾದ ತೌಳವ ಸಾಮ್ರಾಜ್ಯ, ದೇಗುಲಗಳ ಮೂಲ ನೆಲೆಬೀಡಾದ ಶ್ರೀ ಬಾಕೂìರು ಮೂಲಸ್ಥಾನವು ಶ್ರೀ ಬಾರ್ಕೂರು ಮಹಾಸಂಸ್ಥಾನಮ್‌ ಎಂಬ ಹೆಸರಿನಲ್ಲಿ ಪುನರುತ್ಥಾನಗೊಂಡು ವರ್ಷ ಕಳೆದಿದೆ. ಪರಮಪೂಜ್ಯ ಶ್ರೀ ವಿದ್ಯಾವಾಚಸ್ಪತಿ ಡಾ| ಶ್ರೀ ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳವರ ದಿವ್ಯ ಮಾರ್ಗದರ್ಶನದಲ್ಲಿ ಬಂಟರ ಮಹಾಸಂಸ್ಥಾನವು 9 ಮಂದಿ ವಿಶ್ವಸ್ತರನ್ನು ಒಳಗೊಂಡಿರುವುದಲ್ಲದೆ 29 ಮಂದಿ ನಿರ್ದೇಶಕರುಗಳ ನಾಯಕತ್ವದಲ್ಲಿ ಭವನ ನಿರ್ಮಾಣ ಕಾರ್ಯಯೋಜನೆಯಲ್ಲಿ ತೊಡಗಿದೆ. ಶ್ರೀ ಬಾರ್ಕೂರು ಮಹಾ ಸಂಸ್ಥಾನದ ಮುಂಬಯಿ ಘಟಕ ಆನಂಭ ವಾದಂದಿನಿಂದ ಪ್ರತೀ ವರ್ಷ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ವಿಜೃಂ ಭಣೆಯಿಂದ ಆಚರಿಸಲಾಗುತ್ತಿದೆ.

Advertisement

ಈ ಬಾರಿ ಆ. 4 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.30 ರವರೆಗೆ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದ್ದು, ಅಪರಾಹ್ನ 2.30 ರಿಂದ ಗುರುವಂದನೆ ನಡೆಯಲಿದೆ. ಬಾಕೂìರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ಅಂದು ಆಶೀರ್ವಚನ ನೀಡಲಿದ್ದಾರೆ.

ಮಧ್ಯಾಹ್ನ ಅನ್ನಪ್ರಸಾದದ ಬಳಿಕ ಬೆಂಗಳೂರಿನ ರಾಜೀವ್‌ ಬಿಜಾಡಿ ಬಳಗದವರಿಂದ ಗಾನ ಲಹರಿ ಹಾಗೂ ಶ್ರೀಪಾದರಿಂದ ಗಾನ ವಿಶ್ಲೇಷಣೆ ನಡೆಯಲಿದೆ. ಅಪರಾಹ್ನ 3 ರಿಂದ ಸಂಜೆ 4.30 ರವರೆಗೆ ಬಾಕೂìರು ಮಹಾಸಂಸ್ಥಾನಮ್‌ ಇದರ ವಿಶ್ವಸ್ಥ ಹಾಗೂ ಸಂಸ್ಥಾನದ ಮುಂಬಯಿ ಘಟಕದ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಎಸ್‌. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಅತಿಥಿ-ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಭಗವದ್ಭಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವಂತೆ ಶ್ರೀ ಬಾರ್ಕೂರು ಮಹಾಸಂಸ್ಥಾನಮ್‌ ಮುಂಬಯಿ ಘಟಕದ ಸಮಿತಿಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next